25.2 C
ಪುತ್ತೂರು, ಬೆಳ್ತಂಗಡಿ
October 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಗುರುದೇವ ಪ. ಪೂ.ಕಾಲೇಜಿನಲ್ಲಿ ಪೋಷಕರ ಸಭೆ

ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪೋಷಕರ ಸಭೆ ಹಾಗೂ ಶಿಕ್ಷಕ ರಕ್ಷಕ ಸಂಘದ ಆಯ್ಕೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಪ ಪ್ರಾಂಶುಪಾಲರಾದ ಬಿ. ಎ. ಶಮೀವುಲ್ಲಾ ಕಾಲೇಜಿನ ನಿಯಮಗಳು ಹಾಗೂ ಪೋಷಕರು ಪಾಲಿಸಬೇಕಾದ ವಿಚಾರಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಗಣೇಶ್ ಬಿ ಶಿರ್ಲಾಲು ಪ್ರಸ್ತಾವಿಸಿ ಸ್ವಾಗತಿಸಿದರು. ಲೆಕ್ಕಶಾಸ್ತ್ರ ಉಪನ್ಯಾಸಕಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಮಲ್ಲಿಕಾ ವಂದಿಸಿದರು.

ಶಿಕ್ಷಕ – ರಕ್ಷಕ ಸಂಘಕ್ಕೆ ಆಯ್ಕೆ

ಕಾಲೇಜಿನ 2026-27 ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಮಜೀದ್, ಉಪಾಧ್ಯಕ್ಷರುಗಳಾಗಿ ಮೋನಪ್ಪ ಗೌಡ, ಮಲ್ಲಿಕಾ, ಕಾರ್ಯದರ್ಶಿಯಾಗಿ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಮಲ್ಲಿಕಾ ಟಿ, ಕೋಶಾಧಿಕಾರಿಯಾಗಿ ಮಂಜುಳಾ ಸದಸ್ಯರುಗಳಾಗಿ ಕುಸುಮಾವತಿ, ರವೀಂದ್ರ ನಾಯ್ಕ, ಶೋಭಾ, ವಿಮಲ, ಲಲಿತಾ, ನೇತ್ರಾವತಿ, ವಸಂತಿ, ಗಣೇಶ ಬಂಗೇರ, ಅಶ್ರಫ್ ಕರಾಯ, ಖಲಂದರ್, ಆಯ್ಕೆಯಾದರು.

Related posts

ಜು.26: ಅಭಯ ಆಸ್ಪತ್ರೆಯಲ್ಲಿ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

Suddi Udaya

ನಾಲ್ಕೂರು ತೋಟದಪಲ್ಕೆ ನಾರಾಯಣ ಪೂಜಾರಿ ನಿಧನ

Suddi Udaya

ಕನ್ಯಾಡಿ ಶ್ರೀರಾಮ ಸಂಸ್ಥಾನಮ್‌ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಹರಿದ್ವಾರದ ಸಾಧನಾ ಕುಟೀರದ 9ನೇ ವಾರ್ಷಿಕೋತ್ಸವ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ”

Suddi Udaya

ಬೆಳ್ತಂಗಡಿ ಗುರುದೇವ ಕಾಲೇಜು – ಭಿತ್ತಿ ಪತ್ರಿಕೆ ಅನಾವರಣ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೊ ಸ್ಕೂಲ್ “ಲುಮಿನ್ಯಾ” ಪ್ರಾರಂಭೋತ್ಸವ ಆರಂಭ, ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya
error: Content is protected !!