September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿನ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೆ. 15 ರಂದು ಕಾಲೇಜಿನಲ್ಲಿ ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ ಉದ್ಘಾಟಿಸಿ ಮಾತನಾಡಿದರು, ಸರ್ ಎಂ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಶ್ರೇಷ್ಠ ಇಂಜಿನಿಯರ್ ಮತ್ತು ಆಡಳಿತಗಾರರಷ್ಟೇ ಅಲ್ಲದೆ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಐತಿಹಾಸಿಕ ಕೊಡುಗೆ ನೀಡಿದ ಮಹಾನ್ ದೇಶಭಕ್ತರಾಗಿದ್ದಾರೆ. ಅವರ ಬುದ್ಧಿಶಕ್ತಿ ಮತ್ತು ಪ್ರಾಮಾಣಿಕತೆ ಅಪಾರವಾಗಿತ್ತು. ಮೈಸೂರಿನ ಕೃಷ್ಣರಾಜಸಾಗರ ಅಣೆಕಟ್ಟು ಅವರ ಅದ್ಭುತ ತಾಂತ್ರಿಕ ಜ್ಞಾನಕ್ಕೆ ಸಾಕ್ಷಿಯಾಗಿದೆ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಅವಧಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಸಿಕ್ಕ ಪ್ರೋತ್ಸಾಹ ಅನನ್ಯವಾದುದು. ಎಂದರು.

ಅವರಂತೆ ಸಮಾಜದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಂಡಾಗ ಮಾತ್ರ ನಮ್ಮ ಶಿಕ್ಷಣಕ್ಕೆ ನಿಜವಾದ ಸಾರ್ಥಕತೆ ಸಿಗುತ್ತದೆ. ದೇಶದ ಪ್ರಗತಿಯು ಕೇವಲ ಇಟ್ಟಿಗೆ-ಸಿಮೆಂಟ್‌ಗಳಿಂದ ಆಗುವುದಿಲ್ಲ, ಅದು ಯುವಕರ ದೇಶಪ್ರೇಮ, ಪರಿಶ್ರಮಾ ತ್ಯಾಗ, ಮತ್ತು ಸೃಜನಶೀಲತೆಯಿಂದ ನಿರ್ಮಾಣವಾಗುತ್ತದೆ ಎಂದು ನುಡಿದರು..

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

ಆಧುನಿಕ ಕರ್ನಾಟಕ ನಿರ್ಮಾತ್ರಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮುಂಚೂಣಿಯಲ್ಲಿ ಇರುವವರು. ಅವರ ಆಲೋಚನೆ ಚಿಂತನೆಗಳಿಂದ ಕರ್ನಾಟಕ ಪ್ರಗತಿ ಕಂಡಿದೆ. ಅವರ ರೂಪಿಸಿದ ಕೈಗಾರಿಕೆ ನೀರಾವರಿ ಬ್ಯಾಂಕು ಸಾರಿಗೆ ಮುಂತಾದ ಯೋಜನೆಗಳು ಕನ್ನಡ ನಾಡು ವಿಕಾಸ ಒಂದನ್ನು ಸಹಕಾರಿಯಾಯಿತು. ಅವರ ಪ್ರಾಮಾಣಿಕತೆ, ಇಂದಿನ ಯುವ ಸಮುದಾಯಕ್ಕೆ ಅಧಿಕಾರಿಗಳಿಗೆ ಅತ್ಯಂತ ದೊಡ್ಡ ಪಾಠ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು..

ಕಾರ್ಯಕ್ರಮವನ್ನು ಕಾಲೇಜಿನ ಕಲಾ ವಿಭಾಗದ ಡೀನ್ ಮತ್ತು ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೊಜ್ಜಮ್ಮ ಕೆ ಎನ್ ಸ್ವಾಗತಿಸಿ, ತೃತೀಯ ಐಚ್ಚಿಕ ಕನ್ನಡ ವಿದ್ಯಾರ್ಥಿಗಳಾದ ನಿಶ್ಮಿತ ವಂದಿಸಿ, ವಿಂಧ್ಯ ನಿರೂಪಿಸಿದರು.

Related posts

ಬಂದಾರು: ಕುಂಟಾಲಪಲ್ಕೆ ಕಲ್ಲರ್ಬಿ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ: ಮಣ್ಣು ತೆರವು ಕಾರ್ಯ

Suddi Udaya

ಗರ್ಡಾಡಿ: ಸತ್ಯ ಶೋಧಕ ವೇದಿಕೆಯಿಂದ ಹಚ್ಚಾಡಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ‘ಮ್ಯೂಸಿಯಂ ಆನ್ ವೀಲ್’ ಕಾರ್ಯಾಗಾರ

Suddi Udaya

ಆ.23: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಸುಲ್ಕೇರಿ ಅ.ಹಿ. ಪ್ರಾ. ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ನಂತರ ಮುಂದೇನು ವಿಶೇಷ ಕಾರ್ಯಾಗಾರ

Suddi Udaya
error: Content is protected !!