33.9 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಕೇರಳ ರಾಜ್ಯದ ಸಹಕಾರಿ ಪ್ರತಿನಿಧಿಗಳ ಭೇಟಿ

ಬೆಳ್ತಂಗಡಿ: ಸಹಕಾರ ರಂಗದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸೇವೆ ನೀಡುತ್ತಿರುವ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯಕ್ಕೆ ಮಾದರಿ ಸಹಕಾರಿ ಸಂಘವಾಗಿದ್ದು,ಇದರ ಕಾರ್ಯಚಟುವಟಿಕೆಗಳ ಅಧ್ಯಯನ ನಡೆಸಲು ಕೇರಳ ರಾಜ್ಯದ ಕೃಷಿ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡದ 45 ಮಂದಿ ಇತ್ತೀಚೆಗೆ ಸಂಘದ ಕಿಲ್ಲೂರು ಹಾಗೂ ಕಡಿರುದ್ಯಾವರ ಶಾಖೆಗೆ ಬೇಟಿ ನೀಡಿತು.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಅತೀ ಹೆಚ್ಚು ನವೋದಯ ಸ್ವ-ಸಹಾಯ ಗುಂಪುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಸಂಘದ ಮೂಲಕ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗಕ್ಕೆ ಸಾಲವನ್ನು ನೀಡಲಾಗುತ್ತಿದೆ.ವನಶ್ರೀ ನವೋದಯ ಸ್ವ-ಸಹಾಯ ಗುಂಪು ಕೋಡಿ ಇದರ ಸದಸ್ಯರು ಸ್ವ- ಉದ್ಯೋಗಕ್ಕೆ ಸಾಲ ಪಡೆದು ಡ್ರಾಗನ್ ಪ್ರೂಟ್ ಮಾಡಿರುವ ಮಾದರಿ ರೈತರು ಸಂಘದ ಸದಸ್ಯರಾದ ಮಿತ್ತಬಾಗಿಲು ಗ್ರಾಮದ ಶ್ರೀ ರವಿಚಂದ್ರ ಗೌಡ ಇವರ ತೋಟವನ್ನು ಅದ್ಯಯನ ತಂಡವು ವೀಕ್ಷಣೆ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಶ್ರೀ ರಾಮ ನವೋದಯ ಕುಕ್ಕುದಡಿ ಕಡಿರುದ್ಯಾವರ ಇದರ ಸದಸ್ಯರಾದ ಪ್ರಶಾಂತ್ ಗೌಡ ಹಾಗೂ ಸಂತೋಷ್ ಗೌಡ ಇವರು ಗುಂಪಿನ ಮೂಲಕ ಸಾಲ ಪಡೆದು ಶಾಮಿಯಾನದ ಉದ್ಯಮವನ್ನು ನಡೆಸುತ್ತಿರುವ ಕುರಿತಂತೆ ಉಪಯುಕ್ತ ಮಾಹಿತಿಯನ್ನು ತಂಡವು ಪಡೆಯಿತು. ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೀರ್ತಿ ನವೋದಯ ಗುಂಪು ಕೊಂದೊಡಿ, ಶ್ರೀ ಗುರು ನವೋದಯ ಗುಂಪು ಕಿನ್ಯಡ್ಕ, ಶ್ರೀ ರಾಮ ನವೋದಯ ಕುಕ್ಕುದಡಿ, ನವರತ್ನ ನವೋದಯ ಸ್ವ-ಸಹಾಯ ಗುಂಪು ಗುಂಡಿರು ಇದರ ಗುಂಪಿನ ಸದಸ್ಯರೊಂದಿಗೆ ಸಂವಾದ ನಡೆಸಿ, ಗುಂಪಿನ ಕಾರ್ಯನಿರ್ವಹಣೆ ಮತ್ತು ಸಾಲ ವಿತರಣೆಯ ಬಗ್ಗೆ ನವೋದಯ ಸ್ವ-ಸಹಾಯ ಗುಂಪಿನ ಮೇಲ್ವೀಚಾರಕಾರದ ಶ್ರೀಮತಿ ಸುಮಿತ್ರ ಇವರಿಂದ ಮಾಹಿತಿಯನ್ನು ಪಡೆಯಿತು.

ಸ್ವ-ಉದ್ಯೋಗದ ಮೂಲಕ ಮಾದರಿಯಾಗಿ, 10000 ಕೋಳಿ ಸಾಕಾಣಿಕೆ ಮಾಡುತ್ತಿರುವ ಇಂದಬೆಟ್ಟು ಗ್ರಾಮದ ಪರಾರಿ ಶ್ರೀ ಪ್ರಕಾಶ್ ಇವರ ಉದ್ಯಮವನ್ನು ಕೇರಳದ ಕೃಷಿ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡವು ಬೇಟಿ ನೀಡಿ ವಿಶೇಷ ಅನುಭವನ್ನು ಪಡೆದುಕೊಂಡಿತ್ತು.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 1250 ಕೋಟಿ ವ್ಯವಹಾರವನ್ನು ನಡೆಸಿ, 6402 ಸದಸ್ಯರನ್ನು ಹೊಂದಿ,ರೂ 210 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದ್ದು, ಇದರಲ್ಲಿ 44 ಕೋಟಿಗೂ ಮಿಕ್ಕಿ ಬೆಳೆ ಸಾಲಗಳನ್ನು ವಿತರಿಸಲಾಗಿದೆ. ಸಂಘವು 2025-26 ಸಾಲಿನಲ್ಲಿ5 ಕೋಟಿ ಮಿಕ್ಕಿ ನಿವ್ವಳ ಲಾಭ ಗಳಿಸಿದೆ.ಸಂಘವು ಪೂರ್ಣ ಪ್ರಮಾಣದ ಎಂಟು ಶಾಖೆಗಳನ್ನು ಹೊಂದಿದ್ದು,ಪತ್ತು ಮತ್ತು ಪತ್ತೇತರ ವ್ಯವಹಾರಗಳನ್ನು ನಡೆಸುತ್ತಿದೆ.ಈ ಎಲ್ಲಾ ವ್ಯವಹಾರಗಳ ಯಶಸ್ವಿ ಅನುಷ್ಟಾನದಿಂದ ನಬಾರ್ಡಿನ ಗಮನ ಸೆಳೆದಿದೆ.ಸಂಘದ ವ್ಯವಹಾರ ಹಾಗೂ ಅಭಿವೃದ್ದಿಯನ್ನು ಹೊಂದಿರುವ ಕುರಿತಂತೆ ಸಂಘದ ಅದ್ಯಕ್ಷರು ಮಾಹಿತಿಯನ್ನು ಅದ್ಯಯನ ತಂಡದೊAದಿಗೆ ಹಂಚಿಕೊಂಡರು.


ಈ ಸಂದರ್ಭ ದಲ್ಲಿ ಬರ್ಡ್ ಸಂಸ್ಥೆಯ ಡಿ.ಜಿ.ಎಂ ಪ್ರೀತಿ ತೋಮಸ್, ಸತೀಶ್ ಹಾಗೂ ಉಪಾಧ್ಯಕ್ಷ ಆನಂದ ಗೌಡ, ನಿರ್ದೇಶಕರಾದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ,ನವೋದಯ ಸ್ವ-ಸಹಾಯ ಗುಂಪುಗಳ ಮೇಲ್ವೀಚಾರಕಿ ಸುಮಿತ್ರ, ಸಂಘದ ಸಿಬ್ಬ೦ದಿಗಳು ಉಪಸ್ಥಿತರಿದ್ದರು.

Related posts

ಕಳಿಯ ಗ್ರಾಮ ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆ

Suddi Udaya

ಅರಸಿನಮಕ್ಕಿ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕೊಲ್ಲಿ: 42ನೇ ವಷ೯ದ ಸಾವ೯ಜನಿಕ ಶ್ರೀ ಗಣೇಶೋತ್ಸವ

Suddi Udaya

ತೆಂಕಕಾರಂದೂರು ಸುಳ್ಯೋಡಿ ಗುರಿ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ನಾಗ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ, ತಂಬಿಲ ಸೇವೆ

Suddi Udaya

ಧರ್ಮಸ್ಥಳ ಯೋಜನೆಯ ಕಾರ್ಯಕ್ರಮ: ರಾಜ್ಯಾದ್ಯಂತ 1000 ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ

Suddi Udaya

ಅಂಡಿಂಜೆ: ಕಲ್ಲತ್ತಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗೇರು ಗಿಡಗಳಿಗೆ ಹತ್ತಿಕೊಂಡ ಬೆಂಕಿ

Suddi Udaya
error: Content is protected !!