September 17, 2026
ಗ್ರಾಮಾಂತರ ಸುದ್ದಿ

ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

ಬೆಳ್ತಂಗಡಿ; ನಿವೃತ್ತ ಶಿಕ್ಷಕ, ಸಂಗೀತ ಗುರು, ಕವಿಗಳೂ ಆಗಿರುವ ಶಂಕರ್ ತಾಮನ್ಕರ್ ಮುಂಡಾಜೆ ತನ್ನ ತಂದೆ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯವನ್ನು ಆ. 2 ರಂದು ಅರ್ಹರಿಗೆ ಹಸ್ತಾಂತರಿಸಿದರು.

ಶೈಕ್ಷಣಿಕ ಸಹಾಯದಡಿ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳನ್ನು ಅವರದ್ದೇ ಮಾನದಂಡವಾದ ಪ್ರತಿಭೆ, ಆರ್ಥಿಕ ಹಿಂದುಳಿದಿರುವಿಕೆಯಂತೆ ಗುರುತಿಸಿ 6 ಮಂದಿಗೆ 30 ಸಾವಿರ ರೂ.ಗಳು, ಗರ್ಭಾವಸ್ಥೆಯಿಂದಲೇ ಅನಾರೋಗ್ಯಕ್ಕೆ ತುತ್ತಾಗಿ ಇದೀಗ ಚಿಕಿತ್ಸೆಯಲ್ಲಿರುವ ಪುಟಾಣಿ ಮಗುವಿನ ಚಿಕಿತ್ಸೆಗೆ, ವೈಯುಕ್ತಿಕ ಸಮಸ್ಯೆಗಳಿದ್ದರೂ ಸಮಾಜ‌ಸೇವೆಯಲ್ಲಿ ನಿತರರಾಗಿರುವ ವ್ಯಕ್ತಿಯೊಬ್ಬರಿಗೆ ಪ್ರೋತ್ಸಾಹಧನ, ಹಾಗೂ ಕ್ರೀಡಾ ಸಂಸ್ಥೆಗೆ ಸಹಾಯ ಎಂಬಂತೆ 17 ಸಾವಿರ, ಹೀಗೆ ಒಟ್ಟು 47 ಸಾವಿರ ರೂ. ಗಳನ್ನು ಅವರು ವಿತರಿಸಿದರು. ಮುಂಡಾಜೆಯ ಅವರ ‘ಪರಂಪರಾ’ ಮನೆಯಲ್ಲಿ ಈ ಸರಳ ಕಾರ್ಯಕ್ರಮ ನಡೆಯಿತು.
ಮುಂಡಾಜೆಯ ಉದ್ಯಮಿ ಹಾಗೂ ಸಮಾಜ ಸೇವಕ ಅರೆಕ್ಕಲ್ ರಾಮಚಂದ್ರ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ರಾಘವೇಂದ್ರ ತಾಮನ್ಕರ್ ಮೈಸೂರು, ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್, ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಬಂಗೇರ, ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ, ಶಂಕರ್ ತಾಮನ್ಕರ್ ಮತ್ತು ಪತ್ನಿ ಸ್ವಾತಿ ತಾಮನ್ಕರ್, ಪುತ್ರಿ ನವನಿ ತಾಮನ್ಕರ್, ಅಳಿಯ ಪ್ರವೀಣ್, ತಾಮನ್ಕರ್ ಬಂಧುಗಳಾದ ಪ್ರಸನ್ನ ತಾಮನ್ಕರ್, ಯಶ್ ತಾಮನ್ಕರ್, ಚೇತನ್ ತಾಮನ್ಕರ್ ಮೈಸೂರು, ವಾಸುದೇವ ಗೋಖಲೆ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.

ಬಾಕ್ಸ್:
1996 ರಿಂದ ಸದ್ದಿಲ್ಲದೆ ನಡೆಯುತ್ತಿದೆ ಸೇವೆ;
ಬಹುಮುಖ ಪ್ರತಿಭಾನ್ವಿತರಾಗಿರುವ ಶಂಕರ್ ತಾಮನ್ಕರ್ ಅವರು ಸರಕಾರಿ ಸೇವೆಗೆ ಸೇರಿದ 1996 ರಿಂದಲೇ ಸದ್ದಿಲ್ಲದೆ ಈ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. 1500 ರೂ. ನೆರವಿನಿಂದ ಆರಂಭಗೊಂಡದ್ದು ಇಂದು ದೊಡ್ಡ ಮೊತ್ತದವರೆಗೆ ಬೆಳೆದಿದೆ.‌ಅವರ ಸೇವೆಗೆ ಪುತ್ರಿ ಮತ್ತು ಅಳಿಯ ಕೂಡ ಸಾತ್ ನೀಡಲು ಆರಂಭಿಸಿದ್ದಾರೆ.

Related posts

ಬೆಳ್ತಂಗಡಿಯಲ್ಲಿ ಮೊಬೈಲ್ ಅಸೋಸಿಯೇಶನ್ ನಿಂದ ಲಕ್ಕಿ ಕೂಪನ್ ಡ್ರಾ

Suddi Udaya

KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ಮಾ.18ರಿಂದ ವಿದ್ವತ್‌ ಕಾಲೇಜಿನಲ್ಲಿ ಕ್ರ್ಯಾಶ್ ಕೋರ್ಸ್ ಆರಂಭ

Suddi Udaya

ನಿಡ್ಲೆ ಪ್ರೇರಣ ಸಂಜೀವಿನಿ ಹಾಗೂ ಕಳೆಂಜ ಸಂಜೀವಿನಿ ಒಕ್ಕೂಟದಿಂದ ಸಮಗ್ರ ಕೃಷಿ ಸಮೂಹ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಉಜಿರೆಯ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya

ಉಜಿರೆ: ಹಳೆಪೇಟೆ ನಿವಾಸಿ ಜಿ. ವಿಠಲದಾಸ್ ಪ್ರಭು ನಿಧನ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

Suddi Udaya
error: Content is protected !!