September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರುಡ್‌ಸೆಟ್ ಸಂಸ್ಥೆಯಲ್ಲಿ ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಕನಸಿಯಲ್ಲದವರಿಗೆ ದಾರಿ ಇರುವುದಿಲ್ಲ ಎಲ್ಲರೂ ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಮತ್ತು “ಕಲಿತ ಕೌಶಲ್ಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರ ಮೂಲಕ ಇನ್ನಷ್ಟು ನೈಪುಣ್ಯವನ್ನು ಗಳಿಸಬೇಕು. ಗ್ರಾಹಕರ ತೃಪ್ತಿಗೆ ಆದ್ಯತೆ ನೀಡಿ ಪ್ರಾಮಾಣಿಕತೆ ಹಾಗೂ ಗುಣಮಟ್ಟದೊಂದಿಗೆ ಸೇವೆ ನೀಡಿದಾಗ ಉದ್ಯಮದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ” ಎಂದು ದಸ್ಕತು ಸಿನಿಮಾದ ನಾಯಕ ನಟ ದೀಕ್ಷಿತ್ ಶುಭ ಹಾರೈಸಿದರು.

ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಮದುಮಗಳ ಶೃಂಗಾರ (Bridal Makeup) ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ, ತರಬೇತಿ ಪಡೆದ ಸಂಸ್ಥೆಯನ್ನು ಯಾವತ್ತಿಗೂ ಮರೆಯಬೇಡಿ, ನಿರಂತರ ಸಂಪರ್ಕದಲ್ಲಿ ಇರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮಾತನಾಡಿ, “ತರಬೇತಿ ಪೂರ್ಣಗೊಂಡ ನಂತರವೂ ಕಲಿಕೆಯನ್ನು ನಿಲ್ಲಿಸಬಾರದು. ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಮತ್ತು ಹೊಸ ಶೈಲಿಗಳನ್ನು ಕಲಿತುಕೊಳ್ಳಬೇಕು. ಕೌಶಲ್ಯ, ಗುಣಮಟ್ಟ, ಶಿಸ್ತು ಮತ್ತು ಗ್ರಾಹಕರ ವಿಶ್ವಾಸವನ್ನು ಆಧಾರವಾಗಿಟ್ಟುಕೊಂಡು ಉದ್ಯಮವನ್ನು ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕರಾದ ಸುನಿಲ್ ಜಿ. ನಾಯಕ್ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಅವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ಶ್ವೇತಾ, ಪ್ರಾರ್ಥನೆ ಮಾಡಿದರು, ಶ್ರೀಮತಿ ಗೀತಾ ಪ್ರವೀಣ್‌ ಮತ್ತು ಕುಮಾರಿ ಕೀರ್ತನಾ ತಮ್ಮ ತರಬೇತಿ ಅನುಭವ ಹಂಚಿಕೊಂಡು.

Related posts

ಉಜಿರೆ ಗ್ರಾ.ಪಂ. ನಲ್ಲಿ ಮಹಿಳೆಯರಿಗೆ ಆರೋಗ್ಯ ಅರಿವು ಮತ್ತು ಆಟಿದ ಕಮ್ಮೆನ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ವಿವಿಧ ವಿಭಾಗದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸದಾನಂದ ಬಿ ಮುಂಡಾಜೆ ರವರಿಗೆ ಗ್ರಂಥಾಲಯ ವಿಭಾಗದಿಂದ ಬೀಳ್ಕೊಡುಗೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದರೆ ಪ.ಪಂ. ಸಹಾಯವಾಣಿ ತಿಳಿಸುವಂತೆ ಮುಖ್ಯಾಧಿಕಾರಿ ಮನವಿ

Suddi Udaya

ಮರೋಡಿ : 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ

Suddi Udaya

ಉಜಿರೆ: ಎಸ್.ಡಿ.ಎಂ. ಕಾಲೇಜು ಗ್ರಂಥಾಲಯದ ತುಕಾರಾಮ ಸಾಲಿಯಾನ್ ಸೇವಾ ನಿವೃತ್ತಿ

Suddi Udaya
error: Content is protected !!