24.7 C
ಪುತ್ತೂರು, ಬೆಳ್ತಂಗಡಿ
September 14, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಮಾದಕ ವಸ್ತು ಮಾರಾಟ ಯತ್ನ: ವಿದೇಶಕ್ಕೆ ತೆರಳಬೇಕಿದ್ದ ಯುವಕ ಜೈಲುಪಾಲು

ಬೆಳ್ತಂಗಡಿ : ಅಕ್ರಮವಾಗಿ ಮಾದಕವಸ್ತು ಖರೀದಿಸಿ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕವಸ್ತು ಗಾಂಜಾ ಮತ್ತು ಎಮ್.ಡಿ.ಎಮ್.ಎ(MDMA) ಯನ್ನು ವಶಪಡಿಸಿಕೊಂಡಿದ್ದು, ಇಂದು ದುಬೈಗೆ ಉದ್ಯೋಗಕ್ಕೆ ಹೋಗಬೇಕಾದ ಓರ್ವ ಯುವಕ ಜೈಲುಪಾಲಾಗಿದ್ದಾನೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ ಹಾಗೂ ಸಿಬ್ಬಂದಿ ಜುಲೈ 29ರಂದು ರಾತ್ರಿ ಸುಮಾರು 8 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದ ಖಾಸಗಿ ಕಟ್ಟಡದ ಮುಂಭಾಗದಲ್ಲಿ KA-18-A-7203 ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸ್ ಜೀಪನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಹಿಡಿದು ವಿಚಾರಣೆ ನಡೆಸಿದಾಗ ಕುವೆಟ್ಟು ಗ್ರಾಮದ ಸುಣ್ಣತ್ ಕೆರೆ ನಿವಾಸಿ ಇಸ್ಮಾಯಿಲ್ ಮಗ ತ್ವಲಹ್ @ ಅನ್ವರ್@ ಅನ್ಸಾರ್(21) ಎಂದು ತಿಳಿಸಿದ್ದು. ಬಳಿಕ ಮತ್ತಷ್ಟು ವಿಚಾರಣೆ ನಡೆಸಿದಾಗ ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್(31) ಎಂಬಾತನಿಗೆ 20 ಸಾವಿರ ಮುಂಗಡ ಹಣ ನೀಡಿ ಗಾಂಜಾ ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ.

ಹಮ್ಜತ್ ಕರಾರ್ KA-21-MA-4990 ಕಾರಿನಲ್ಲಿ ಬಂದು 500 ಗ್ರಾಂ ಗಾಂಜಾವನ್ನು ನೀಡಿದ್ದು, ಪೊಲೀಸರು ಬರುತ್ತಿರುವುದನ್ನು ಕಂಡು ಕಾರನ್ನು ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ. ಬಳಿಕ ಕಾರನ್ನು ತಪಾಸಣೆ ನಡೆಸಿದಾಗ ಕಾರಿನೊಳಗೆ 7 ಲಕ್ಷದ 60 ಸಾವಿರ ಮೌಲ್ಯದ 76 ಗ್ರಾಂ ಎಮ್.ಡಿ.ಎಮ್.ಎ ಮಾದಕ ವಸ್ತು ಪತ್ತೆಯಾಗಿದೆ. ಆರೋಪಿ ತ್ವಲಹ್@ಅನ್ವರ್@ಅನ್ಸಾರ್ ಎಂಬಾತನನ್ನು ತಪಾಸಣೆ ಮಾಡಿದಾಗ ಆತನ ಬಳಿ ಸುಮಾರು 1,498 ರೂಪಾಯಿ ಮೌಲ್ಯದ 20 ಗ್ರಾಂ ಗಾಂಜಾ, 30 ಸಾವಿರ ಮೌಲ್ಯದ ಒಂದು ಮೊಬೈಲ್, 200 ರೂಪಾಯಿ ಮೌಲ್ಯದ ಇತರ ವಸ್ತುಗಳು ಪತ್ತೆಯಾಗಿದೆ. 20 ಗ್ರಾಂ ಗಾಂಜಾ, 76 ಗ್ರಾಂ MDMA ಮಾದಕವಸ್ತು, ಒಂದು KA-21-MA-4990 ಕಾರು, ಒಂದು KA-18-A-7203 ಆಟೋ ರಿಕ್ಷಾ, ಒಂದು ಮೊಬೈಲ್ ಫೋನ್ ಸೇರಿ ಒಟ್ಟು 15 ಲಕ್ಷದ 41 ಸಾವಿರದ 698 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಹಾಗೂ 27Aರ ಅಡಿಯಲ್ಲಿ ಹಮ್ಜತ್ ಕರಾರ್ (31) ಮತ್ತು ತ್ವಲಹ್ @ ಅನ್ವರ್@ ಅನ್ಸಾರ್(21) ವಿರುದ್ಧ ಜು.29 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ತ್ವಲಹ್ @ ಅನ್ವರ್@ ಅನ್ಸಾರ್(21) ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಜು.30 ರಂದು ಸಂಜೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದುಬೈಗೆ ಹೋಗಬೇಕಾದವ ಜೈಲಿಗೆ:- ಗಾಂಜಾ ಮತ್ತು ಎಮ್.ಡಿ.ಎಮ್.ಎ ಮಾರಾಟ ಮಾಡಲು ಯತ್ನಿಸಿ ಬೆಳ್ತಂಗಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಕುವೆಟ್ಟು ಗ್ರಾಮದ ಸುಣ್ಣತ್ ಕೆರೆ ಇಸ್ಮಾಯಿಲ್ ಮಗ ತ್ವಲಹ್ @ ಅನ್ವರ್@ ಅನ್ಸಾರ್(21) ಎಂಬಾತ ಜು.30 (ಇಂದು) ಸಂಜೆ ದುಬೈ ಉದ್ಯೋಗಕ್ಕಾಗಿ ಹೊಗಲು ತಯಾರಿ ಮಾಡಿದ್ದಾ ಆದ್ರೆ ಮಾದಕವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದು ಸಂಜೆ ಜೈಲುಪಾಲಾಗುವಂತಾಗಿದೆ.ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ಮತ್ತು ಸಿಕಂದರ್ ಪಾಷ ನೇತೃತ್ವದಲ್ಲಿ ಸಿಬ್ಬಂದಿ ಸತೀಶ್ ನಾಯ್ಕ್,ಪ್ರಕಾಶ್ ಪೂಜಾರಿ,ಶ್ರೀನಿವಾಸ್ ,ಹನುಮಂತ, ನಂದ, ಜಗದೀಶ್ ಅತ್ತಾಜೆ, ಪ್ರಮೋದ್,ದುಂಡಪ್ಪ ಪೂಜಾರಿ,ಶ್ರೀನಿವಾಸ್, ಚಾಲಕ ಸತೀಶ್ ಹಾಗೂ ಸೋಕೋ ತಂಡದ ಕಾವ್ಯಶ್ರೀ, ಅರ್ಪಿತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣಾ ತರಬೇತಿ

Suddi Udaya

ಪಡಂಗಡಿ: ಸಿಡಿಲು ಬಡಿದು ಕಟ್ಟಡಕ್ಕೆ ಬೆಂಕಿ

Suddi Udaya

ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ- ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಹಾಟ್‌ಮಿಕ್ಸ್ ಘಟಕದ ವಿರುದ್ಧ ಪಿಐಎಲ್ ಸಲ್ಲಿಕೆ : ಹೈಕೋರ್ಟ್ ನಿಂದ ನೋಟಿಸ್ ಆದೇಶ

Suddi Udaya

ಅಂತ ರಾಜ್ಯಗಣಿತ ಜ್ಞಾನತರಬೇತಿ ಕಾರ್ಯಕ್ರಮ

Suddi Udaya

ಸುಲ್ಕೇರಿ ಲಯನ್ಸ್ ಕ್ಲಬ್‌ನ ನೂತನ ಪದಗ್ರಹಣ ಸಮಾರಂಭ

Suddi Udaya
error: Content is protected !!