ಬಳಂಜ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ (ರಿ.) ವತಿಯಿಂದ ಊರವರ ಸಹಕಾರದೊಂದಿಗೆ 4ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ. 18ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ ತಿಳಿಸಿದ್ದಾರೆ.

ಶಾರದೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ವೈದಿಕ ವಿಧಿವಿಧಾನಗಳು ನಡೆಯಲಿವೆ. ಬೆಳಿಗ್ಗೆ 9.35ಕ್ಕೆ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜಾ ಕಾರ್ಯಕ್ರಮ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಹಾಗೂ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ., ಧಾರ್ಮಿಕ ಮುಖಂಡ ಕಿರಣ್ಚಂದ್ರ ಡಿ. ಪುಷ್ಪಗಿರಿ, ಬೆಳ್ತಂಗಡಿ ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಕರ್ನಾಟಕ ಸಾವಯವ ಕೃಷಿ ಯೋಜನೆ ಮಂಗಳೂರು ಆಡಳಿತ ನಿರ್ದೇಶಕ ಮೋಹನ್ ಗೌಡ ಕಲ್ಮಂಜ, ಆದಿನಾಥ ಬಜಾಜ್ ಶೋರೂಂ ಮಾಲಕ ರಾಜೇಶ್ ಟಿ., ಗುಜರಾತ್ ಉದ್ಯಮಿ ಶೇಖರ್ ದೇವಾಡಿಗ ಪಾಲಬೆ, ಅಮೆಜಾನ್ ಫೈನಾನ್ಸ್ನ ಹಿರಿಯ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಬಿರ್ಮನೊಟ್ಟು, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಮೆಸ್ಕಾಂ ಇಲಾಖೆಯ ಕಿರಿಯ ಎಂಜಿನಿಯರ್ ಸಂದೀಪ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ. ಹಾಗೂ ಬೆಂಗಳೂರು ಉದ್ಯಮಿ ಮಹೇಶ್ ಸುವರ್ಣ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ವೈಭವ:
ಬೆಳಿಗ್ಗೆ 10 ಗಂಟೆಯಿಂದ ಸ್ಥಳೀಯ ಅಂಗನವಾಡಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಯಿಂದ ಆತ್ಮ ಕಮಲೇಶ್ ಉಂಗಿಲಬೈಲು ಅವರ ನಿರ್ದೇಶನದಲ್ಲಿ ಕಲಾ ಸರಸ್ವತಿ ತಂಡದ ವತಿಯಿಂದ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಭಜನೆ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಶಾರದೋತ್ಸವದ ಸಂಭ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಲಿವೆ.
ಶಾರದಾ ಮಾತೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ:
ಶಾರದೋತ್ಸವದ ಪ್ರಯುಕ್ತ ಮಕ್ಕಳ ವಿದ್ಯಾಭ್ಯಾಸದ ಶುಭಾರಂಭಕ್ಕಾಗಿ ಶ್ರೀ ಶಾರದಾ ಮಾತೆಯ ಮಡಿಲಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಆಸಕ್ತರು ಮುಂಗಡವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9945846299 ಸಂಪರ್ಕಿಸಬಹುದು.ಮಹಿಳೆಯರಿಗಾಗಿ ಹೂಮಾಲೆ ಕಟ್ಟುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಪರ್ಧಿಗಳು ಬೆಳಿಗ್ಗೆ 9 ಗಂಟೆಯೊಳಗೆ ಹಾಜರಾಗಬೇಕು.
ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ವೈಭವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಒಗ್ಗೂಡಿಸುವ ಬಳಂಜದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಊರಿನ ಭಕ್ತರು, ಸಾರ್ವಜನಿಕರು ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ವಿನಂತಿಸಿದ್ದಾರೆ.
ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ:
ಶಾರದೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿಭಾಗಗಳು:1ರಿಂದ 3ನೇ ತರಗತಿ,
4ರಿಂದ 7ನೇ ತರಗತಿ,8ರಿಂದ 10ನೇ ತರಗತಿ.ಸ್ಪರ್ಧಿಗಳು ಶ್ರೀ ಶಾರದಾ ದೇವಿಯ ಚಿತ್ರವನ್ನು ಮನೆಯಲ್ಲಿಯೇ ಬಿಡಿಸಿ, ಅ. 18ರಂದು ಬೆಳಿಗ್ಗೆ 10 ಗಂಟೆಯೊಳಗೆ ತರಬೇಕು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು.ಮಾಹಿತಿಗಾಗಿ: 8971689755
ಪುರುಷರ ಮುಕ್ತ 510 ಕೆ.ಜಿ. ಹಗ್ಗಜಗ್ಗಾಟ ಸ್ಪರ್ಧೆ
ಶಾರದೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪುರುಷರ ಮುಕ್ತ 510 ಕೆ.ಜಿ. ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ₹500 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಸ್ಪರ್ಧೆಯ ನಿಯಮಗಳು:ಪ್ರತಿ ತಂಡದಲ್ಲಿ ಏಳು ಮಂದಿಗೆ ಮಾತ್ರ ಅವಕಾಶ.ತಂಡಗಳು ಮಧ್ಯಾಹ್ನ 12 ಗಂಟೆಯೊಳಗೆ ತೂಕ ಪರಿಶೀಲನೆಗೆ ಹಾಜರಾಗಬೇಕು.ಸ್ಪರ್ಧಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ.ತಂಡಗಳ ಹೆಸರು ನೋಂದಾಯಿಸಲು ಅ. 16 ಕೊನೆಯ ದಿನ.
ಬಹುಮಾನಗಳು: ಪ್ರಥಮ: ₹6,000 ಹಾಗೂ ಟ್ರೋಫಿ, ದ್ವಿತೀಯ: ₹4,000 ಹಾಗೂ ಟ್ರೋಫಿ, ತೃತೀಯ: ₹2,000 ಹಾಗೂ ಟ್ರೋಫಿ, ಚತುರ್ಥ: ಟ್ರೋಫಿ, ಹೆಸರು ನೋಂದಣಿ ಹಾಗೂ ಮಾಹಿತಿಗಾಗಿ: 8861514870 / 7349163708
ವಿಶೇಷ ಆಕರ್ಷಣೆ: ಶ್ರೀ ಶಾರದೋತ್ಸವ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳಿಂದ ಕುಣಿತಾ ಭಜನೆ,ಶ್ರೀ ಮಾತಾ ನಾಲ್ಕೂರು- ಬಳಂಜ ನೇತೃತ್ವದಲ್ಲಿ ಆಕರ್ಷಕ ಟ್ಯಾಬ್ಲೋ ಮತ್ತು ಪ್ರಸಿದ್ಧ ಕಲಾವಿದರಿಂದ ಕೇರಳ ಚೆಂಡೆ ಮತ್ತು ವಯಲಿನ್,ಆಕರ್ಷಕ ಸುಡುಮದ್ದು ಪ್ರದರ್ಶನ, ಕಲಾವಿದರಿಂದ ಗೊಂಬೆ ಕುಣಿತಾ,ನಾಸಿಕ್ ಬ್ಯಾಂಡ್,ಊರ ಪರವೂರ ಕಲಾವಿದರಿಂದ ಸಾಂಸ್ಕೃತಿಕ ವೈಭವ,ಭರತನಾಟ್ಯ ಮತ್ತು ಸಂಗೀತ,ಮನೋರಂಜನಾ ಕಾರ್ಯಕ್ರಮ












