November 17, 2026
ಅಭಿನಂದನೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಮನೋಹರ್ ಬಳಂಜರಿಗೆ ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಅಬಿನಂದನಾ ಕಾರ್ಯಕ್ರಮ

ಬೆಳ್ತಂಗಡಿ: ಪತ್ರಿಕೋದ್ಯಮ ಸೇವೆಗೆ 2026 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಮನೋಹರ್ ಬಳಂಜರಿಗೆ ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ನ.16ರಂದು ಅಬಿನಂದನಾ ಕಾರ್ಯಕ್ರಮ ಸಹಕಾರಿ ಸಂಘದಲ್ಲಿ ನಡೆಯಿತು

. ಸಂಘ ಅದ್ಯಕ್ಷೆ ರಮಾದೇವಿ ಸನ್ಮಾನ ನೆರವೇರಿಸಿ ಮಾತನಾಡಿ ಮನೋಹರ್ ಬಳಂಜರವರು 2004 ರಲ್ಲಿ ಹುಣ್ಸೆಕಟ್ಟೆ ಪರಿಸರದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘ ಆಗಬೇಕೆನ್ನುವ ಬೇಡಿಕೆಗಳು ಬಂದಾಗ ಅವಿರತವಾಗಿ ಶ್ರಮಿಸಿದವರು. ಆಗ 20 ಲೀಟರ್ ಹಾಲಿನೊಂದಿಗೆ ಪ್ರಾರಂಭವಾದ ಸಂಘ ಇಂದು 1200 ಲೀಟರ್ ಗೂ ಅದಿಕ ಹಾಲು ಸಂಗ್ರಹವಾಗುತ್ತಿದೆ. ಇದಕ್ಕೆ ಶ್ರಮಿಸಿದ ಮನೋಹರ್ ಬಳಂಜ ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನಮ್ಮ ಸಂಘಕ್ಕೆ ಬಂದ ಗೌರವದಂತೆ ಸಂತೋಷವಾಗುತ್ತಿದೆ. ಬಾಲ್ಯದಿಂದಲೇ ಸಮಾಜಸೇವೆ, ಮಾನವೀಯ ಸೇವೆ ಮಾಡುತ್ತಿದ್ದ ಇವರು ಅರ್ಹವಾಗಿಯೆ ಪ್ರಶಸ್ತಿ ಒಲಿದಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಮನೋಹರ್ ಬಳಂಜ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡುವ ನನಗೆ ದೇವರ ಅನುಗ್ರಹ, ಹಿರಿಯರ ಆಶೀರ್ವಾದವೇ ಶಕ್ತಿ. 22 ವರ್ಷಗಳ ಹಿಂದಿನ ಸೇವೆಯನ್ನು ನೆನಪಿನಲ್ಲಿಟ್ಟು ಸಂಘ ಗೌರವಿಸಿರುವುದು ಸಂತಸ ತಂದಿದೆ ಎಂದರು. ಕಾರ್ಯದರ್ಶಿ ಸುಜಾತಾ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಹಾಲು ಪರೀಕ್ಷಕಿ ಶೋಭಾ ವಂದಿಸಿದರು. ಸಂಘದ ಉಪಾಧ್ಯಕ್ಷೆ ಶಿವಪ್ರಭಾ ಮತ್ತು ನಿರ್ದೇಸಕರುಗಳು ಉಪಸ್ಥಿತರಿದ್ದರು.

Related posts

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ ರಾಜ್ಯಕ್ಕೆ ಪ್ರಥಮ

Suddi Udaya

ಧರ್ಮಸ್ಥಳ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಕು. ಶೌರ್ಯ ಎಸ್ ವಿ ಬರೆದಿರುವ ಚೊಚ್ಚಲ ಪುಸ್ತಕ ಪ್ರೀತಿ ಏಕೆ ಭೂಮಿ ಮೇಲಿದೆ ಬಿಡುಗಡೆ

Suddi Udaya

ನಿವೃತ್ತ ಸಾಧಕ ಯೋಧ ಪ್ರಶಸ್ತಿ ಸ್ವೀಕರಿಸಿ ಆಗಮಿಸಿದ ಲ| ಡಾ.ಗೋಪಾಲಕೃಷ್ಣ ಕಾಂಚೋಡು: ಉಜಿರೆಯಲ್ಲಿ ಭವ್ಯವಾದ ಸ್ವಾಗತ – ಅಭಿನಂದನೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ  ನಿವೃತ್ತ  ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಗೌಡರಿಗೆ  ಬೀಳ್ಕೊಡುಗೆ

Suddi Udaya

ಹುಟ್ಟೂರಿಗೆ ಆಗಮಿಸಿದ ನಿವೃತ್ತ ಸೈನಿಕ ಅಶೋಕ್ ಪಿ.ಎಲ್ ರವರಿಗೆ ಬಂದಾರು ಗ್ರಾ.ಪಂ. ವತಿಯಿಂದ ಸನ್ಮಾನ

Suddi Udaya

ನೂತನ ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ ನೇಮಕ

Suddi Udaya
error: Content is protected !!