
ಕುಪ್ಪೆಟ್ಟಿ: ಶ್ರೀ ಗಣೇಶ ಭಜನಾ ಮಂಡಳಿ ಕುಪ್ಪೆಟ್ಟಿ, ಶ್ರೀ ದುರ್ಗಾ ಗಣೇಶ ಮಾತೃ ಮಂಡಳಿ ಮತ್ತು ಕಟ್ಟಡ ಅಭಿವೃದ್ಧಿ ಸಮಿತಿ ಕುಪ್ಪೆಟ್ಟಿ ವತಿಯಿಂದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವೇ. ಮೂ. ಕೆ.ಯಂ. ಪ್ರಸನ್ನ ಮುಚ್ಚಿನ್ನಾಯರು `ನೈದಿಲೆ’ ಹಲೇಜಿ ಇವರ ವೈದಿಕ ನೇತೃತ್ವದಲ್ಲಿ ಸೆ.14ರಂದು ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿಯಲ್ಲಿ ನಡೆಯಿತು.

ಕಾರ್ಯಕ್ರಮಗಳು: ಬೆಳಿಗ್ಗೆ ಬಿಂಬ ಪ್ರತಿಷ್ಠೆ, ಗಣಪತಿ ಹೋಮ, ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆ, ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾಪೂಜೆ ಪ್ರಸಾದ ನಂತರ ಅನ್ನಸಂತರ್ಪಣೆ, ಅಪರಾಹ್ನ ಭಜನಾ ಕಾರ್ಯಕ್ರಮ, ಸಂಜೆ ರಂಗಪೂಜೆ, ಸಭಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಾರತಮಾತಾ ವಂದನಾ ಕಾರ್ಯಕ್ರಮ, ಶೋಭಾಯಾತ್ರೆ ಮೂಲಕ ಬಿಂಬ ವಿಸರ್ಜನೆ. ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ ಅವರು ಆರ್ಶೀವಚನ ನೀಡಿದರು.

ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿ ಇದರ ಆಡಳಿತ ಮೊಕ್ತೇಸರರಾದ ಅತುಲ್ ಕುಮಾರ್ ಕೆ. ಎನ್. ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಉದ್ಯಮಿ, ತನ್ನೋಜಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನಾಗಾರ್ಜುನ್ ರಾವ್, ರೈ ಎಸ್ಟೇಟ್ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯ ದಿಗ್ದರ್ಶಕರಾದ ಈಶ್ವರ್ ಭಟ್ ಮಾಯಿಲ್ತೋಡಿ, ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ, ಪಿಲಿಗೂಡು ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾ ಪದ್ಮನಾಭ ಶಿಲ್ಪಿ, ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಉರುವಾಲು ಪ್ರಗತಿಪರ ಕೃಷಿಕ ಯು. ತಿಲಕ್ ಭಟ್, ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಎಂ. ಸುಪ್ರಭಾತ ಕೊಲ್ಲಿ, ಉಪ್ಪಿನಂಗಡಿ ಮಾಂಡವಿ ಮೋಟರ್ಸ್ ವರ್ಕ್ ಮ್ಯಾನೇಜರ್ ಸುದೇಶ್ ಕುಮಾರ್ ಜೈನ, ಉಪ್ಪಿನಂಗಡಿ ಶ್ರೀ ರಾಮ ಶಾಲೆ ಅಧ್ಯಕ್ಷ ಸುನಿಲ್ ಅಣಾವು,ಶ್ರೀ ದುರ್ಗಾ ಗಣೇಶ ಮಾತೃಮಂಡಳಿ ಅಧ್ಯಕ್ಷೆ ಸುಮತಿ ಕುಪ್ಪೆಟ್ಟಿ,ಕಟ್ಟಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಉಪಸ್ಥಿತರಿದ್ದರು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಮ್ಯಾಗಂಗಾ ವಾದ್ಯಕೋಡಿ ಪ್ರಾರ್ಥಿಸಿ, ರೋಹಿತ್ ಶೆಟ್ಟಿ ಕುಪೆಟ್ಟಿ ಸ್ವಾಗತಿಸಿ, ಸಂದೀಪ್ ಆಚಾರ್ಯ ವಂದಿಸಿ, ಮಾಧವ ಗೌಡ ದೊರ್ತೋಡಿ ನಿರೂಪಿಸಿದರು.












