30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಪ್ಯಾಕ್ಸ್ ಮಹಾಸಭೆ : ರೂ.1.02.ಕೋಟಿ ಲಾಭ ಗಳಿಸಿ, ಸದಸ್ಯರಿಗೆ ಶೇ. 20 ಡಿವಿಡೆಂಡ್,  ಪ್ರಗತಿಯ ಹಾದಿಯಲ್ಲಿ ಸಹಕಾರಿ ಸಂಘ : ಪದ್ಮನಾಭ ಸಾಲ್ಯಾನ್

ಬೆಳ್ತಂಗಡಿ : ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26 ನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸೆ. 21 ರಂದು ಸಂಘದ ಸಭಾ ಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್  ನಮ್ಮ ಸಂಘವು ಕಳೆದ ಕೆಲವು ವರ್ಷಗಳಿಂದ ಹಂತ ಹಂತವಾಗಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಹಿಂದಿನ ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದಾಗ ಸದಸ್ಯರ ಸಂಖ್ಯೆ, ಠೇವಣಿ, ಸಾಲ ವಿತರಣೆ, ಒಟ್ಟು ವ್ಯವಹಾರ ಹಾಗೂ ಲಾಭದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಇದು ಕೇವಲ ಸಂಘದ ಅಂಕಿ-ಅಂಶಗಳ ಬೆಳವಣಿಗೆ ಮಾತ್ರವಲ್ಲ. ಸದಸ್ಯರ ವಿಶ್ವಾಸ ಮತ್ತು ಸಂಘದ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂಬುದಕ್ಕೆ  ಸಂಘವು ವರದಿ ವರ್ಷದಲ್ಲಿ 1.90 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ, ರೂ.1.02.13,388.45 ಲಾಭ ಗಳಿಸಿ, ಸದಸ್ಯರಿಗೆ ಶೇ. 20% ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ನಮ್ಮ ಸಂಘದ ಮತ್ತೊಂದು ಪ್ರಮುಖ ಸಾಧನೆಯೆಂದರೆ ಹೊಸ ಕಟ್ಟಡ ನಿರ್ಮಾಣವಾಗಿರುವುದು. ಹೊಸ ಕಟ್ಟಡದ ಮೂಲಕ ಸದಸ್ಯರಿಗೆ ಇನ್ನಷ್ಟು ಉತ್ತಮ ವಾತಾವರಣದಲ್ಲಿ ಸೇವೆ ನೀಡಲು ಸಾಧ್ಯವಾಗಿದೆ. ಇದು ನಮ್ಮ ಸಂಘದ ಅಭಿವೃದ್ಧಿಯಲ್ಲಿ ಒಂದು ಮಹತ್ತರ ಮೈಲಿಗಲ್ಲಾಗಿದೆ.

ಈ ಎಲ್ಲಾ ಸಾಧನೆಗಳ ಹಿಂದೆ ಆಡಳಿತ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಯ ಪರಿಶ್ರಮ ಹಾಗೂ ನಮ್ಮ ಎಲ್ಲಾ ಸದಸ್ಯರ ಸಹಕಾರಕ್ಕೆ ಅಭಿವಂಧನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡುವುದು, ಸಂಘದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸದಸ್ಯರ ಅಗತ್ಯಗಳಿಗೆ ಸ್ಪಂದಿಸುವುದರೊಂದಿಗೆ ವಿತ್ತೀಯ ಸವಾಲುಗಳನ್ನೆದುರಿಸಿ ಸಧೃಡವಾಗಿ ಬೆಳೆದು ಸಹಕಾರ ಕ್ಷೇತ್ರದಲ್ಲಿ ಮತ್ತಷ್ಟು ಅಗ್ರಸ್ಥಾನ ತಲುಪಲು ತಮ್ಮೆಲ್ಲರ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ಅವಲೋಕನ ಮಾಡುವುದಾಗಿ ಹೇಳಿದರು.

ನಿರ್ದೇಶಕರಾದದ ಗಣೇಶ್ ಅರ್ಕಜೆ, ಮೋಹನ್ ಗೌಡ, ಸುಜಾತಾ ಪಿ ಸಾಲ್ಯಾನ್, ರಾಜೇಶ್ ನಾಯ್ಕ, ಬೇಬಿ, ಆನಂದ, ಚಿತ್ತರಂಜನ್ ಕೆ., ತುಂಗಪ್ಪ, ಉಮೇಶ್, ಜಯರಾಮ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಗುಮಾಸ್ತೆ ಎಕಲತಾ ಪಿ. ಶೆಟ್ಟಿ ಪ್ರಾರ್ಥಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಯಕ್ಷಣ್ ವರದಿ ವಾಚಿಸಿ, ಸಂಘದ ಉಪಾಧ್ಯಕ್ಷ  ಶ್ರೀಧರ ಪೂಜಾರಿ ಕೆ., ಸ್ವಾಗತಿಸಿ,  ನಿರ್ದೇಶಕ ಮೋಹನ್ ಗೌಡ ವಂದಿಸಿ, ಮಾರಟ ವಿಭಾಗ ಗುಮಾಸ್ತೆ  ಸೌಜನ್ಯ ಎನ್. ಬಿ. ನಿರೂಪಿಸಿದರು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಸದಸ್ಯರ ಭೇಟಿ

Suddi Udaya

ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್: ನೂತನ ನಗರ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ ನೇಮಕ

Suddi Udaya

ಶಾಂತಿಶ್ರೀ ‘ ಜೈನ ಮಹಿಳಾ ಸಮಾಜದ ವತಿಯಿಂದ, ‘ ಶೈಕ್ಷಣಿಕ ಕಾರ್ಯಕ್ರಮ ‘

Suddi Udaya

ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಫಾತಿಮ ನುಝೈರ

Suddi Udaya

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡುವಂತೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಅರಣ್ಯ ಸಚಿವರಿಗೆ ಮನವಿ

Suddi Udaya
error: Content is protected !!