September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ನಮ್ಮೆಲ್ಲರ ಹೆಮ್ಮೆಯ ಭಾಷೆ: ಕಿರಣ್ ಚಂದ್ರ ಡಿ. ಪುಷ್ಪಗಿರಿ

ಬೆಳ್ತಂಗಡಿ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ನಮ್ಮೆಲ್ಲರ ಹೆಮ್ಮೆಯ ಭಾಷೆ. ತುಳು ನಮಗೆ ಜೀವನಾಡಿ, ತಾಯಿ ಹಾಗೂ ತಾಯಿನೆಲದೊಂದಿಗೆ ಬೆಸೆದುಕೊಂಡಿರುವ ಮಾತೃಸಮಾನ ಭಾಷೆಯಾಗಿದೆ. ತುಳು ಭಾಷೆಗೆ ದೊರೆತಿರುವ ಗೌರವವು ತುಳುನಾಡಿನ ನಾಡು–ನುಡಿ, ಸಂಸ್ಕೃತಿ, ಆಚಾರ–ವಿಚಾರ, ಪರಂಪರೆ ಹಾಗೂ ಜೀವನ ಪದ್ಧತಿಗೆ ಸಂದ ಗೌರವವಾಗಿದೆ ಎಂದು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹೇಳಿದರು.

ಹಲವು ವರ್ಷಗಳ ಹೋರಾಟ, ಪರಿಶ್ರಮ ಹಾಗೂ ನಿರಂತರ ಪ್ರಯತ್ನಗಳ ಫಲವಾಗಿ ತುಳು ಭಾಷೆಗೆ ದೊರೆತಿರುವ ಮಾನ್ಯತೆ ಪ್ರತಿಯೊಬ್ಬ ತುಳುವನಿಗೂ ಸಂತಸ ಹಾಗೂ ಹೆಮ್ಮೆಯ ವಿಚಾರವಾಗಿದೆ. ತುಳುನಾಡಿನ ಶ್ರೀಮಂತ ಸಂಸ್ಕೃತಿ, ಕಲೆ, ಪರಂಪರೆ ಮತ್ತು ಜೀವನ ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ತುಳು ಭಾಷೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ತುಳು ಭಾಷೆಗೆ ಇನ್ನಷ್ಟು ಗೌರವ ಹಾಗೂ ಮಾನ್ಯತೆ ದೊರೆಯುವ ನಿಟ್ಟಿನಲ್ಲಿ ಸಂವಿಧಾನದ ಎಂಟನೇ ಅನುಸೂಚಿಗೆ ತುಳು ಭಾಷೆಯನ್ನು ಸೇರ್ಪಡೆಗೊಳಿಸಲು ಪ್ರಯತ್ನಗಳು ಮುಂದುವರಿಯಬೇಕು. ಮುಂದಿನ ಪೀಳಿಗೆಗೆ ತುಳು ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಪರಿಚಯಿಸಿ, ಅದರ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

Related posts

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ಆ.15-16: ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಕ್ಷಕ ನಮನ 2025, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿವೇತನ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಶಾಲಾರಂಭದ ಸಂಭ್ರಮ

Suddi Udaya

ಎಳನೀರಿನಲ್ಲಿ ಮೊಟ್ಟಮೊದಲ ಸಾಹಿತ್ಯ ಕಾರ್ಯಕ್ರಮ: ಸಾಹಿತ್ಯ ಮತ್ತು ಬದುಕು ವಿಷಯದ ಕುರಿತು ಕಾರ್ಯಕ್ರಮ

Suddi Udaya

ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಪಡೆದು ಇಂದಬೆಟ್ಟು ನಿವಾಸಿಗೆ ರೂ.35 ಸಾವಿರ ವಂಚನೆ

Suddi Udaya

ಕನ್ನಾಜೆ ಶ್ರೀ ದುರ್ಗಾ ಭಜನಾ ಮಂಡಳಿ ವತಿಯಿಂದ ಭಜಕರಿಗೆ ಪುಸ್ತಕ ವಿತರಣೆ

Suddi Udaya
error: Content is protected !!