
ಉಜಿರೆ: ಜೀವನದ ಪ್ರತಿಯೊಂದು ವಿಶೇಷ ಕ್ಷಣವೂ ಸುಂದರ ನೆನಪಾಗಿ ಉಳಿಯಬೇಕು ಎಂಬುದು ಪ್ರತಿಯೊಬ್ಬರ ಆಶಯ. ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ, ವಾರ್ಷಿಕೋತ್ಸವ ಸೇರಿದಂತೆ ವಿವಿಧ ಶುಭ ಸಮಾರಂಭಗಳನ್ನು ಆಕರ್ಷಕವಾಗಿ ಆಚರಿಸಲು ಸುಂದರ ವೇದಿಕೆ ವಿನ್ಯಾಸ ಮತ್ತು ವಿಶೇಷ ಅಲಂಕಾರಗಳ ಮಹತ್ವ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಂಭ್ರಮಕ್ಕೆ ಹೊಸ ಮೆರುಗು ನೀಡುವ ಉದ್ದೇಶದಿಂದ ‘Celebrations by Flake ’n Plate’ ಸಂಸ್ಥೆಯು ಉಜಿರೆಯ ಬೆಳಾಲ್ ಕ್ರಾಸ್ನಲ್ಲಿ ಶುಭಾರಂಭಗೊಂಡಿದೆ.
ಉಜಿರೆಯ ಸಾಯಿರಾಮ್ ಸೆಂಟ್ರಲ್ನಲ್ಲಿ, ಪೇಜ್ ಪ್ಲೇ ಸಮೀಪ ಆರಂಭಗೊಂಡಿರುವ ಈ ಸಂಸ್ಥೆಯು ವಿಶೇಷ ಸಮಾರಂಭಗಳಿಗೆ ಆಕರ್ಷಕ ವೇದಿಕೆ ವಿನ್ಯಾಸಗಳನ್ನು ಒದಗಿಸುವ ಪರಿಕಲ್ಪನೆಯೊಂದಿಗೆ ಕಾರ್ಯಾರಂಭಿಸಿದೆ. ತಮ್ಮ ಕುಟುಂಬದ ಸಂಭ್ರಮವಾಗಲಿ, ಸ್ನೇಹಿತರೊಂದಿಗೆ ಆಚರಿಸುವ ವಿಶೇಷ ದಿನವಾಗಲಿ ಅಥವಾ ಜೀವನದ ಮಹತ್ವದ ಘಟ್ಟವಾಗಲಿ, ಅದನ್ನು ಸುಂದರವಾಗಿ ರೂಪಿಸಿಕೊಳ್ಳಲು ಬಯಸುವವರಿಗೆ ಈ ಸಂಸ್ಥೆ ಹೊಸ ಆಯ್ಕೆಯಾಗುವ ನಿರೀಕ್ಷೆಯಿದೆ.
ಮೂರು ವಿಭಿನ್ನ ವೇದಿಕೆ ವಿನ್ಯಾಸಗಳ ವಿಶೇಷತೆ

‘Celebrations by Flake ’n Plate’ ಸಂಸ್ಥೆಯ ಪ್ರಮುಖ ಆಕರ್ಷಣೆಯೆಂದರೆ, ವಿಶೇಷ ಕ್ಷಣಗಳಿಗೆ ಮೆರುಗು ನೀಡುವ ಮೂರು ವಿಭಿನ್ನ ಮಾದರಿಯ ಸಿಗ್ನೇಚರ್ ಸ್ಟೇಜ್ ವಿನ್ಯಾಸಗಳು (Signature Stage Designs). ಒಂದೇ ರೀತಿಯ ಅಲಂಕಾರಕ್ಕೆ ಸೀಮಿತವಾಗದೆ, ವಿಭಿನ್ನ ವಿನ್ಯಾಸಗಳ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಆಕರ್ಷಣೆ ನೀಡುವ ಪರಿಕಲ್ಪನೆ ಇದಾಗಿದೆ.
- ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭ*
ಅಕ್ಟೋಬರ್ 12, 2026ರಂದು ಸಂಜೆ 4 ಗಂಟೆಗೆ ನಡೆದ ಸಂಸ್ಥೆಯ ಶುಭಾರಂಭ ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ ಎಂಟು ವರ್ಷದ ಮೋಟೋಕ್ರಾಸ್ ಮತ್ತು ಸೂಪರ್ಕ್ರಾಸ್ ರೈಡರ್ ಅಯಾನ್ ರಫಿ ಅವರನ್ನು ಗೌರವ ಅತಿಥಿಯಾಗಿ ಆಹ್ವಾನಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ರೈಡಿಂಗ್ ಜೋಡಿ ವ್ಲಾಗರ್ಸ್ನ ಶ್ಯಾಮ್ ಕಾಮತ್ ಮತ್ತು ಶೈನಿ ಕಾಮತ್, ಬೆಳ್ತಂಗಡಿ ಕೆಜೆಎಂ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಹಳ್ಳಿಮನೆ ರೆಸಾರ್ಟ್ ಮತ್ತು ರೆಸ್ಟೋರೆಂಟ್ನ ಮಾಲಕ ಪ್ರವೀಣ್ ಹಳ್ಳಿಮನೆ, ಉಜಿರೆ, ಕರ್ನಾಟಕ ಹೈಕೋರ್ಟ್ನ ನ್ಯಾಯವಾದಿ ಅತಾವುಲ್ಲಾ ಪುಂಜಾಲಕಟ್ಟೆ ಹಾಗೂ ಉಜಿರೆ ಎಂ.ಜೆ.ಎಂ. ಹಳೆಪೇಟೆಯ ಅಧ್ಯಕ್ಷರಾದ ಅಬೂಬಕ್ಕರ್ ಸುಪ್ರೀಂ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯ ರಾಗಿರುವ ವೈಷ್ಣವಿ ಉಜಿರೆ, ಬ್ಲಾಕ್ ಕ್ವೀನ್, ಬ್ಯೂಟಿ ಲಾಂಚ್ ಬ್ಯೂಟಿ ಪಾರ್ಲರ್ನ ಮಾಲ್ಹಕಿ ಮಿನ್ಸ , ಸಂಸ್ಥೆಯ ಸಲಹೆಗಾರ ರಾದ ಇಕ್ಬಾಲ್ ಕಾಶಿಬೆಟ್ಟು ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆದ ಶುಭಾರಂಭ ಕಾರ್ಯಕ್ರಮ
ಹೊಸ ಉದ್ಯಮದ ಆರಂಭಕ್ಕೆ ವೇದಿಕೆಯಾಯಿತು.ಸಂಸ್ಥೆಯ ಮಾಲ್ಹಕರಾದ ಅಫೀಝ್ ರವರು ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿ, ಚಂದ್ರಪ್ಪ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ಸಂಸ್ಥೆಯ ಗ್ರಾಫಿಕ್ ಡಿಸೈನ್ ಮಾಡಿದ ಗ್ರಾಫಿಕ್ ಸ್ಕ್ವೇರ್ ನ ಅನಸ್ ಅಹ್ಮದ್ ರವರು ವಂದಿಸಿದರು.
ಒಟ್ಟಿನಲ್ಲಿ, ಜೀವನದ ಅಮೂಲ್ಯ ಕ್ಷಣಗಳಿಗೆ ಸೊಬಗು, ಸಂಭ್ರಮಕ್ಕೆ ಹೊಸ ಕಳೆ ಮತ್ತು ನೆನಪುಗಳಿಗೆ ವಿಶೇಷ ರೂಪ ನೀಡುವ ಉದ್ದೇಶದೊಂದಿಗೆ ‘ಸೆಲೆಬ್ರೇಶನ್ ಬೈ
ಫ್ಲೇಕ್ ‘ಎನ್ ಪ್ಲೇಟ್ ಅವರಿಂದ
Flake ’n Plate’ ಉಜಿರೆಯ ಬೆಳಾಲು ಕ್ರಾಸ್ನಲ್ಲಿರುವ ಸಾಯಿರಾಂ ಕಾಂಪ್ಲೆಕ್ಸ್ ನಲ್ಲಿ ತನ್ನ ಸೇವಾ ಪಯಣ ಆರಂಭಿಸಿದೆ.












