32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕುಕ್ಕಳ ಮಾಣಿಂಜ ಗೆಳೆಯರ ಬಳಗದಿಂದ ಆಟಿಡೊಂಜಿ ಕೆಸರ್ದ ಗೊಬ್ಬು : ನಿವೃತ್ತ ಶಿಕ್ಷಕಿ ಉಮಾ ಡಿ. ಗೌಡ ಹಟ್ಟತ್ತೋಡಿ ಇವರಿಗೆ ಸನ್ಮಾನ ಗೌರವ

ಮಡಂತ್ಯಾರು: ಗೆಳೆಯರ ಬಳಗ ಮಾಣಿಂಜ ಕುಕ್ಕಳ ಊರ ಪರವೂರ ಹಿಂದೂ ಬಾಂಧವರ ಕೂಡುವಿಕೆಯಲ್ಲಿ ಆಟಿಡೊಂಜಿ ಕೆಸರ್ದ ಗೊಬ್ಬು ಗ್ರಾಮೀಣ ಕ್ರೀಡೋತ್ಸವವು ಆ.2 ರಂದು ಮಾಣಿಂಜ ನಿರ್ಪಾರಿ ಗದ್ದೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಿವೃತ್ತ ಮುಖ್ಯಶಿಕ್ಷಕಿ ಉಮಾ ಡಿ. ಗೌಡ ಹಟ್ಟತ್ತೋಡಿ ಇವರು ಗದ್ದೆಗೆ ಹಾಲು ಎರೆದು ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟನೆಗೊಳಿಸಿದರು.

ಬೆಳಗ್ಗಿನಿಂದ ಸಂಜೆಯ ತನಕ ತುಳುನಾಡ ಶೈಲಿಯ ವಿವಿಧ ಸ್ಪರ್ಧೆಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭ ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದು ನಿವೃತ್ತಿಗೊಂಡ ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಉಮಾ ಡಿ. ಗೌಡ ಹಟ್ಟತ್ತೋಡಿ ಇವರನ್ನು ಧಾರ್ಮಿಕ ಮುಖಂಡ ಕಿರಣಚಂದ್ರ ಪುಷ್ಪಗಿರಿ ಶಾಲು ಹೊದಿಸಿ ಭಗವದ್ಗೀತೆ ಪುಸ್ತಕ ನೀಡಿ ಸನ್ಮಾನಿಸಿ ಗೌರವಿಸಿದರು. ಹಾಗೂ ಇವರು ಕುಂಜತ್ತೋಡಿ ಶಾಲೆಯಲ್ಲಿ ಸೇವೆಸಲ್ಲಿಸಿದ್ದು ಇಲ್ಲಿಯ ಶಾಲಾ ವಿದ್ಯಾರ್ಥಿಗಳು ಹಾಗೂ ಗೆಳೆಯರ ಬಳಗ ಮಾಣಿಂಜ ಇವರ ವತಿಯಿಂದ ಕೂಡ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.

Related posts

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯ ಪದಪ್ರದಾನ ಕಾರ್ಯಕ್ರಮ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ಏ.18: ಯ೦ಗ್‌ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ 2ನೇ ವರ್ಷದ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ”

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 3 ನೇ ವರ್ಷದ ಪಾದರ್ಪಣೆಯ ಸಂಭ್ರಮಾಚರಣೆ

Suddi Udaya

ಕಾವಳಕಟ್ಟೆ ವಲಯ ಬಂಟರ ಸಂಘದಿಂದ ಸಮಾಜಮುಖಿ ಚಿಂತನಾ ಕಾರ್ಯಕ್ರಮ

Suddi Udaya

ನಾವೂರು: ರಸ್ತೆ ಅವಘಡದಲ್ಲಿ ಮೃತಪಟ್ಟ ಚಂದ್ರಹಾಸ್ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya
error: Content is protected !!