33.9 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೋಟರಿ ಕ್ಲಬ್ ಬೆಳ್ತಂಗಡಿ : ನಾವೂರಿನಲ್ಲಿ ಕ್ಲಿನಿಕ್ ಗೆ ಬೆಂಕಿ ಹಾಕಿದ ಘಟನೆಯನ್ನು ಖಂಡಿಸಿ ಮನವಿ ಸಲ್ಲಿಕೆ

ಬೆಳ್ತಂಗಡಿ: ಇತ್ತೀಚೆಗೆ ಡಾ. ಪ್ರದೀಪ್ ಎ. ನಾವೂರು ಅವರ ಕ್ಲಿನಿಕ್‌ಗೆ ಅನಾಮಿಕರು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆಯನ್ನು ಖಂಡಿಸಿ, ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರರು ಹಾಗೂ ಉಪ ಪೊಲೀಸ್ ಅಧೀಕ್ಷಕರಿಗೆ (DySP) ಖಂಡನಾ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸುವಂತೆ ಹಾಗೂ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.


ವೈದ್ಯ ಸಮುದಾಯದೊಂದಿಗೆ ಒಗ್ಗಟ್ಟಿನಿಂದ ನಿಂತು, ಈ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ, ಕಾರ್ಯದರ್ಶಿ ಡಾ ರಾಘವೇಂದ್ರ ಪಿದಮಲೆ, ಅಸಿಸ್ಟೆಂಟ್ ಗವರ್ನರ್ ಡಾ ಶಶಿಧರ ಡೋಂಗ್ರೆ, ರೊ. ಯಶವಂತ ಪಟವರ್ಧನ್, ಡಾ ಎ ಜಯಕುಮಾರ ಶೆಟ್ಟಿ, ಶ್ರೀನಾಥ ಕೆ.ಎಂ, ರೋನಾಲ್ಡ್ ಲೋಬೋ, ಶ್ರೀಕೃಷ್ಣ ಭಟ್ , ಶ್ರವಣ್ ಕಾಂತಾಜೆ, ಡಾ.ರಂಜನ್, ಡಾ ಗೋವಿಂದ ಕಿಶೋರ್, ವೈಕುಂಠ ಪ್ರಭು, ಡಾ.ಪ್ರಕಾಶ ಪ್ರಭು, ಜಯರಾಮ್, ಗೋಪಾಲಕೃಷ್ಣ ಗುಲ್ಲೋಡಿ ಮತ್ತಿತರರು ಉಪಸ್ಥಿತರಿದ್ದರು.

Related posts

ಲಿಯೋ xiv ನೆೇ ಪೋಪರನ್ನು ಬೇಟಿ ಮಾಡಿದ ಬೆಳ್ತಂಗಡಿ ಧರ್ಮಾಧ್ಯಕ್ಷ ಮಾರ್ ಜೇಮ್ಸ್ ಪಟ್ಟೇರಿಲ್; ಸ್ಥಳೀಯ ಮತ್ತು ಸಾರ್ವತ್ರಿಕ ಸಭೆಯ ನಡುವಿನ ಐಕ್ಯತೆಯ ಸಂಕೇತ

Suddi Udaya

“ಕಲಾ -ಸಂಭ್ರಮ 2024” ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಳದಂಗಡಿ ಸರಕಾರಿ ಪ್ರೌಢ ಶಾಲೆಗೆ ಪ್ರಶಸ್ತಿ

Suddi Udaya

ಮದ್ದಡ್ಕ: ಸ್ಕೂಟಿ ಮತ್ತು ಕಾರು ಡಿಕ್ಕಿ

Suddi Udaya

ಕೊಕ್ರಾಡಿ: ಹೇರ್ದಂಡಿ ಬಾಕ್ಯಾರು ಗರಡಿಗೆ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಭೇಟಿ,

Suddi Udaya

ನೆರಿಯ: ರಸ್ತೆ ರಿಪೇರಿ ಮಾಡಿ ಮಾದರಿಯಾದ ಅಧ್ಯಾಪಕ ತಮ್ಮಯ್ಯ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya
error: Content is protected !!