September 14, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಹಳೆಕೋಟೆಯಲ್ಲಿ ‘ಡೋಲಿ’ ಕಟ್ಟಡದಲ್ಲಿ ಅನಧಿಕೃತ ಕಾಮಗಾರಿ: ಪಟ್ಟಣ ಪಂಚಾಯತ್ ನಿಂದ ಅಂತಿಮ ನೋಟಿಸ್ ಜಾರಿ

ಬೆಳ್ತಂಗಡಿ : ಅನಧಿಕೃತ ಕಟ್ಟಡದಲ್ಲಿ ಯಾವುದೇ ಅನುಮತಿ ಇಲ್ಲದೆ ಕಾಮಗಾರಿ ಕೆಲಸ ಮಾಡುತ್ತಿರುವುದಕ್ಕೆ ಪಟ್ಟಣ ಪಂಚಾಯತ್ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಯಾವುದೇ ಕಾನೂನು ಪಾಲಿಸದೆ ಮತ್ತೆ ಕಾಮಗಾರಿ ಕೆಲಸ ಮಾಡುತ್ತಿರುವುದಕ್ಕೆ ಪಟ್ಟಣ ಪಂಚಾಯತ್ ‘ಡೋಲಿ’ ಕಟ್ಟಡದ ಮಾಲೀಕರಿಗೆ ಅಂತಿಮ ನೋಟಿಸ್ ಜಾರಿ ಮಾಡಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಳೇಕೋಟೆ ಬಳಿಯ ಸಾಯಿಮಂದಿರದ ಮುಂಭಾಗದಲ್ಲಿರುವ ‘ವಲೇರಿಯನ್ ಪಾಯಸ್’ ಎಂಬವರಿಗೆ ಸೇರಿದ ‘ಡೋಲಿ’ ಹೆಸರಿನ ಅನಧಿಕೃತ ಕಟ್ಟಡದ ಕೆಲಸವನ್ನು ಕಳೆದ ಜನವರಿ ತಿಂಗಳಿಂದ ಕಾನೂನು ಮೀರಿ ರಾಜರೋಷವಾಗಿ ಕಾಮಗಾರಿ ಮಾಡುತ್ತಿದ್ದರು. ಈ ಬಗ್ಗೆ ದೂರು ಬಂದ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ರೂ ಕ್ಯಾರೆ ಮಾಡದೆ ಮತ್ತೆ ಕಾಮಗಾರಿ ಕೆಲಸ ರಾಜರೋಷವಾಗಿ ಮುಂದುವರಿಸಿದ್ದರಿಂದ ಜು.29 ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ರಾಜೇಶ್. ಕೆ ಅವರು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.

ಅನಧಿಕೃತ ‘ಡೋಲಿ’ ಕಟ್ಟಡದಲ್ಲಿ ಕಾಮಗಾರಿ ಕೆಲಸ ಮಾಡುತ್ತಿದ್ದ ಬಗ್ಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧಿಕಾರಿಗಳು 28-01-2026 ಮತ್ತು 14-05-2026 ನೋಟಿಸ್ ಜಾರಿ ಮಾಡಿದ್ದರೂ ಕೂಡ ಕಾನೂನಿಗೆ ಪಾಲಿಸದೆ ಅಕ್ರಮ ಕೆಲಸವನ್ನು ಮುಂದುವರಿಸಿದ್ದ ‘ಡೋಲಿ’ ಕಟ್ಟಡದ ಮಾಲೀಕ ವಲೇರಿಯನ್ ಪಾಯಸ್ ವಿರುದ್ಧ ಪರವಾನಿಗೆ ಪಡೆಯದೆ ನಿರ್ವಹಿಸುತ್ತಿರುವ ಕಟ್ಟಡವನ್ನು ಪುರಸಭಾ ಅಧಿನಿಯಮ 1964ರ ಪ್ರಕರಣ 108ರಂತೆ ಯಾಕೆ ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟೀಸು ತಲುಪಿದ 3 ದಿನಗಳೊಳಗೆ ಸೂಕ್ತ ಸಮಜಾಯಿಷಿಕೆಯನ್ನು ನೀಡಲು ತಿಳಿಸಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜು.29 ರಂದು ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ.

Related posts

ಉಜಿರೆ: ಶ್ರೀ ಧ.ಮ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನ್ಯೂ ಬೈನರಿ ಅಕ್ರಿಡಿಟೇಶನ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ಉಪನ್ಯಾಸ

Suddi Udaya

ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಉಷಾ. ಕೆ ರವರು ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ

Suddi Udaya

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರಂಜನ್ ಜಿ ಗೌಡ, ಹಾಗೂ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ನೇಮಕ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ

Suddi Udaya

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ

Suddi Udaya
error: Content is protected !!