29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡoತ್ಯಾರು ಎಸ್ ಪಿ ವೈ ಎಸ್ ಎಸ್ ಸಮಿತಿಯಿಂದ ಮಾತೃ ವಂದನಾ ಮಾತೃ ಭೋಜನ ವಿಶೇಷ ಕಾರ್ಯಕ್ರಮ

ಮಡoತ್ಯಾರು: ಮಾತೃ ವಂದನಾ ಮಾತ್ರ ಭೋಜನ ಕಾರ್ಯಕ್ರಮವು ಎಸ್ ಪಿ ವೈ ಎಸ್ ಎಸ್ ಸಮಿತಿ ಮಹಿಷ ಮರ್ದಿನಿ ಶಾಖೆ ಮಡoತ್ಯಾರು ಇಲ್ಲಿ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯಲ್ಲಿ ಸೆ 20 ರoದು ಮಾತೃ ವಂದನಾ ಮಾತೃ ಭೋಜನ ವಿಶೇಷ ಕಾರ್ಯಕ್ರಮವು ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮ್ಯ ವಹಿಸಿದ್ದರು. ಯೋಗ ತರಬೇತಿಯ ಬಗ್ಗೆ ವಿಶೇಷ ಭಾಷಣಗಾರರಾದ ಲೋಕೇಶ್ ಮಾತನಾಡಿ ನಮ್ಮ ಜೀವನದಲ್ಲಿ ಅಮ್ಮನ ಪಾತ್ರದ ಬಗ್ಗೆ ನೆನಪಿಸಿ ಹೆತ್ತವರನ್ನು ಹಿರಿಯರನ್ನು ನಾವು ಯಾವಾಗಲೂ ಗೌರವದಿಂದ ನಡೆಸುಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಗಾಯತ್ರಿ ರಾವ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಯೋಗ ಶಿಕ್ಷಕರು ಯೋಗ ತರಬೇತಿ ಪಡೆದವರು ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗಾಪಟುಗಳು ತಯಾರಿಸಿದ ಆಹಾರವನ್ನು ಕೈತುತ್ತಿನ ಮೂಲಕ ವಿತರಿಸುವ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮವು ಬಹು ಸುಂದರ ಹಾಗೂ ಸರಳವಾಗಿ ನಡೆದು ಪ್ರಕೃತಿಯಿಂದ ದೊರೆಯುವ ವಸ್ತುಗಳಿಂದ ವೇದಿಕೆಯನ್ನು ಅಲಂಕರಿಸಲಾಗಿತ್ತು ಹಿoದೂ ಸಂಸ್ಕೃತಿಯ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವಂತಹ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು.

ಕಾರ್ಯಕ್ರಮವನ್ನು ಸುರೇಖ ನಿರೂಪಿಸಿ, ನೇತ್ರಾವತಿ ಸ್ವಾಗತಿಸಿದರು. ಸೂರ್ಯಕಲಾ ವರದಿ ಓದಿದರು. ವೇದಿಕಾ ವಂದನಾರ್ಪಣೆ ಮಾಡಿದರು.

Related posts

ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿ ಜಯಚಂದ್ರ ಬಂಧನ

Suddi Udaya

ಪವಿತ್ರ ಹೃದಯ ಭಗೀನಿಯರ ಸಭೆ: ಬೆಳ್ತಂಗಡಿ ಧರ್ಮ ಪ್ರಾಂತ್ಯವಲಯಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ

Suddi Udaya

ಚಾರ್ಮಾಡಿ ತ್ರಿವರ್ಣ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

Suddi Udaya

ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲ ದೊರೆರಾಜು

Suddi Udaya

ಬೆಳ್ತಂಗಡಿ: ರತ್ನತ್ರಯತೀರ್ಥಕ್ಷೇತ್ರದಲ್ಲಿ ಪ್ರೊ. ನಾ’ವುಜಿರೆ ಸ್ಮರಣಾರ್ಥ ಶಾಸ್ತ್ರದಾನ ಕೃತಿ ಲೋಕಾರ್ಪಣೆ

Suddi Udaya

ಮೇಲಂತಬೆಟ್ಟು: ಶಾಂತಿನಗರ ನಿವಾಸಿ ಐಸಾಕ್ ಡಿಸೋಜಾ ನಿಧನ

Suddi Udaya
error: Content is protected !!