ಬಳಂಜ: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ 4ನೇ ವರ್ಷದ ಮೊಸರು ಕುಡಿಕೆ ಉತ್ಸವವು ಸೆ.6ರಂದು ನಿಟ್ಟದ್ದ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಮಕ್ಕಳು ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಮುದ್ದುಕೃಷ್ಣ ಹಾಗೂ ಬಾಲಕೃಷ್ಣ ಸ್ಪರ್ಧೆಯಲ್ಲಿ 50ಕ್ಕೂ ಅಧಿಕ ಪುಟಾಣಿಗಳು ಶ್ರೀಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಪಾಲ್ಗೊಂಡು ಸಭಿಕರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಗುರುವಾಯನಕೆರೆ ನಿಸರ್ಗ ಕರ್ಟನ್ ಮಾಲಕ ನಾಗೇಶ್ ಬರಾಯ, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಮಂಗಳೂರು ಪುರಸಭೆ ಸದಸ್ಯ ಜಯ ಪೂಜಾರಿ, ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್., ಸಂಘಟಕ ಸುರೇಶ್ ಪೂಜಾರಿ ಜೈಮಾತಾ ನಾಲ್ಕೂರು, ಮೈಟ್ ಕಾಲೇಜಿನ ಪ್ರೊಫೆಸರ್ ರಂಜಿತ್ ಹೆಚ್.ಡಿ., ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಬೆಳ್ತಂಗಡಿ ಯುವ ಉದ್ಯಮಿ ಚಿದಾನಂದ ಇಡ್ಯ, ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಹೆಚ್. ದೇಜಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಜಗದೀಶ್ ರೈ ಹಾನಿಂಜ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸೂರಾಜ್ ಹಾನಿಂಜ, ಯುವ ಉದ್ಯಮಿ ಸಚಿನ್ ಶೆಟ್ಟಿ ಕುರೆಲ್ಯ, ಬಳಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ, ಬಳಂಜ ಬಿಲ್ಲವ ಸಂಘದ ಮಾಜಿ ಕಾರ್ಯದರ್ಶಿ ರೂಪನಾಥ ವೈ.ಎಲ್. ಮಂಗಳೂರು, ಯುವ ಉದ್ಯಮಿ ಪ್ರಕಾಶ್ ಪೂಜಾರಿ ಬೊಕ್ಕಸ, ಯುವ ಉದ್ಯಮಿ ದೀಪಕ್ ಹೆಚ್.ಡಿ., ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಳದ ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ ಅಂತರ,ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರು, ಬಳಂಜ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಸಂಭ್ರಮ, ಪ್ರಗತಿಪರ ಕೃಷಿಕ ವಿಶ್ವನಾಥ ಹೊಳ್ಳ, ಬಳಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ದಾನಿ ಅಶ್ರಫ್ ಬಳಂಜ ಹಾಗೂ ಎಸ್‌ಎಸ್‌ಎಲ್‌ಸಿ ಸಾಧಕರಾದ ಪ್ರತೀಕ್ಷಾ ನಂದ್ರಟ್ಟ ಮತ್ತು ಹರ್ಷಿತಾ ಯೈಕುರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಯುವಶಕ್ತಿ ತಂಡದ ಸಂತೋಷ್ ಪಿ. ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯತೀಶ್ ವೈ.ಎಲ್. ಹಾಗೂ ಕರುಣಾಕರ ಹೆಗ್ಡೆ ವಂದಿಸಿದರು. ಚಂದ್ರಹಾಸ ಬಳಂಜ ಹಾಗೂ ವಿಶಾಲ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.
ಉತ್ಸವದ ಯಶಸ್ಸಿಗೆ ತಂಡದ ಸದಸ್ಯರಾದ ಯೋಗೀಶ್ ಆರ್., ಸಂತೋಷ್ ಕುಮಾರ್, ವಿಜಯ ಪೂಜಾರಿ, ಪ್ರಶಾಂತ್ ಅಂಚನ್, ಜಗದೀಶ್ ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್, ರಂಜಿತ್ ಪೂಜಾರಿ, ದಿನೇಶ್ ಪೂಜಾರಿ, ಜಯಪ್ರಸಾದ್ ಕೋಟ್ಯಾನ್, ಸುಧೀಶ್ ಪೂಜಾರಿ, ಸಂಪತ್ ಪಿ. ಕೋಟ್ಯಾನ್, ಪ್ರವೀಣ್ ಡಿ. ಕೋಟ್ಯಾನ್, ಶರತ್ ಅಂಚನ್, ರಕ್ಷಿತ್ ಪೂಜಾರಿ, ಸುಧೀರ್ ಸಾಲಿಯಾನ್, ಸತೀಶ್ ಕೋಟ್ಯಾನ್, ಪ್ರಣಾಮ್ ಶೆಟ್ಟಿ, ಮಹೇಶ್ ಕುಲಾಲ್, ಪ್ರಥಮ್ ಕುಮಾರ್, ಸತ್ಯಸಾಯಿ ಹಾಗೂ ಇತರರು ಸಹಕರಿಸಿದರು.












