29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘ ಹಾಗೂ ಕುಂಭಶ್ರೀ ವೈಭವ ಸಮಿತಿ ಸಭೆ

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಸೆ.19 ರಂದು ಶಿಕ್ಷಕ-ರಕ್ಷಕ ಸಂಘ ಹಾಗೂ ಕುಂಭಶ್ರೀ ವೈಭವ ಸಮಿತಿಯ ಸಭೆಯನ್ನು ಆಯೋಜಿಸಲಾಯಿತು.

ಸಭೆಯಲ್ಲಿ “ನಮ್ಮೂರ ಜಾತ್ರೆ – ಕುಂಭಶ್ರೀ ವೈಭವ” ಎಂಬ ಅದ್ದೂರಿ ಕಾರ್ಯಕ್ರಮದ ಪೂರ್ವತಯಾರಿ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ 05-12-2026 ರಂದು “ನಮ್ಮೂರ ಜಾತ್ರೆ – ಕುಂಭಶ್ರೀ ವೈಭವ” ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಖರ್ಚು-ವೆಚ್ಚಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಸ್ಥಾಪಕ ಗಿರೀಶ್ ಕೆ.ಎಚ್. ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಂಭಶ್ರೀ ವಿದ್ಯಾಸಂಸ್ಥೆಯು ಉತ್ತಮ ಮಟ್ಟದಲ್ಲಿ ಬೆಳೆಯಲು ಪೋಷಕರ ಸಹಕಾರ ಮತ್ತು ಬೆಂಬಲವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಅವರು ಮಾತನಾಡಿ, “ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಯಾವುದೇ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಡೆಸಬಹುದು” ಎಂದು ತಿಳಿಸಿದರು.

ಕುಂಭಶ್ರೀ ವೈಭವ ಸಮಿತಿಯ ಕಾರ್ಯದರ್ಶಿ ವಸಂತ್ ಪಡಿಲ್ ಮಾತನಾಡಿ, ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್. ಅವರು ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ, ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. “ಊರಿಗೊಂದು ದೇವಸ್ಥಾನ, ಶಾಲೆಗೊಂದು ಗ್ರಂಥಾಲಯ” ಎಂಬ ಆಶಯದಂತೆ, ಕುಂಭಶ್ರೀ ವಿದ್ಯಾಸಂಸ್ಥೆಯು 30 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಗ್ರಂಥಾಲಯವನ್ನು ನಿರ್ಮಿಸಲು ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಕುಂಭಶ್ರೀ ವೈಭವ ಸಮಿತಿಯ ಗೌರವಾಧ್ಯಕ್ಷ ಅಶ್ವಿತ್ ಕುಲಾಲ್, ಪಡಂಗಡಿ, ಕುಂಭಶ್ರೀ ವೈಭವ ಸಮಿತಿಯ ಅಧ್ಯಕ್ಷ ಸುರೇಶ್ ಪೊಯ್ಯಗುಡ್ಡೆ, ಕಾಲೇಜಿನ ಕುಂಭಶ್ರೀ ವೈಭವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುನಿತಾ ಫೆರ್ನಾಂಡಿಸ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶೈಲಾಶ್ರೀ, ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಜಾತ, ಎಲ್ಲಾ ಉಪಾಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ್ , ಸಂಸ್ಥೆಯ ಅಕಾಡೆಮಿಕ್ ಅಡ್ವೈಸರ್ ಮನೋಜ್, ಎಲ್ಲಾ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ್ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.
ಸಭೆಯನ್ನು ಕಾಲೇಜಿನ ಉಪನ್ಯಾಸಕಿ ಶರಣ್ಯ ನಿರೂಪಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕ ಸುಮನ್ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ವೇತಾ ವಂದಿಸಿದರು.

Related posts

ಶಿಬಾಜೆ ಯುವಕನಿಗೆ ಜಾತಿನಿಂದನೆ ಕೊಲೆ ಬೆದರಿಕೆ : ಆರೋಪಿಗಳ ಬಂಧನ

Suddi Udaya

ನ.29 ರಂದು ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ: ಸುಮಾರು 7ಕ್ಕೂ ಹೆಚ್ಚು ಸಂಸ್ಥೆಗಳ ಸಹಕಾರ ನಾನಾ ಕ್ರಮ ಹಾಗೂ ಬೇಡಿಕೆಗಳು ಹಾಗೂ ಅಂಶಗಳನ್ನು ಬೆಳೆಗಾರರ ಪರವಾಗಿ ಸರಕಾರಗಳ ಮುಂದಿಟ್ಟು ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶ

Suddi Udaya

ನಾಳ ದೇಗುಲದ ಗದ್ದೆಯಲ್ಲಿ ನೇಜಿ ನಾಟಿ

Suddi Udaya

ಗುರಿಪಳ್ಳ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗಿಡನಾಟಿ, ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳದಲ್ಲಿ ಬಿಜೆಪಿ ಪ್ರಶಿಕ್ಷಣ ವರ್ಗ ಆರಂಭ

Suddi Udaya

ಯಕ್ಷಭಾರತಿ ಕನ್ಯಾಡಿಯಿಂದ ಕೇಶವ ಎಂ. ರವರಿಗೆ ಚಿಕಿತ್ಸಾ ನೆರವು

Suddi Udaya
error: Content is protected !!