28 C
ಪುತ್ತೂರು, ಬೆಳ್ತಂಗಡಿ
September 13, 2026
ಗ್ರಾಮಾಂತರ ಸುದ್ದಿ

ಕರಿಯ ಮೊಗೇರ ಕುಟುಂಬಕ್ಕೆ ಗ್ರಾ.ಪಂ ಮಾಜಿ ಸದಸ್ಯೆ ಸವಿತಾ ಸಂತೋಷ್ ಶೆಟ್ಟಿ ಆರ್ಥಿಕ ನೆರವು, ವಸ್ರ್ತ ಕೊಡುಗೆ

ಬೆಳ್ತಂಗಡಿ; ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಕುಟುಂಬದ ಸಂಕಷ್ಟಕ್ಕೆ ಲಾಯಿಲ ಗ್ರಾ.ಪಂ ನಿಕಟಪೂರ್ವ ಸದಸ್ಯೆ ಸವಿತಾ ಸಂತೋಷ್ ಶೆಟ್ಟಿ ಅವರು ಸ್ಪಂದಿಸಿದ್ದಾರೆ‌.

ಸುದ್ದಿ ಉದಯಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿ ಕೂಡಲೇ
ಸೆ.13 ರಂದು ಕರಿಯ ಮೊಗೇರ ಅವರ ಮನೆಗೆ ಭೇಟಿ ಮಾಡಿದ ಅವರು ಕರಿಯ ಮೊಗೇರ ಅವರ ಪತ್ನಿಗೆ ತನ್ನ ವೈಯಕ್ತಿಕ ವತಿಯಿಂದ ವಸ್ರ್ತಗಳು ಹಾಗೂ ಚಿಕಿತ್ಸೆಗೆ ಸಹಾಯಿಯಾಗಿ ಆರ್ಥಿಕ ಸಹಕಾರದ ಚೆಕ್ ಹಸ್ತಾಂತರಿಸಿದರು.

ಪಂಚಾಯತ್ ಮೂಲಕ ಅವರ ಮನೆಗೆ ನಳ್ಳಿನೀರಿನ‌‌ ಸೌಕರ್ಯವನ್ನೂ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿಕೊಡುವುದಾಗಿಯೂ ಅವರು ಈ ವೇಳೆ ಭರವಸೆ ನೀಡಿದರು. ಈ ಸಂದರ್ಭ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮತ್ತು ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ, ಕರಿಯ‌ ಮುಗೇರ ಬಂಧುಗಳಾದ ಕೇಶವ ಮತ್ತು ಪತ್ನಿ ವೇದಾವತಿ ಉಪಸ್ಥಿತರಿದ್ದರು.

Related posts

ತಾಲೂಕು ಮರಾಟಿ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ್ ನಿಧನ

Suddi Udaya

ಉರುವಾಲು ನಿವಾಸಿ ನವವಿವಾಹಿತೆ ಪುತ್ತೂರಿನ ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕೊಕ್ಕಡ: ಸಂಗಮ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಮಹಾಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗದ ಹಾವಳಿ: ಅಪಾರ ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿ

Suddi Udaya

ಜ.31-ಫೆ.4: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಕಾಪಿನಡ್ಕ: ಕೊಂಕಡ್ಡ ನಿವಾಸಿ ಸುರೇಶ್ ಪೂಜಾರಿ ನಿಧನ

Suddi Udaya
error: Content is protected !!