ಬೆಳ್ತಂಗಡಿ: ಗೇರುಕಟ್ಟೆ ನಿವಾಸಿ, ಚಂದಪ್ಪ ಪೂಜಾರಿ ಅವರ ಧರ್ಮಪತ್ನಿ ಕುಸುಮಾವತಿನ (75ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.11ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಲ್ಕೂರು ಗ್ರಾಮದ ಬೊಕ್ಕಸಗುತ್ತು ಹಿರಿಯ ಸದಸ್ಯರಾಗಿದ್ದು, ಸಮಾಜದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸರಳ, ಸೌಮ್ಯ ಸ್ವಭಾವದವರಾಗಿದ್ದ ಅವರು ಕುಟುಂಬ ಹಾಗೂ ಸಮಾಜದೊಂದಿಗೆ ಆತ್ಮೀಯವಾಗಿ ಬೆರೆತು ಜೀವನ ನಡೆಸಿದ್ದರು.
ಮೃತರು ಮಕ್ಕಳಾದ ಚಾರ್ಮಾಡಿ ಹಾಗೂ ಪಡಂಗಡಿ ಗ್ರಾಮ ಪಂಚಾಯತ್ ಪಿಡಿಒ ಪುರುಷೋತ್ತಮ್, ಅಂಗನವಾಡಿ ಶಿಕ್ಷಕಿ ಭಾಗ್ಯವತಿ, ಲೋಲಾಕ್ಷಿ ಅವರನ್ನು ಅಗಲಿದ್ದಾರೆ. ಅಲ್ಲದೆ ಸಹೋದರರಾದ ಬೊಕ್ಕಸ ಸದಾನಂದ ಪೂಜಾರಿ, ನಾರಾಯಣ ಪೂಜಾರಿ, ಬೇಬಿ ಪೂಜಾರಿ, ಸಹೋದರಿ ಮೀನಾಕ್ಷಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.












