September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಳಿಯ ಕೃಷ್ಣವೇಷ ಸ್ಪರ್ಧೆಯಲ್ಲಿ ಸ್ಮಯ ಎಸ್. ಕೋಟ್ಯಾನ್‌ಗೆ ಪ್ರಥಮ

ಬೆಳ್ತಂಗಡಿ: ನಾಡಿನ ಪ್ರಸಿದ್ಧ ಸ್ವರ್ಣೋದ್ಯಮ ಸಂಸ್ಥೆ ಮುಳಿಯ ಜುವೆಲ್ಲರ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಕೃಷ್ಣವೇಷ,ಬಾಲಕೃಷ್ಣ ಸ್ಪರ್ಧೆಯಲ್ಲಿ ಬಳಂಜದ ಸ್ಮಯ ಎಸ್. ಕೋಟ್ಯಾನ್ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಳಿಯ ಜುವೆಲ್ಲರ್ಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಮುದ್ದುಕೃಷ್ಣ, ರಾಧಾಕೃಷ್ಣ ಹಾಗೂ ಬಾಲಕೃಷ್ಣ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಬಳಂಜ ನಿವಾಸಿ, ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ದ್ವಿತೀಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಮಯ ಎಸ್. ಕೋಟ್ಯಾನ್, ಪತ್ರಕರ್ತ ಸಂತೋಷ್ ಪಿ. ಕೋಟ್ಯಾನ್ ಹಾಗೂ ಅಮೃತಾ ದಂಪತಿಯ ಪುತ್ರಿ. ಮುದ್ದುಕೃಷ್ಣ,ಬಾಲಕೃಷ್ಣನ ಆಕರ್ಷಕ ವೇಷಭೂಷಣ ಹಾಗೂ ಬಾಲಲೀಲೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸ್ಮಯ, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕುಟುಂಬ ಹಾಗೂ ಶಾಲೆಗೆ ಹೆಮ್ಮೆ ತಂದಿದ್ದಾರೆ.

Related posts

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya

ಮನೆ ಬಳಿ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರು ಕಳವು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಒರಿಂಟೇಷನ್ ಕಾರ್ಯಕ್ರಮ

Suddi Udaya

ನಾಳೆ (ಎ.30) ನಾರಾವಿ ಉಪ ವಲಯಾರಣ್ಯಾಧಿಕಾರಿ ಕುಶಾಲಪ್ಪ ಗೌಡರವರಿಗೆ ಸೇವಾ ನಿವೃತ್ತಿ

Suddi Udaya

ಉಜಿರೆ: ಶ್ರೀ ಧ.ಮಂ. ಸ್ನಾತಕೋತ್ತರ ಕಾಲೇಜಿನಲ್ಲಿ ಮಹಿಳಾ ಉದ್ಯಮಿಗಳ ಅವಕಾಶಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಕ್ಯಾಂಡಿಡ್ ಟಾಕ್ ಕಾರ್ಯಕ್ರಮ

Suddi Udaya

ಶಿರ್ಲಾಲು ಗ್ರಾಮ ಸಭೆ: ಶಿರ್ಲಾಲುವಿನಲ್ಲಿರುವ ಗೋಮಾಲಾ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ಧಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!