32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಣ್ಣಿನ ಸಂಸ್ಕೃತಿ, ತುಳು ಜನಪದ ಸೊಗಡಿನೊಂದಿಗೆ ಅಭ್ಯಾಸ್ ಕಾಲೇಜಿನಲ್ಲಿ ಕೆಸರ್ದಕಲ ಸಂಭ್ರಮ

ಉಜಿರೆ: ಕಾಶಿಬೆಟ್ಟು ಪ್ರಗತಿನಗರ, ಉಜಿರೆಯ ಅಭ್ಯಾಸ್ ಪದವಿಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ‘ಅಭ್ಯಾಸ್ ಕೆಸರ್ದಕಲ’ ಕಾರ್ಯಕ್ರಮವು ಅರಳಿ-ಅಲ್ಯೋಟ್ಟು ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು.

ಗದ್ದೆಯ ಮಾಲೀಕ ಸುಂದರ ಬಂಗೇರ ಮಾತನಾಡಿ ಬೇಸಾಯದ ಮಹತ್ವ ಹಾಗೂ ಕೃಷಿಯೊಂದಿಗೆ ಬೆಸೆದುಕೊಂಡಿರುವ ಸಂತೃಪ್ತ ಬದುಕಿನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಣ್ಣಿನೊಂದಿಗೆ ಬೆರೆಯುವ ಜೀವನಶೈಲಿ ನೀಡುವ ಸಂತೋಷ ಮತ್ತು ಕೃಷಿಯ ಮಹತ್ವವನ್ನು ಇಂದಿನ ಯುವಜನತೆ ಅರಿಯಬೇಕು ಎಂದು ಹೇಳಿದರು.

ಚಾರ್ಟರ್ಡ್ ಅಕೌಂಟೆಂಟ್ ಅನಂತ ಕೃಷ್ಣ ಪಡುವೆಟ್ನಾಯ ಮಾತನಾಡಿ, ವೃತ್ತಿಯೊಂದಿಗೆ ಪ್ರವೃತ್ತಿಯೂ ಬದುಕಿನಲ್ಲಿ ಅಗತ್ಯ. ನಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿಕೊಳ್ಳಬಹುದು ಎಂದರು.

ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಿತ್ರ ಮಹಿಳಾ ಮಂಡಳಿ ಹಾಗೂ ಮಿತ್ರ ಯುವಕ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 16 ವಿವಿಧ ಮನೋರಂಜನಾ ಆಟಗಳು,ತುಳು ಜನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿದವು.

ಕಾರ್ಯಕ್ರಮದಲ್ಲಿ ಅಭ್ಯಾಸ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ.ಎಸ್., ಕಾರ್ಯದರ್ಶಿ ಶ್ರೀಮತಿ ಶಿಲ್ಪಾ, ಅಶ್ವಿನಿ ಬಂಗೇರ, ಸುರೇಶ್ ಸವಿತ ಬಂಗೇರ, ಮಿತ್ರ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾಗೀರತಿ,ಮಿತ್ರ ಯುವಕ ಮಂಡಳಿ ಅಧ್ಯಕ್ಷ ಅನಿಲ್,ಪತ್ರಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳ ಪೋಷಕರು ಸ್ವಯಂಪ್ರೇರಣೆಯಿಂದ ತಯಾರಿಸಿ ತಂದಿದ್ದ ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಗಮನ ಸೆಳೆದವು. ವಿವಿಧ ಗ್ರಾಮೀಣ ಆಟಗಳು, ಜನಪದ ನೃತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಮಣ್ಣಿನ ಸಂಸ್ಕೃತಿಯೊಂದಿಗೆ ನೇರವಾಗಿ ಬೆರೆಯುವ ಅವಕಾಶ ಕಲ್ಪಿಸಿದವು.

ಕಾರ್ಯಕ್ರಮದ ಯಶಸ್ಸಿಗೆ ಪ್ರಮೋದ್ ಗೌಡ ಎ.ಒ.,ವಿದ್ಯಾಶ್ರೀ, ವಿಲ್ಮಾ, ಸಾಂಸ್ಕೃತಿಕ ಸಮಿತಿ ಸದಸ್ಯರು, ಜಿತೇಶ್, ರೋಹಿತ್ ಧನಂಜಯ್ , ಶಿವಪ್ರಸಾದ್, ಪುನೀತ್, ಶರತ್, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸಹಕರಿಸಿದರು.ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ಗೌಡ ಕೆ. ನಿರೂಪಿಸಿದರು.

ವಿದ್ಯಾರ್ಥಿಗಳು ವಾಸ್ತವ ಬದುಕಿನ ಅನುಭವವನ್ನೂ ಪಡೆದುಕೊಳ್ಳಬೇಕು:

ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ವಾಸ್ತವ ಬದುಕಿನ ಅನುಭವವನ್ನೂ ಪಡೆದುಕೊಳ್ಳಬೇಕು. ಕೇವಲ ಅಂಕಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ಉತ್ತಮ ಮನಸ್ಸು, ಮಾನವೀಯ ಮೌಲ್ಯಗಳು ಹಾಗೂ ಕಠಿಣ ಪರಿಶ್ರಮದ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವಿದ್ಯಾರ್ಥಿಗಳನ್ನು ರೂಪಿಸುವುದು ಸಂಸ್ಥೆಯ ಆಶಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಾರ್ತಿಕೇಯ ಎಂ.ಎಸ್ ಹೇಳಿದರು.

Related posts

ನಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಪಿಲಿಗೂಡು : ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 5.92 ಲಕ್ಷ ನಿವ್ವಳ ಲಾಭ, ಶೇ. 25% ಡಿವಿಡೆಂಟ್ ಘೋಷಣೆ

Suddi Udaya

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯಿಂದ ರಕ್ಷಾ ಬಂಧನ ಆಚರಣೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ದಿಂದ ವಿಧಾನಸಭಾ ಚುನಾವಣಾ ಪೂರ್ವ ತಯಾರಿ ಸಭೆ

Suddi Udaya

ಅಮ್ಮಾಜಿ ಕೋಟ್ಯಾನ್, ಎನ್. ಪ್ರಭಾಕರ್ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಆರೋಪಗಳು ಸತ್ಯಕ್ಕೆ ದೂರವಾದವು : ಸುಲ್ಕೇರಿಮೊಗ್ರು ಪ್ರಾ.ಕೃ.ಪ. ಸ.ಸಂಘದ ಅಧ್ಯಕ್ಷ ಸುಧೀರ್ ಆರ್. ಸುವರ್ಣರಿಂದ ಸ್ಪಷ್ಟನೆ

Suddi Udaya

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

Suddi Udaya
error: Content is protected !!