29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಪುನಃಶ್ಚೇತನ ಶಿಬಿರ

ಪುಂಜಾಲಕಟ್ಟೆ: ಕೆ.ಪಿ.ಎಸ್. ಪ್ರೌಢಶಾಲೆ ಪುಂಜಾಲಕಟ್ಟೆಯಲ್ಲಿ ಮಡಂತ್ಯಾರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ 2026-27ನೇ ಸಾಲಿನ ಸ್ಕೌಟರ‍್ಸ್-ಗೈಡರ‍್ಸ್ , ಕಬ್‌ಮಾಸ್ಟರ‍್ಸ್ -ಫ್ಲೋಕ್‌ಲೀಡರ‍್ಸ್ ಗಳ   ಪುನಃಶ್ಚೇತನ ತರಬೇತಿ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷ ಹಾಜಿ|| ಅಬ್ದುಲ್ ಲತೀಫ್ ಸಾಹೇಬ್‌ರವರು ಉದ್ಘಾಟಿಸಿ,  ಯುವ ಜನತೆಯಲ್ಲಿ ದೈಹಿಕ ಸದೃಢತೆ, ಮಾನಸಿಕವಾಗಿ ಜಾಗೃತಿ ಮತ್ತು ನೈತಿಕವಾಗಿ ಪ್ರಾಮಾಣಿಕತೆಯನ್ನು ಬೆಳೆಸಬಲ್ಲ ಸ್ಕೌಟ್-ಗೈಡ್ ಶಿಕ್ಷಣ ಪ್ರತಿಯೊಂದು ಮಗುವಿಗೂ ಅತ್ಯಗತ್ಯ ಎಂದು ಹೇಳುತ್ತಾ ನಿಸ್ವಾರ್ಥವಾಗಿ ಇಂತಹ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ಎ.ಡಿ.ಸಿ.ಯವರಾದ ಜೆರಾಲ್ಡ್ ಫೆರ್ನಾಂಡಿಸ್, ಸಿ.ಆರ್.ಪಿ ಶ್ರೀಮತಿ ಚೇತನಾ, ಕೊಕ್ರಾಡಿ ಪ್ರೌಢಶಾಲೆಯ ಗೈಡ್ ಕ್ಯಾಪ್ಟನ್ ಅಕ್ಕಮ್ಮ, ಕೆ.ಪಿ.ಎಸ್.ಪ್ರೌಢಶಾಲೆ ಪುಂಜಾಲಕಟ್ಟೆಯ ನಿವೃತ್ತ ಶಿಕ್ಷಕಿ ಗೈಡ್ ಕ್ಯಾಪ್ಟನ್ ಸುಧಾ ಎಸ್ ಭಟ್, ಕುವೆಟ್ಟು ಸ.ಉ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಪೂರ್ಣಿಮ ಎಚ್.ಡಬ್ಲುö್ಯ.ಬಿ.(ಗೈಡ್) ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ದತ್ತಾತ್ರೇಯಗೊಲ್ಲ ಎ.ಡಿ.ಸಿ (ಸ್ಕೌಟ್)ರವರು ಸ್ವಾಗತಿಸಿದರು. ಸಹಕಾರ್ಯದರ್ಶಿ ಧರಣೇಂದ್ರ ಕೆ ಧನ್ಯವಾದ ಸಮರ್ಪಣೆಗೈದರು. ಕಾರ್ಯದರ್ಶಿ ಎಂ.ಶಾಂತಾರಾಮ ಪ್ರಭು ಕಾರ್ಯಕ್ರಮ ಸಂಯೋಜಿಸಿದರು.

Related posts

ವೇಣೂರು: ಶಿವಪ್ರಸಾದ ವೆಲ್ಡಿಂಗ್ ವರ್ಕ್ಸ್ ಮಾಲಕ ಸೀತಾರಾಮ ಕುಲಾಲ್ ನಿಧನ

Suddi Udaya

ಸೋಣoದೂರು ಅಂಗನವಾಡಿ ಕೇಂದ್ರದಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರಾಮ ಭಕ್ತರಿಂದ ರಾಮೋತ್ಸವ ಸಂಭ್ರಮ: ಅಯೋಧ್ಯ ಕರ ಸೇವೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಕಣ್ಣಾಜೆರವರಿಗೆ ಗೌರವಾರ್ಪಣೆ

Suddi Udaya

ಆಳ್ವಾಸ್ ಕ್ರಿಸ್ಮಸ್ ಸಂಭ್ರಮ: ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಡಾ.ಯು.ಸಿ.ಪೌಲೋಸ್ ಮತ್ತು ಶ್ರೀಮತಿ ಮೇರಿ ಯು.ಪಿ. ದಂಪತಿಗೆ ಸನ್ಮಾನ

Suddi Udaya

ಸಹಕಾರ ಸಪ್ತಾಹ ಕಾರ್ಯಕ್ರಮ: ಆರಂಬೋಡಿಯ ಪ್ರತಾಪ್ ಶೆಟ್ಟಿಯವರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ “ಕ್ಷೀರಾರತ್ನ” ಪ್ರಶಸ್ತಿ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya
error: Content is protected !!