22.6 C
ಪುತ್ತೂರು, ಬೆಳ್ತಂಗಡಿ
September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಕ್ಯಪದವು ಲಾವಣ್ಯ ಹತ್ಯೆ ಆರೋಪಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ: ಕಕ್ಯಪದವು ಲಾವಣ್ಯ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಚೇತನ್ ಗೆ (22) ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜು.16ರಂದು ಕಕ್ಯಪದವಿನ ನಿವಾಸಿ ಲಾವಣ್ಯ (21) ಸಂಜೆ ತನ್ನೂರಿಗೆ ತೆರಳಲೆಂದು ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕುಳಿತಿದ್ದ ವೇಳೆ ಆರೋಪಿ ಚೇತನ್ ಆಗಮಿಸಿ ಆಕೆಯನ್ನು ತಲವಾರಿನಿಂದ ಹತ್ಯೆಮಾಡಿ ಪರಾರಿಯಾಗಿದ್ದ. ಇದರ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮರುದಿನ ಮಂಗಳೂರಿನ ಪಚ್ಚನಾಡಿಯಲ್ಲಿ ಈತ ಪತ್ತೆಯಾಗಿದ್ದು, ಕೂಡಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆ ವೇಳೆ ಆರೋಪಿ ತಾನು ಇಲಿಪಾಷಾಣ ಸೇವಿಸಿದ್ದಾಗಿ ಹೇಳಿದ್ದು, ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವೆನ್ನಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು 11 ದಿನಗಳ ಬಳಿಕ ಗುಣಮುಖನಾಗಿರುವ ಕುರಿತು ವೈದ್ಯರು ತಿಳಿಸಿದ ನಂತದ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ ನ್ಯಾಯಾಲಯ ಆತನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಈ ವೇಳೆ ತನಿಖಾಧಿಕಾರಿಗಳು ಕೃತ್ಯ ನಡೆದ ಜಾಗ, ಆಯುಧ ಖರೀದಿಸಿದ ಜಾಗ ಸಹಿತ ಹಲವೆಡೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಿದ್ದರು. ಒಂದು ದಿವಸ ಮೊದಲೇ ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.

Related posts

ವಾಣಿ ಕಾಲೇಜಿನ ವಿದ್ಯಾರ್ಥಿ ಉದಿತ್ ರೈ ತ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆಗೆ (ರಾಜ್ಯಪಠ್ಯಕ್ರಮ) ಶೇ. 100 ಫಲಿತಾಂಶ

Suddi Udaya

ಬಂದಾರು: ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ

Suddi Udaya

ನಿಡ್ಲೆ : ಅಗ್ರಿಲೀಫ್ ಎಕ್ಸ್‌ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಅಂತರಾಷ್ಟ್ರೀಯ ಮನ್ನಣೆ

Suddi Udaya

ಸಚಿವ ದಿನೇಶ್ ಗುಂಡೂರಾವ್‌ರಿಂದ ಉಜಿರೆ ಮತ್ತು ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ

Suddi Udaya

ಕಾಡಾನೆ ದಾಳಿ, ಕೃಷಿಕರ ಭಾವನೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರಕಾರ : ಹರೀಶ್ ಪೂಂಜ ಆಕ್ರೋಶ

Suddi Udaya
error: Content is protected !!