33.9 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

47ನೇ ದಸರಾ ಯೋಗಾಸನ, ಪ್ರಾಣಾಯಾಮ, ಧ್ಯಾನ ಶಿಬಿರಕ್ಕೆ ಚಾಲನೆ

ಉಡುಪಿ: ಯೋಗ ಮತ್ತು ನೈತಿಕ ಶಿಕ್ಷಣ ಜಗತ್ತಿಗೆ ಭಾರತ ನೀಡಿದ ಬಹಳ ದೊಡ್ಡ ಕೊಡುಗೆ. ವ್ಯಕ್ತಿಯ ಮಾನಸಿಕ, ದೈಹಿಕ, ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಇವು ಸಹಕಾರಿ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಅ. 11ರಂದು ಜೋಡುರಸ್ತೆ ಕುಲಾಲ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯೋಗ ಮತ್ತು ನೈತಿಕ ಶಿಕ್ಷಣ ಸಂಸ್ಥೆ, ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಏಳು ದಿನಗಳ ಕಾಲ ನಡೆಯಲಿರುವ 47ನೇ ಬೃಹತ್ ದಸರಾ ಯೋಗಾಸನ, ಪ್ರಾಣಾಯಾಮ, ಧ್ಯಾನ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.ರಜಾದಿನಗಳಲ್ಲಿ ಮಕ್ಕಳು ಯೋಗ ಕಲಿಯಬೇಕು. ಧರ್ಮಸ್ಥಳದ ವತಿಯಿಂದ ನಡೆಯುವ ಇಂತಹ ಶಿಬಿರಗಳ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುತ್ತಾರೆ ಎಂದರು.

ಉದ್ಯಮಿ ಪದ್ಮಪ್ರಸಾದ್ ಜೈನ್ ಮಾತನಾಡಿ, ಯೋಗ, ಧ್ಯಾನ ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಇಂದಿನ ಜೀವನ ಶೈಲಿಯಲ್ಲಿ ಯೋಗ ಅತಿ ಅವಶ್ಯವೆಂದರು. ನಿವೃತ್ತ ಪ್ರಾಂಶುಪಾಲೆ ಉಷಾ ನಾಯಕ್ ಮಾತನಾಡಿ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಯೋಗ ತುಂಬಾ ಸಹಾಯಕಾರಿ. ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವೆಂದರು.

ಶಾಂತಿವನ ಟ್ರಸ್ಟ್‌ನ ಯೋಗ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಮಾತನಾಡಿ, ಈ ಬಾರಿ ಯೋಗ ಶಿಬಿರದಲ್ಲಿ ಪಂಚಮುಖಿ ವ್ಯಕ್ತಿತ್ವ ಶಿಬಿರ ಜೋಡಿಸಿಕೊಳ್ಳಲಾಗಿದೆ. ಈ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಅಧ್ಯಾ ತ್ರಿಕವಾಗಿಯೂ ಒಲವು ಮೂಡಿಸುವ ಕಾರ್ಯ ವಾಗುತ್ತಿದೆ ಎಂದರು.


ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್ , ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಉದಯ ಹೆಗ್ಡೆ, ಸದಸ್ಯ ಕಮಲಾಕ್ಷ ನಾಯಕ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರಿಶ್ಚಂದ್ರ ತೆಂಡೂಲ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ವೃಷಭರಾಜ್ ಕಡಂಬ, ಏಳು ದಿನ ಕಾಲ ನಡೆಯುವ ಯೋಗ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರುವಲ್ಲಿ ಸರ್ವರ ಸಹಕಾರವಿರಲಿ ಎಂದರು. ಕಾರ್ಕಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿದರು. ಯೋಜನೆ ಮೇಲ್ವಿಚಾರಕಿ ಗೀತಾ ಕಾರ್ಯಕ್ರಮ ನಿರೂಪಿಸಿ, ಶೇಖರ್ ಕಡ್ತಲ ವಂದಿಸಿದರು.

Related posts

ಲಾಯಿಲ ಗ್ರಾ.ಪಂ. ನಲ್ಲಿ ಗೃಹಜ್ಯೋತಿ ಮರುಪರಿಶೀಲನಾ ಶಿಬಿರಕ್ಕೆ ಚಾಲನೆ: ರಾಜಕೀಯ‌ ಬೇಡ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಿ: ಕೆಡಿಪಿ ಸದಸ್ಯ ಸಂತೋಷ್ ಕುಮಾರ್

Suddi Udaya

ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾಗಿ ಹರೀಶ್ ದೇವಾಡಿಗ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಕೆ

Suddi Udaya

ದ.ಕ. ಜಿಲ್ಲಾ ತುಳು ಪರಿಷತ್ ನ ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್, ಸದಸ್ಯರಾಗಿ ಇಸ್ಮಾಯಿಲ್ ಕೆ. ಆಯ್ಕೆ

Suddi Udaya

ಸ್ಕೂಟಿಗೆ- ಆಟೋ ರಿಕ್ಷಾ ಡಿಕ್ಕಿ ಪ್ರಕರಣ: ಆಟೋ ಚಾಲಕನಿಗೆ ಕಾರಾಗೃಹ ಶಿಕ್ಷೆ ಪ್ರಕಟ

Suddi Udaya

ವೇಣೂರು: ನಿಟ್ಟಡೆ ಕುಂಭಶ್ರೀ ಶಾಲಾ- ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ: ಎಸ್ ಡಿ ಎಮ್ ಸಂಸ್ಥೆಗಳ ಅಂತರ್ ಪ್ರೌಢಶಾಲಾ ಬಾಲಕ -ಬಾಲಕಿಯರ ಕ್ರೀಡಾಕೂಟ

Suddi Udaya
error: Content is protected !!