September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸಂಘದಿಂದ ‘ಆಟಿದ ಐತ್ತಾರ’ ಮತ್ತು ಮಾಸಿಕ ಸಭೆ

ಅರಸಿನಮಕ್ಕಿ: ಇಲ್ಲಿಯ ಮೂಲ್ಯರ ಯಾನೆ ಕುಲಾಲರ ಸಂಘದ 31 ವರ್ಷದ 7ನೇ ಮಾಸಿಕ ಸಭೆ ಮತ್ತು ಆಟಿದ ಐತ್ತಾರ ಕಾರ್ಯಕ್ರಮವು ಆ.9ರಂದು ಅರಸಿನಮಕ್ಕಿ ಸಂಘದ ಸಭಾಭವನದಲ್ಲಿ ನಡೆಯಿತು.

ಸಮಾರಂಭ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಂಗಾಧರ ಕೆ. ಕುಲಾಲ್ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ನಾಟಕ ರಚನೆಗಾರ ಯು.ರುಕ್ಮಯ್ಯ ಕುಲಾಲ್ ಉಪ್ಪರಡ್ಕ, ಹಾಗೂ ಕೃಷಿಕರಾದ ಉಮೇಶ್ ಕುಲಾಲ್ ಭಾಗವಹಿಸಿದರು.

ಕಟ್ಟಡ ನಿಧಿಯ ಅಧ್ಯಕ್ಷ ಐತ್ತಪ್ಪ ಕುಲಾಲ್, ವಿದ್ಯಾ ನಿಧಿಯ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಟಿ ತಿಂಗಳ ವಿಶೇಷತೆಯನ್ನು ಅರಸಿನಮಕ್ಕಿ ಕುಲಾಲರ ಸಂಘದ 49 ಮನೆಯವರು ಅವರ ಅವರ ಮನೆಯಲ್ಲಿ ಮಾಡಿದ 49 ಬಗ್ಗೆಯ ತಿಂಡಿ-ತಿನುಸುಗಳನ್ನು ತಂದು ಆಟಿಯನ್ನು ಬಹಳ ಸಂಭ್ರಮದಿಂದ ಆಚರಿಸಿದರು.

ಸಂಘದ ವರದಿಯನ್ನು ಕಾರ್ಯದರ್ಶಿ ಅಶೋಕ್ ಕುಲಾಲ್, ವಿದ್ಯಾನಿಧಿಯ ಕಾರ್ಯದರ್ಶಿ ಗುರುಪ್ರಸಾದ್, ಕಟ್ಟಡ ವರದಿಯನ್ನು ರೋಶಾಂತ್ ಕುಲಾಲ್ ಓದಿದರು.

ಕು| ಸಾನ್ವಿತ ಪ್ರಾರ್ಥಿಸಿ, ಯತೀಶ್ ಕುಲಾಲ್ ಸ್ವಾಗತಿಸಿದರು. ಜೀವನ್, ಯತೀಶ್, ಯು.ಸಿ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮೋನಿಶ್ ಕುಲಾಲ್ ವಂದಿಸಿದರು.

Related posts

ಲಾಯಿಲ ಗಾಂಧಿನಗರದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ರೂ 3 ಲಕ್ಷ ದಂಡ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಯಶೋ ನಮನ ಕಾರ್ಯಕ್ರಮ

Suddi Udaya

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ದಾಳಿ

Suddi Udaya

ಸೆ.28: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂಡಿಕಾಯಾಗ-ಸತ್ಯದರ್ಶನ

Suddi Udaya

ಉಜಿರೆ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಶಾಖೆಯ ಹತ್ತನೇ ವರ್ಷದ ಆಚರಣೆ

Suddi Udaya

ಕರ್ನಾಟಕ ರಾಜ್ಯ ಟೈಲರಿಂಗ್ ಅಸೋಸಿಯನ್ ಬೆಳ್ತಂಗಡಿ ವಲಯದಿಂದ ಸಿರಿ ಸಂಸ್ಥೆಗೆ ಭೇಟಿ

Suddi Udaya
error: Content is protected !!