November 7, 2026
ಕ್ರೀಡಾ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ತ್ರೋಬಾಲ್ ಪಂದ್ಯಾಟ: ಎಲ್. ಸಿ. ಆರ್. ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಕ್ಯಪದವು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಹಾಗೂ ದ. ಕ. ಜಿ. ಪಂ. ಉ.ಹಿ. ಪ್ರಾ. ಶಾಲೆ ಅನಂತಾಡಿ ಇದರ ಸಂಯುಕ್ತ ಆಶ್ರಯದಲ್ಲಿ ನ.6ರಂದು ನಡೆದ 14ರ ವಯೋಮಾನದ ಬಂಟ್ವಾಳ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಕಕ್ಯಪದವಿನ ಎಲ್. ಸಿ. ಆರ್. ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ, ಎರಡೂ ವಿಭಾಗಗಳಲ್ಲೂ ದ್ವಿತೀಯ ಸ್ಥಾನವನ್ನು (Runners up) ಮುಡಿಗೇರಿಸಿಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳು:
ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಾಲೆಯ 6 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗ: ರೋಶ್ನಿ (8ನೇ ತರಗತಿ), ವಿಭಾ (8ನೇ ತರಗತಿ) ಮತ್ತು ನಿರೀಕ್ಷಾ (8ನೇ ತರಗತಿ).
ಬಾಲಕರ ವಿಭಾಗ: ಸ್ವರಾಜ್ (7ನೇ ತರಗತಿ), ನೀತನ್ (7ನೇ ತರಗತಿ) ಮತ್ತು ರವೀಶ್ (8ನೇ ತರಗತಿ).

ವೈಯಕ್ತಿಕ ಪ್ರಶಸ್ತಿಗಳ ಗರಿ:
ತಂಡದ ಸಾಧನೆಯ ಜೊತೆಗೆ ವೈಯಕ್ತಿಕ ಪ್ರಶಸ್ತಿಗಳಲ್ಲೂ ಶಾಲೆಯ ವಿದ್ಯಾರ್ಥಿಗಳು ಮಿಂಚಿದ್ದಾರೆ. ಅತ್ಯುತ್ತಮ ರಿಸೀವರ್ (Best Receiver): ಸ್ವರಾಜ್ (7ನೇ ತರಗತಿ), ಅತ್ಯುತ್ತಮ ಸರ್ವರ್ (Best Server): ರೋಶ್ನಿ (8ನೇ ತರಗತಿ) ವಿದ್ಯಾರ್ಥಿಗಳ ಈ ಅದ್ಭುತ ಕ್ರೀಡಾ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಣಾಕ್ಷಿ ಜಿ.ಕೆ ಮತ್ತು ಪ್ರಥ್ವಿರಾಜ್ ಅವರ ಅತ್ಯುತ್ತಮ ತರಬೇತಿಯೇ ಕಾರಣವಾಗಿದೆ.

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಮುಂದಿನ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಶುಭ ಹಾರೈಸಿದ್ದಾರೆ.

Related posts

ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ: ನೂತನ ಅಧ್ಯಕ್ಷರಾಗಿ ಭಗೀರಥ ಜಿ. ಆಯ್ಕೆ

Suddi Udaya

ಕೇಳದಪೇಟೆ ಸ.ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕರ: ಮುಗೇರಡ್ಕ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ: ‘ಧಮ೯ಸ್ಥಳ ಶ್ರೀ ಮಂಜುನಾಥೇಶ್ವರ ಸಂಶೋಧನಾ ಸಂಸ್ಕೃತಿ ಪ್ರತಿಷ್ಠಾನದ ಪ್ರಕಟಿತ ಮುಹೂರ್ತಪದವೀ’ ಗ್ರಂಥ ಲೋಕಾರ್ಪಣೆ: ಉಜಿರೆಯಲ್ಲಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಹಾಗೂ ನಸಿ೯ಂಗ್ ಕಾಲೇಜು ಆರಂಭ: ಡಾ.ಹೆಗ್ಗಡೆ

Suddi Udaya

ಬೆಳ್ತಂಗಡಿ ಕರಾಡ ಬ್ರಾಹ್ಮಣ ಸಮಾಜದಿಂದ ಸಾಮೂಹಿಕ ಹರಿತಾಲಿಕ(ಗೌರಿ) ಪೂಜೆ

Suddi Udaya

ನವಶಕ್ತಿ ಶ್ರೀಮತಿ ಕಾಶಿ ಬಾಬು ಶೆಟ್ಟಿ ಸಂಸ್ಮರಣೆ: ಪುತ್ಥಳಿ ಅನಾವರಣ, ಕಾಶಿ ಸದನ ವಸತಿ ನಿರ್ಮಾಣಕ್ಕೆ ಸಹಾಯ ಹಸ್ತ : ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

Suddi Udaya
error: Content is protected !!