32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.18: ದ.ಕ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಜ್ಯ ಸರರ್ಕಾರದ ಸಚಿವ ಸಂಪುಟ ಸಭೆ; ಪತ್ರಿಕಾಗೋಷ್ಠಿಯಲ್ಲಿ ರಕ್ಷಿತ್ ಶಿವಾರಂ

ಬೆಳ್ತಂಗಡಿ: ರಾಜ್ಯ ಸರರ್ಕಾರದ ಸಚಿವ ಸಂಪುಟ ಸಭೆ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.18ರಂದು ನಡೆಯುತ್ತಿದೆ ಇದು ಕರವಾಳಿ ಜಿಲ್ಲೆಯ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆಯುವ ಸುದಿನವಾಗಲಿದ್ದು ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಚಿವು ಸಂಪುಟ ಸಭೆ ಅಣಿಯಾಗಲಿದೆ, ಕರವಾಳಿಯ ಅಭಿವೃದ್ಧಿಯ ಶಖೆ ಪ್ರಾರಂಭಗೊಂಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಅಭಿಪ್ರಾಯಪಟ್ಟರು.

ಅವರು ಸೆ. 15 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರಾವಳಿ ಜಿಲ್ಲೆ ವಾಯು, ಜಲ, ಭೂ ಮಾರ್ಗದ ಸಂಪರ್ಕಗಳನ್ನು ಒಳಗೊಂಡಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಂಕಣ, ವಂದೇ ಭಾರತ್ ರೈಲುಗಳು, ಹಡಗುಗಳು, ಭೂ ಮಾರ್ಗದ ನಗರವಾಗಿದ್ದು ಕರಾವಳಿ ಪ್ರವಾಸೊಧ್ಯಮಕ್ಕೆ ಉತ್ತೇಜನ ನೀಡುವುದರೊಂದಿಗೆ ಪಶ್ಚಿಮ ಘಟ್ಟ, ಮಲೆನಾಡು ಭಾಗದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಸಮಗ್ರ ಪ್ರವಾಸೋದ್ಯಮದಿಂದ 6 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಬೆಳ್ತಂಗಡಿ ತಾಲೂಕಿಗೆ 1.5 ಕೋಟಿ ಮಂದಿ ಪ್ರವಾಸಿಗರು ಆಗಮಿಸುತ್ತಾರೆ ಈ ಪೈಕಿ ಧಾರ್ಮಿಕ, ಚಾರಣಿಗ ಪ್ರವಾಸಿಗರು ಸಂಖ್ಯೆ ಹೆಚ್ಚಿದೆ ಆದರೆ ಇದು ಕೆಲವೇ ಗಂಟೆಗಳಿಗೆ ಸೀಮಿತಗೊಂಡಿರುವ ಈ ಪ್ರವಾಸೋಧ್ಯಮವನ್ನು ಮೂರು ದಿನಕ್ಕೆ ಪರಿವರ್ತಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಮಲಾಬಾದ್ ಗೆ ರೋಪ್ ವೇ ಸೌಲಭ್ಯ, ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಸೌತಡ್ಕ, ಶಿಶಿಲ, ಕೊಲ್ಲಿ, ವೇಣೂರು, ನಾರಾವಿ ಸಹಿತ ನಾನಾ ದೇವಸ್ಥಾನ, ಎರಡು ಬಾಹುಬಲಿ ಮೂರ್ತಿ, ಜೈನ ಬಸದಿ, ಕಾಜೂರು ದರ್ಗಾ, ಪಶ್ಚಿಮ ಘಟ್ಟ, ಜಲಪಾತ, ನೇತ್ರಾವತಿ ಪೀಕ್, ಶಿಶಿಲದ ಅಮೆತಿಗಲ್ಲು, ಎತ್ತಿನಭುಜ ಸಹಿತ ನಾನಾ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪ್ರವಾಸೋದ್ಯಮದೊಂದಿಗೆ ಸಾರಿಗೆ ವ್ಯವಸ್ಥೆವನ್ನು ಹೆಚ್ಚಿಸುವ ಯೋಜನೆ ಹಾಕಿಕೊಳ್ಳಬೇಕು ಹಾಗಾಗಿ ಎಲೆಕ್ಟಿçಕ್ ಬಸ್‌ಗಳು, ಧರ್ಮಸ್ಥಳ, ಸೌತಡ್ಕ, ಸುಬ್ರಹ್ಮಣ್ಯ ಮಾರ್ಗದಲ್ಲಿ ತೆರೆದ ಬಸ್ ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಳು ಭಾಷೆಯನ್ನು ಎಂಟನೇ ಪರಿಚ್ಚಯಕ್ಕೆ ಸೇರಿಸುವ ಪ್ರಕ್ರಿಯೆ ಕೇಂದ್ರ ಸರಕಾರದ ಹಂತದಲ್ಲಿದೆ. ತುಳು ಭಾಷೆಯನ್ನು ರಾಜ್ಯದ ಅಧೀಕೃತ ಭಾಷೆಯಾಗಿ ಸೇರಿಸುವುದರಿಂದ ಉದ್ಯೋಗವಾಕಾಶ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕಾರ್ಯದರ್ಶಿ ಶಾಫಿ ಹಾಗೂ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾಲಾಡಿ ಉಪಸ್ಥಿತರಿದ್ದರು.

Related posts

ಪದ್ಮುಂಜ: ಮಲೆಂಗಲ್ಲು ನಿವಾಸಿ ಗೋಪಿ ನಿಧನ

Suddi Udaya

ಗ್ರಾಮಸ್ಥರ ಮನೆಗಳ ಶುಚಿತ್ವಕ್ಕೆ ಕಂಟಕವಾದ ಸ್ಥಳೀಯ ಕೋಳಿಸಾಕಾಣಿಕೆ: ಅಗತ್ಯ ಕ್ರಮಕ್ಕೆ ಸ್ಥಳೀಯರ ಒತ್ತಾಯ

Suddi Udaya

ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ರಾಜಕೇಸರಿ ಟ್ರಸ್ಟ್ ನಿಂದ ಸವಣಾಲು ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ,ಪೆನ್ ವಿತರಣೆ

Suddi Udaya

ಧರ್ಮಸ್ಥಳ: ನೇತ್ರಾವತಿ ಸೇತುವೆಯ ಕೆಳಗೆ ಅಪರಿಚಿತ ಶವ ಪತ್ತೆ

Suddi Udaya

ಉಜಿರೆ: ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ

Suddi Udaya
error: Content is protected !!