23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ ಪರಿಸರದಲ್ಲಿ ಎರಡು ದಿನಗಳಲ್ಲಿ 4 ಕಾಡಂದಿಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ; ಮಿದುಳು ಜ್ವರದಿಂದ ಸಾವು ಸ್ಥಳೀಯರ ಶಂಕೆ

ನಡ: ನಡ ಗ್ರಾಮದ ಪರಿಸರದಲ್ಲಿ ಕಳೆದ ಎರಡು ದಿನಗಳಲ್ಲಿ ನಾಲ್ಕು ಕಾಡು ಹಂದಿಗಳು ಸಾವನ್ನಪ್ಪಿರುವುದು ಕಂಡು ಬಂದಿದ್ದು, ಕಾಡು ಹಂದಿಗಳು ಮಿದುಳು ಜ್ವರದಿಂದ ಸಾವನ್ನಪ್ಪಿರಬಹುದೆಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ನಡ ಗ್ರಾಮದ ಪ್ರೌಢ ಶಾಲಾ ಬಳಿ ಕಾಡಿನಲ್ಲಿ ನಿನ್ನೆ ಆ.20ರಂದು ಎರಡು ಕಾಡುಹಂದಿಗಳ ಶವ ಪತ್ತೆಯಾಗಿದೆ. ಎರಡು ಶವಗಳು ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಸ್ಥಳೀಯರು ಇದನ್ನು ದಫನ ಮಾಡಿದ್ದರು. ಆ.21 ಇಂದು ನಡ ಗ್ರಾಮದ ಕರ್ಮಿಲೆಟ್ ಗೋವಿಯಸ್ ಇವರ ರಬ್ಬರ ತೋಟದಲ್ಲಿ ಎರಡು ಕಾಡಿನ ಹಂದಿಗಳು ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಗಣ್ಯರಾದ ಶ್ಯಾಮಸುಂದರ್ ನಡ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕುದುರೆಮುಖ ರಕ್ಷಿತಾರಣ್ಯದಿಂದ ಕಾಡಾಂದಿಗಳು ಈ ಪ್ರದೇಶಕ್ಕೆ ಬರುತ್ತಿದ್ದು, ಹಂದಿಗಳು ಯಾವುದಾದರೂ ಕಾಯಿಲೆಯಿಂದ ಮೃತಪಟ್ಟಿರಬಹುದೇ ಅಥವಾ ಕಿಡಿಗೇಡಿಗಳು ಇಟ್ಟ ವಿಷದಿಂದ ಈ ರೀತಿ ಆಗಿರಬಹುದೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಕಾಡು ಹಂದಿಗಳ ತಲೆಯ ಭಾಗ ಕೊಳೆತು ಹೋಗಿರುವುದರಿಂದ ಮಿದುಳು ಜ್ವರದಿಂದ ಸಾವನ್ನಪ್ಪಿರಬಹುದೆಂಬ ಶಂಕೆ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ.

Related posts

ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆ: ಕೊಕ್ರಾಡಿ ಸ.ಪ್ರೌ. ಶಾಲೆಯ ಶಿಕ್ಷಕಿ ಅಕ್ಕಮ್ಮ ರವರಿಗೆ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ವತಿಯಿಂದ ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಖಂಡಿಸಿ ಪಂಜಿನ ಮೆರವಣಿಗೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ವಿಜೃಂಭಣೆಯ ಎಕ್ಸೆಲ್ ಪರ್ಬ, ಪ್ರತಿಭಾ ಪುರಸ್ಕಾರ

Suddi Udaya

ಮಳೆ ಹಾನಿ- ವಿಪತ್ತು ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ

Suddi Udaya

ಊರಿಗೆ ವನ್ಯಜೀವಿ ಬಂದರೆ 1926ಗೆ ಕರೆ ಮಾಡಿ: ಸಚಿವ ಈಶ್ವರ ಬಿ ಖಂಡ್ರೆ

Suddi Udaya

ಮಾಲಾಡಿ : ಕಸ ಎಸೆದವರಿಂದಲೇ ಹೆಕ್ಕಿಸಿ ರೂ.5 ಸಾವಿರ ದಂಡ ವಿಧಿಸಿದ ಮಾಲಾಡಿ ಗ್ರಾಮ ಪಂಚಾಯತ್

Suddi Udaya
error: Content is protected !!