22.2 C
ಪುತ್ತೂರು, ಬೆಳ್ತಂಗಡಿ
September 16, 2026
ತಾಲೂಕು ಸುದ್ದಿಬೆಳ್ತಂಗಡಿ

ಮದ್ದಡ್ಕ: 15 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ವತಿಯಿಂದ 15 ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.13-14 ರoದು ವೆಲ್ಕo ಯೂತ್ ಕ್ಲಬ್ ಬಯಲು ರಂಗಮಂದಿರದಲ್ಲಿ ಅರ್ಚಕರಾದ ಗೋಪಾಲಕೃಷ್ಣ ಐತಾಳ್ ಕುತ್ಯಾರು ಬೆಳ್ತಂಗಡಿ ಇವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ವಿಜ್ರoಭಣೆಯಿಂದ ಜರಗಿತು.

ಸೆ.13 ರoದು ಗೌರಿ ಪೂಜೆ, ಗುಲಾಬಿ ಮತ್ತು ತoಡದವರಿoದ ಭಜನಾ ಕಾರ್ಯಕ್ರಮ, ಜಿ ಎಲ್ ಕುಡ್ಲ ಮೆಲೋಡಿಸ್ ತoಡದವರಿoದ ಸoಗೀತ ರಸಮoಜರಿ ಹಾಗೂ ತುಳಸಿ ವಸoತ ಮತ್ತು ಬಳಗ‌ ಪಣಕಜೆ ಇವರಿoದ ಸ್ಯಾಕ್ಸೋಫೋನ್ ವಾದನ, ತಾoಬೂಲ ಕಲಾವಿದರು ಪೂoಜಾಲಕಟ್ಟೆ ಇವರಿoದ ಹಾಸ್ಯಮಯ ನಾಟಕ ಸoಕಲೆ ಎoಬ ನಾಟಕ ಪ್ರದರ್ಶನ ನಡೆಯಿತು.

ಸೆ.14 ರoದು ಬೆಳಿಗ್ಗೆ ಗಣಪತಿ ದೇವರ ಪ್ರತಿಷ್ಠೆ ನಡೆಯಿತು. ತದ ನಂತರ ಸಮಿತಿಯ ಅಧ್ಯಕ್ಷ ತರುಷ್ ಜೆ ಹೇರಾಜೆ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಹಾಗೂ ಆಟೋಟ ಸ್ಪರ್ಧೆಗಳ ಉದ್ಘಾಟನೆಯನ್ನು ಅತಿಥಿಗಳಾದ ದಿವ್ಯ ಪ್ಯಾಸ್ ಮದ್ದಡ್ಕ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪದ್ಮನಾಭ ಶಿಲ್ಪಿ ಶ್ರೀ ಚಾಮುಂಡೇಶ್ವರಿ ಶಿಲ್ಪ ಕಲಾ ಕೇಂದ್ರ, ಸುಜಿತಾ ವಿ ಬoಗೇರ ಬೆಳ್ತಂಗಡಿ ಉಪಸ್ಥಿತರಿದ್ದರು. ಸಮಿತಿಯ ಗೌರವ ಸoಚಾಲಕರಾದ ಜಯರಾಮ ಶೆಟ್ಟಿ ಮುoಡಾಡಿ ಗುತ್ತು ಇವರು ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲಾ ಮಕ್ಕಳ ಕಬಡ್ಡಿ ಪoದ್ಯಾಟದ ಕ್ರಿಡಾoಗಣವನ್ನು ಉದ್ಘಾಟಿಸಿದರು. ನoತರ ಮಕ್ಕಳಗೆ ಮಹಿಳೆಯರೀಗೆ ಪುರುಷರೀಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಸಮಿತಿಯ ಪದಾಧಿಕಾರಿಗಳು ನಡೆಸಿ ಕೊಟ್ಟರು ಮಧ್ಯಾಹ್ನ ಮಹಾಪೂಜೆ ಮಹಾ ರoಗ ಪೂಜೆ ‌ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು ಸಾಯoಕಾಲ ನಡೆದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು ಎಕ್ಸೆಲ್ ಪಿ ಯು ಕಾಲೇಜು ಗುರುವಾಯನಕೆರೆ ಇವರು ವಹಿಸಿದ್ದರು‌ ಮುಖ್ಯ ಅತಿಥಿಗಳಾಗಿ ಕೆ ಪಿ ಸಿ ಸಿ ಇದರ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿ. ಗುರು ನಾರಾಯಣ ಸಮಾಜ ಸೇವಾ ಸಂಘ ಸಿದ್ದಕಟ್ಟೆ ಇದರ ಅಧ್ಯಕ್ಷರಾದ ಕಿರಣ್ ಕುಮಾರ್ ಮಂಜಿಲ. ಲ: ದೇವದಾಸ್ ಶೆಟ್ಟಿ ಹಿಬರೋಡಿ. ಪ್ರವೀಣ್ ಫೆರ್ನಾಂಡಿಸ್ ಹಳ್ಳಿ ಮನೆ ಉಜಿರೆ. ಹಾರಿಸ್ ಎಚ್ ಎಸ್ ಫ್ಯಾಮಿಲಿ ಮದ್ದಡ್ಕ. ನಿವೃತ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ ಹೇರಾಜೆ. ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನೂಪ್ ಬಂಗೇರ. ಸ್ಥಾಪಕ ಅಧ್ಯಕ್ಷರಾದ ಬಾಲಕೃಷ್ಣ ಶೆಣೈ ಮದ್ದಡ್ಕ. ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಗೋಪಿನಾಥ್ ನಾಯಕ್ ಗುರುವಾಯನಕೆರೆ. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ಹಾಗೂ ಕಾರ್ಯಕ್ರಮದ ಮಹಾ ಪೋಷಕರಿಗೆ ಗೌರವಾರ್ಪಣೆ ಮಾಡಲಾಯಿತು ಕಾರ್ಯಕ್ರಮವನ್ನು ಯುವರಾಜ್ ಮತ್ತು ಶಾoತ ಜೆ ಬಂಗೇರ ನಿರೂಪಿಸಿದರು ದಿಶಾಲಿ ಪ್ರಾರ್ಥನೆ ಗೈದರು ಪದ್ಮನಾಭ ಸಾಲಿಯಾನ್ ಮಾಲಾಡಿ ಸ್ವಾಗತಿಸಿ ಉಮೇಶ್ ಕುಮಾರ್ ಮದ್ದಡ್ಕ ಧನ್ಯವಾದ ನೀಡಿದರು ಕಾರ್ಯಕ್ರಮದ ಯಶಸ್ಸಿಗೆ ಗಣೇಶೋತ್ಸವ ಸಮಿತಿಯ ಸಂಘಟಕ ಚಂದ್ರಹಾಸ ಕೇದೆ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಸಹಕಾರ ನೀಡಿದರು ರಾತ್ರಿ ವಿಶೇಷವಾಗಿ ಎಕ್ಸೆಲ್ ಸಮೂಹ ಸಂಸ್ಥೆಯ ವತಿಯಿಂದ ಎಕ್ಸೆಲ್ ಪಿಲಿ ನಲಿಕೆ ವಿವಿಧ ಟ್ಯಾಬ್ಲೋ ನಾಸಿಕ್ ಬ್ಯಾಂಡ್ ಗಣಪತಿ ದೇವರ ಶೋಭಾಯಾತ್ರೆ ಮದ್ದಡ್ಕದಿoದ ಹೊರಟು ಸಬರಬೈಲು ಕೆರೆಯಲ್ಲಿ ಜಲಸ್ತoಭನ ನಡೆದು ಕೆ ಆರ್ ಬಳ್ಳಾಳ್ ಇವರ ಮನೆಯಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ( ವರದಿ ಮನು ಮದ್ದಡ್ಕ)

Related posts

ಮುಂಡಾಜೆ ಸೀಟು-ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತ್ಯು

Suddi Udaya

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಫ್‌ಎಸ್ಎಲ್ ವರದಿ ಬರುವವರೆಗೂ ಎಸ್‌ಐಟಿ ತನಿಖೆ ಸ್ಥಗಿತ: ಗೃಹ ಸಚಿವ ಪರಮೇಶ್ವರ್

Suddi Udaya

ಅಳದಂಗಡಿ ಅರಮನೆಯ ಅರಸರಿಂದ ಮತದಾನ: ಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು

Suddi Udaya

ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಹುದ್ದೆಯಿಂದ ಕೊಕ್ಕಡ ಕೊಲ್ಲಾಜೆ ನಿವಾಸಿ ಪವನ್ ಸಾಲ್ಯಾನ್ ಗೆ ಮುಕ್ತಿ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ನಾಲ್ಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಯೋಜನೆಯಡಿ ಮಂಜೂರಾದ ವಾಕಿಂಗ್ ಸ್ಟಿಕ್ ಹಸ್ತಾಂತರ

Suddi Udaya
error: Content is protected !!