ಬೆಳ್ತಂಗಡಿ: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು ,ದಕ್ಷಿಣ ಕನ್ನಡ ಜಿಲ್ಲಾ ಘಟಕ, ಬೆಳ್ತಂಗಡಿ ತಾಲೂಕು ಘಟಕ ಹಾಗೂ ಗುರುವಾಯನಕೆರೆ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮತ್ತು ಮೈಸೂರು ವಿಭಾಗ ಮಟ್ಟದ ಸಮಾವೇಶವನ್ನು ಹಾಗೂ ಸಾಧಕ ಶಿಕ್ಷಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.27 ರಂದು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಬೆಳ್ತಂಗಡಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಘಟನೆಯು ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ವಿಭಾಗದಿಂದ ಪ್ರೌಢ, ಪದವಿ ಪೂರ್ವ ಶಿಕ್ಷಣದವರೆಗೆ ಶಿಕ್ಷಕರ ಮತ್ತು ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಕಳೆದ 2 ವರ್ಷಗಳಿಂದ ಮಾಡಿಕೊಂಡು ಬಂದಿದೆ. ಹಾಗೂ ತಾಲೂಕು ಹಂತದಿಂದ ರಾಜ್ಯ ಹಂತದ ವರೆಗೆ ಯಾವುದೇ ಅರ್ಜಿಯನ್ನು ಸ್ವೀಕರಿಸದೇ ಅತ್ಯುತ್ತಮ ಶಿಕ್ಷಕರು ಮತ್ತು ನೌಕರರನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿ ಯನ್ನು ನೀಡುತ್ತಾ ಬರುತ್ತಿದೆ.
ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಹಾಗೂ ಮೈಸೂರು ವಿಭಾಗ ಮಟ್ಟದ ಸಮಾವೇಶವನ್ನು, ಅದರೊಂದಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಹಜ್ ಮತ್ತು ವಖ್ಫ್ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಮಾನ್ಯ ಯು ಟಿ ಖಾದರ್ ಫರೀದ್ ಅವರು ಉದ್ಘಾಟಿಸಲಿರುವರು.
ಘನ ಉಪಸ್ಥಿತಿಯಲ್ಲಿ ಮಾನ್ಯ ಮಧು ಬಂಗಾರಪ್ಪ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಸಚಿವರು, ಮಾನ್ಯ ಬಸವರಾಜ್ ರಾಯ ರೆಡ್ಡಿ ಉನ್ನತ ಶಿಕ್ಷಣ ಸಚಿವರು ಹಾಗೂ ಅಧ್ಯಕ್ಷತೆಯನ್ನು ಮಾನ್ಯ ಚೌಡಪ್ಪ ಎಸ್, ರಾಜ್ಯ ಅಧ್ಯಕ್ಷರು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಇವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಭೋಜೇ ಗೌಡ ಶಾಸಕರು ಕರ್ನಾಟಕ ವಿಧಾನ ಪರಿಷತ್, ಧನಂಜಯ ಸರ್ಜಿ ಮಾನ್ಯ ಶಾಸಕರು , ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು , ಪಿ ವಿ ಮೋಹನ್ ಶಾಸಕರು, ಐವನ್ ಡಿಸೋಜಾ ಶಾಸಕರು ಕರ್ನಾಟಕ ವಿಧಾನ ಪರಿಷತ್, ಶ್ರೀಮತಿ ಮಮತಾ ಡಿ ಎಸ್ ಗಟ್ಟಿ ಅಧ್ಯಕ್ಷರು ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಕಿಶೋರ್ ಕುಮಾರ್ ಬಿ ಆರ್ ಶಾಸಕರು, ಸುಮಂತ್ ಕುಮಾರ್ ಅಧ್ಯಕ್ಷರು ಎಕ್ಸಲ್ ಸಮೂಹ ಸಂಸ್ಥೆಗಳು ಗುರುವಾಯನಕೆರೆ, ಹರೀಶ್ ಕುಮಾರಿ ಮೆಸ್ಕಾಂ ಅಧ್ಯಕ್ಷರು, ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷರು ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ, ಎಂ ಪಿ ಶ್ರೀನಾಥ್ ಅಧ್ಯಕ್ಷರು ದಕ್ಷಿಣದ ಜಿಲ್ಲಾ ಸಾಹಿತ್ಯ ಪರಿಷತ್ ,ನವೀನ್ ಕುಮಾರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವಿಠಲ್ ಸಂಘಟನಾ ಕಾರ್ಯದರ್ಶಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ನಿಂಗೇ ಗೌಡ ಅಧ್ಯಕ್ಷರು, ಕ ರಾ ಪ ಪೂರ್ವ ಕಾಲೇಜು ಉಪನ್ಯಾಸಕರ ಸಂಘ, ಮಹಮ್ಮದ್ ರಿಯಾಜ್ ಜಿಲ್ಲಾಧ್ಯಕ್ಷರು ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಶಿವಪ್ರಸಾದ್ ಶೆಟ್ಟಿ ಜಿಲ್ಲಾಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ , ದಿಲೀಪ್ ಕುಮಾರ್ ಅಧ್ಯಕ್ಷರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹಾಗು ಶಿಕ್ಷಕರ ಸಂಘಟನೆಗಳ ವಿವಿಧ ವೃಂದಗಳ ಅಧ್ಯಕ್ಷರುಗಳು, ರಾಜ್ಯ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರು ಪ್ರೇಮನಾಥ್ ಶೆಟ್ಟಿ, ಕಾರ್ಯದರ್ಶಿ ಪ್ರತೀಪ ಎ ಆರ್, ಕೋಶಾಧಿಕಾರಿ ಪ್ರತಿಮಾ ಹೆಬ್ಬಾರ್, ರಾಜ್ಯ ಕಾರ್ಯದರ್ಶಿ ತ್ಯಾಗಮ್ ಹರೇಕಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಶೆರ್ಲಿ ಸುಮಾಲಿನಿ, ರಾಜ್ಯ ಪರಿಷತ್ ಸದಸ್ಯರು ಉದಯ್ ಕೆ , ಬೆಳ್ತಂಗಡಿ ತಾಲೂಕು ಅಧ್ಯಕ್ಷರು ರೋನಾಲ್ಡ್ ವಿನೇಜಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.












