24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.2 : ಬಜಿರೆ ಮುದ್ದಾಡಿಯ ಮಂಗಿನಿಬೆಟ್ಟು ಗದ್ದೆಯಲ್ಲಿ ಆಟಿಡೊಂಜಿ ಕೆಸರ್‌ದ ಗೊಬ್ಬು 2026

ಬಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ. ಟ್ರಸ್ಟ್ ಗುರುವಾಯನಕೆರೆ, ಆಟಿಡೊಂಜಿ ಕೆಸರ್‌ದ ಗೊಬ್ಬು ಆಚರಣಾ ಸಮಿತಿ ಬಜಿರೆ ಶ್ರೀ ವಿಶ್ವೇಶ್ವರ ಭಜನಾ ಮಂಡಳಿ (ರಿ.) ಬಜಿರೆ, ಬತ್ತಾರು ಪ್ರಗತಿಬಂಧು ಜ್ಞಾನ ವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಬಜಿರೆ, ವಿಘ್ನೇಶ್ವರ ಫ್ರೆಂಡ್ಸ್ ಕ್ಲಬ್ ಬಜಿರೆ, ಯುವಶಕ್ತಿ ಸ್ಪೋರ್ಟ್ಸ್ ಕ್ಲಬ್, ಬಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ವರ್ಷದ ಆಟಿಡೊಂಜಿ ಕೆಸರ್‌ದ ಗೊಬ್ಬು ೨೦೨೬ ಕಾರ್ಯಕ್ರಮವು ಆಗಸ್ಟ್ ೨ರಂದು ಬಜಿರೆ ಮುದ್ದಾಡಿಯ ಮಂಗಿನಿಬೆಟ್ಟು ಗದ್ದೆಯಲ್ಲಿ ಜರಗಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಮುದ್ದಾಡಿಯ ಆಡಳಿತ ಮೊಕ್ತೇಸರರಾದ ಸುರೇಶ್ ಕುಮಾರ್ ಪೆರ್ಮಾಣುಗುತ್ತು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ ವಹಿಸಲಿದ್ದಾರೆ. ಕೆಸರು ಗದ್ದೆಯ ಉದ್ಘಾಟನೆಯನ್ನು ಯುವ ವಕೀಲರಾದ ಶ್ರೀಮತಿ ಸಹನಾ ಕುಂದರ್ ಸೂಡ, ಗುಂಡೂರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯೋಜನೆಯ ಯೋಜನಾಧಿಕಾರಿ ಹರೀಶ್ ಕೆ., ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮೂಡುಬಿದ್ರೆಯ ಅಧ್ಯಕ್ಷ ಸುಧೀರ್ ಕುಮಾರ್ ಇಂದ್ರ, ಸುರಭಿ ಬಜಿರೆ, ವೇಣೂರು ಗ್ರಾ.ಪಂ. ಸದಸ್ಯರಾದ ಅರುಣ್ ಕ್ರಾಸ್ತಾ, ಪಾಟಿಗೆರೆಬೆಟ್ಟು, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ. ವೇಣೂರು ಗ್ರಾ.ಪಂ. ಸದಸ್ಯರಾದ ಶ್ರೀಮತಿ ಲೀಲಾವತಿ ಆನಂದ ಪೂಜಾರಿ, ಕೇಂಪ್ಲಬರಿ, ಲೋಕಯ್ಯ ಪೂಜಾರಿ ಕಂಗಿತ್ತಿಲು, ಸುನೀಲ್ ಪೂಜಾರಿ, ಜತನಂಗೇರಿಕೋಡಿ, ಶ್ರೀಮತಿ ಸುಜಾತ ಹಾಗೂ ಶ್ರೀಮತಿ ಸುಲೋಚನ ಎಸ್. ಹೆಗ್ಡೆ, ಮಂಗಿನಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ ಸಿ.ಎ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ದೀಪಕ್ ಹೆಗ್ಡೆ,
ವೈದ್ಯಕೀಯ ಶಿಕ್ಷಣ ಸಾಧಕ ಧೀರಜ್ ಹೆಗ್ಡೆ, ಎಸ್ಸೆಸ್ಸೆಲ್ಸಿಯ ಅತೀ ಹೆಚ್ಚು ಅಂಕ ಗಳಿಸಿದ ಸಮೃದ್ಧಿ ಜೈನ್ ಕೊಡಂಗೆ,
ಪ್ರಣವ್ ಎ. ಬಂಜನ್ ಇವರನ್ನು ವೇದಿಕೆಯಲ್ಲಿ ಗೌರವಿಸಲಾಗುವುದು.


ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾ ಡಾ| ಶಾಂತಿಪ್ರಸಾದ್, ‘ನಮನ’ ಕ್ಲಿನಿಕ್ ವೇಣೂರು, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಪ್ರಭಾಕರ ಹೆಗ್ಡೆ, ಹಟ್ಟಾಜೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವಿಜಯ ಗೌಡ, ವೇಣೂರು, ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್. ಕೋಟ್ಯಾನ್, ಹಿಂದೂ ರುದ್ರಭೂಮಿ ಬಜಿರೆಯ ಅಧ್ಯಕ್ಷ ಭಾಸ್ಕರ ಪೈ ವೇಣೂರು, ಬಲ್ಲಾಳ್ ಕ್ಯಾ±Æ್ಯ ಕೊರಗಟ್ಟೆಯ ರಾಘವೇಂದ್ರ ಬಲ್ಲಾಳ್, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಭಾಗವಹಿಸಲಿದ್ದಾರೆ.


ಈ ಸಂದರ್ಭ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುತ್ತಿರುವ ಆಟಿಡೊಂಜಿ ಕೆಸರ್ ಗೊಬ್ಬು ಸಮಿತಿ ಬಜಿರೆಯ ಗೌರವಾಧ್ಯಕ್ಷರಾದ ಅರುಣ್ ಕುಮಾರ್, ಐಂದಲ್ಕೆ, ಉಪಾಧ್ಯಕ್ಷ ವಿಶ್ವನಾಥ ಆಚಾರ್, ಹಿದೆಕ್ಯಾರು, ಅಧ್ಯಕ್ಷರಾದ ಶ್ರೀ ಜಯಶಂಕರ ಹೆಗ್ಡೆ ಮಂಗಿನಿ, ಕಾರ್ಯದರ್ಶಿ ಗೋಪಾಲ ಆಚಾರ್ಯ ಕೊಡಪಟ್ಟ, ರಕ್ಷಿತ್ ಪುನ್ಕೆದಡಿ, ಕೋಶಾಧಿಕಾರಿ ನಾರಾಯಣ ಆರ್. ಪೂಜಾರಿ, ಬಜಿರೆ ಬತ್ತಾರು ವಿಘ್ನೇಶ್ವರ ಭಜನಾ ಮಂಡಳಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಗಿರೀಶ್ ಕುಲಾಲ್, ವಿಘ್ನೇಶ್ವರ ಫ್ರೆಂಡ್ಸ್ ಬಜಿರೆಯ ಅಧ್ಯಕ್ಷ ಸುದರ್ಶನ ಹೆಗ್ಡೆ, ಯುವಶಕ್ತಿ ಸ್ಪೋಟ್ಸ್ ಕ್ಲಬ್ ಬಜಿರೆಯ ಸಂಚಾಲಕ ರಕ್ಷಿತ್ ಬಜಿರೆ, ಜನಜಾಗೃತಿ ಗ್ರಾಮ ಸಮಿತಿ ಬಜಿರೆಯ ಅಶೋಕ್ ಪೂಜಾರಿ ಕಜಿಪಟ್ಟ, ಸೇವಾ ಪ್ರತಿನಿಧಿ ರೂಪಚಂದನ, ಶ್ರೀ ಕ್ಷೇಧಗ್ರಾ.ಯೋಜನೆಯ ಮೇಲ್ವಿಚಾರಕಿ ಸುಜಾತ ಸ್ವಾಗತಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾಕೂಟಗಳು ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಜೀವಿತಾವಧಿಯಲ್ಲಿ ಹೇಗೆ ಬದುಕಿದ್ದಾನೆ ಎಂಬುದು ಬಹಳ ಮುಖ್ಯ: ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ – ತಾ.ಪಂ ವಿಶ್ರಾಂತ ಅಧೀಕ್ಷಕ‌ ಪ್ರಶಾಂತ್ ಬಳಂಜ ಅವರಿಂದ ವಿಶಿಷ್ಟ ರೀತಿಯ ಕೃತಜ್ಞತಾ ಕಾರ್ಯಕ್ರಮ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ದೇಜಮ್ಮ ನಿಧನ

Suddi Udaya

ಧಮ೯ಸ್ಥಳ ಬುರುಡೆ ಷಡ್ಯಂತ್ರ ಪ್ರಕರಣ: ವರದಿಯ ಆದೇಶ ಡಿ.29ಕ್ಕೆ ಮುಂದೂಡಿದ ನ್ಯಾಯಾಲಯ

Suddi Udaya

ಅಕ್ರಮವಾಗಿ ಮನೆಯಲ್ಲಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳು ವಶ

Suddi Udaya

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂ.ಮಾ. ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya
error: Content is protected !!