November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದೀಪಾವಳಿ ಹಬ್ಬಕ್ಕೆ ಉಜಿರೆ, ಬೆಳ್ತಂಗಡಿ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ಭರ್ಜರಿ ಸೇಲ್

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ 20 ವರ್ಷ ಗಳಿಂದ ಸೇವೆ ನೀಡುತ್ತಿದ್ದು, ಮನೆ ಮಾತಾಗಿರುವ ಬೆಳ್ತಂಗಡಿ ತಾಲೂಕಿನ ಪ್ರಮುಖ ಹಾಗೂ ಬೃಹತ್ ಶೋರೂಂಗಳಲ್ಲಿ ಒಂದಾದ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನ ಉಜಿರೆ ಮತ್ತು ಬೆಳ್ತಂಗಡಿ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವಿಶೇಷ ದೀಪಾವಳಿ ಸೇಲ್ ನ.1ರಿಂದ 14ರ ತನಕ ಆಯೋಜಿಸಲಾಗಿದೆ.

ಎಲೆಕ್ಟ್ರಾನಿಕ್ಸ್ , ಗೃಹೋಪಯೋಗಿ ವಸ್ತುಗಳು ಹಾಗೂ ವಿವಿಧ ವಿನ್ಯಾಸದ ಫರ್ನಿಚರ್‌ಗಳ ಸಮಗ್ರ ಸಂಗ್ರಹವನ್ನು ಹೊಂದಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಅಗತ್ಯ ವಸ್ತುಗಳನ್ನು ಒದಗಿಸುವ ಒನ್‌ಸ್ಟಾಪ್ ಡೆಸ್ಟಿನೇಷನ್ ಆಗಿ ಗುರುತಿಸಿಕೊಂಡಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡಿದ ಫರ್ನಿಚರ್‌ಗಳನ್ನು ತಯಾರಿಸುವ ವಿಶೇಷ ಸೌಲಭ್ಯವೂ ಇಲ್ಲಿದೆ.

ಎಲ್ಲಾ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಗುಣಮಟ್ಟದ ಹಾಗೂ ಬಾಳಿಕೆ ಬರುವ ಉತ್ಪನ್ನಗಳನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಒದಗಿಸುತ್ತಿರುವ ಸಂಸ್ಥೆಯು ಗ್ರಾಹಕರ ವಿಶ್ವಾಸ ಗಳಿಸಿದೆ. ಉತ್ಪನ್ನಗಳ ಗುಣಮಟ್ಟ ಮತ್ತು ದೀರ್ಘಕಾಲೀನ ಬಾಳಿಕೆಯಿಂದಾಗಿ ಮಂಗಳೂರು, ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಗ್ರಾಹಕರು ಹಾಗೂ ಆರ್ಡರ್‌ಗಳು ಬರುತ್ತಿರುವುದು ಸಂಸ್ಥೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ದೀಪಾವಳಿ ಸೇಲ್ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಕಾಂಬಿ ಆಫರ್‌ಗಳು, ಪ್ರತಿ ಖರೀದಿಗೆ ವಿಶೇಷ ಉಡುಗೊರೆಗಳು, ಎಲೆಕ್ಟಾçನಿಕ್ಸ್ ವಸ್ತುಗಳಿಗೆ ವಿಸ್ತೃತ ವಾರಂಟಿ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಳೆಯ ಎಲೆಕ್ಟಾçನಿಕ್ಸ್ ವಸ್ತುಗಳನ್ನು ಹೊಸ ಎಲೆಕ್ಟಾçನಿಕ್ಸ್ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅತ್ಯುತ್ತಮ ಎಕ್ಸ್ಚೇಂಜ್ ಮೌಲ್ಯದ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಬಜಾಜ್, HDB ಹಾಗೂ Pine Labs ಮೂಲಕ ಶೂನ್ಯ ಬಡ್ಡಿದರದ ಸುಲಭ ಕಂತುಗಳ ಸಾಲ ಸೌಲಭ್ಯವನ್ನು ಒದಗಿಸಲಾಗಿದ್ದು, ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ಶೋರೂಂನಲ್ಲಿ ಗ್ರಾಹಕರು ಯಾವುದೇ ತೊಂದರೆಯಿಲ್ಲದೆ ಆರಾಮದಾಯಕವಾಗಿ ಶಾಪಿಂಗ್ ಮಾಡಬಹುದಾಗಿದೆ. ಈ ದೀಪಾವಳಿಯಲ್ಲಿ ಗುಣಮಟ್ಟ, ಬಾಳಿಕೆ, ಆಕರ್ಷಕ ಬೆಲೆ ಹಾಗೂ ವಿಶೇಷ ಕೊಡುಗೆಗಳೊಂದಿಗೆ ಗ್ರಾಹಕರಿಗೆ ಉತ್ತಮ ಖರೀದಿ ಅನುಭವ ನೀಡಲು ಪ್ರಕಾಶ್ ಎಲೆಕ್ಟ್ರಾನಿಕ್ಸ್‌ ಸಜ್ಜಾಗಿದೆ.

Related posts

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ 18ನೇ ವರ್ಷದ ವಾರ್ಷಿಕೋತ್ಸವ-ವಿಶ್ವಕರ್ಮ ಪೂಜೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ: ರೂ.4.09 ಕೋಟಿ ನಿವ್ವಳ ಲಾಭ, ಶೇ.15 ಡಿವಿಡೆಂಟ್ ಘೋಷಣೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಎದುರು ಗಂಟೆ ಮಂಟಪದ ಶಿಲಾನ್ಯಾಸ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಎನ್.ಎಸ್.ಎಸ್ ಸ್ವಯಂ ಸೇವಕರ ಭೇಟಿ

Suddi Udaya

ಮೇಲಂತಬೆಟ್ಟುವಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ; ಗ್ರಾಮೀಣ ಸ್ಪರ್ಧೆಗಳ ಆಯೋಜನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಸಪ್ತಾಹ

Suddi Udaya
error: Content is protected !!