23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ನಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ SDMC ಯ ಉಪಾಧ್ಯಕ್ಷ ಉಮೇಶ್ ಪ್ರಭು ಹಡಿಲ್ ಧ್ವಜಾರೋಹಣವನ್ನು ನೆರವೇರಿಸಿ, ಶುಭ ಸಂದೇಶ ನೀಡಿದರು

ನಾವೂರಿನ ಪ್ರಸಿದ್ಧ ವೈದ್ಯರು ಮಾರ್ಗದರ್ಶಕರು ಆರೋಗ್ಯ ಕ್ಲಿನಿಕ್ ನ ವೈದ್ಯ ಡಾ| ಪ್ರದೀಪ್ ಅವರು ಸ್ವಾತಂತ್ರ್ಯ ಸಂದೇಶ ನೀಡುತ್ತ ಮಕ್ಕಳಲ್ಲಿ ದೇಶಪ್ರೇಮದ ಜಾಗೃತಿಯನ್ನು ಮೂಡಿಸಿದರು

ನಾವೂರು ಪಂಚಾಯತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಪಂಚಾಯತ್ ವತಿಯಿಂದ ಸಿಹಿತಿ0ಡಿಯನ್ನು ವಿತರಿಸಿ ಶುಭ ಹಾರೈಸಿದರು

ನಾವೂರಿನ ನವೋದಯ ಯುವಕ ಮಂಡಲ ಇದರ ಅಧ್ಯಕ್ಷ ಸ್ವರೂಪ್ ಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗೌಡ ನಾಗಾಜೆ, ಕೋಶಾಧಿಕಾರಿ ಬಾಲಕೃಷ್ಣ ಆಚಾರಿ ಮತ್ತು ಇದರ ಎಲ್ಲಾ ಸದಸ್ಯರು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಅಕ್ಷರ ಪಯಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಾವೂರು ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಜ್ಞಾನಾರ್ಜನೆಗೆ ಆಸರೆಯಾಗುವ ‘ಅಕ್ಷರ ದೀವಿಗೆ’ (ಜ್ಞಾನದ ಲೇಖನಿ) ವಿತರಣೆ ಮಾಡಿದರು

ಕಾರ್ಯಕ್ರಮದಲ್ಲಿ ನಾವೂರಿನ ಎಲ್ಲಾ ವಿದ್ಯಾ ಅಭಿಮಾನಿಗಳು ಯುವತಿ ಮಂಡಲದ ಸದಸ್ಯರು ಶಾಲಾ ಪೋಷಕರು ಎಲ್ಲ ವಿದ್ಯಾರ್ಥಿಗಳು ಹಾಗೂ SDMC ಯ ಎಲ್ಲಾ ಸದಸ್ಯರು ಶಾಲಾ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ಇದೇ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೆ ಮತ್ತು ಪೋಷಕರಿಗೆ SSF ಸಂಘಟನೆಯ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು ತದನಂತರ ಮಕ್ಕಳಿಂದ ಪಥ ಸಂಚಲನ ನಡೆಸಲಾಯಿತು ಆಮೇಲೆ ಎಲ್ಲ ಮಕ್ಕಳಿಂದ ವಿವಿಧ ಮನೋರಂಜನೆಯನ್ನು ಕಾರ್ಯಕ್ರಮ ನಡೆಯಿತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಿಗೆ SDMC ಸದಸ್ಯರುಗಳಾದ ದಿನೇಶ್ ಪ್ರಭು, ರೋಹಿತ್ ಕುಮಾರ್, ಬದ್ರುದ್ದೀನ್ ಇವರುಗಳು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು.

ಮುಖ್ಯೋಪಾಧ್ಯಾಯರಾದ ರಾಜೇಂದ್ರ ಭಟ್ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಸಾಲಿಯನ್ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಚೇತನ್ ಪಿ ಧನ್ಯವಾದ ನೀಡಿದರು ಮಕ್ಕಳ ವಿವಿಧ ಮನೋರಂಜನೆಯ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಯರಾದ ಭವ್ಯ, ಮೀನಾ ಹಾಗೂ ಸ್ಮಿತಾ ಇವರು ನಡೆಸಿಕೊಟ್ಟರು

Related posts

ಸೆಲೆಕ್ಷನ್ ಟ್ರಯಾಲ್ಸ್: ಮಚ್ಚಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಲಿಶನ್ ಹೈಜಂಪ್‌ನಲ್ಲಿ ದ್ವಿತೀಯ-ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ದೇವಾಂಗ ಸಮಾಜದ ಪದಗ್ರಹಣ ಪ್ರತಿಭಾ ಪುರಸ್ಕಾರ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ 27ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕರಿಂದ ಅಗೇಲು ಸೇವೆ: ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರಿಂದ ಬೊಳ್ಳಜ್ಜನಿಗೆ ಅಗೇಲು ಸಮರ್ಪಣೆ

Suddi Udaya

ಬಿಜೆಪಿ ನಾವೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಪ್ರದೀಪ್ ನಾಗಜೆ ಆಯ್ಕೆ

Suddi Udaya

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ: ಅಡಕೆ ನಿಷೇಧದ ಆತಂಕ ನಿವಾರಣೆಗೆ ಪ್ರಯತ್ನ

Suddi Udaya
error: Content is protected !!