November 23, 2026
ಗ್ರಾಮಾಂತರ ಸುದ್ದಿ

ಮುಂಡಾಜೆಯಲ್ಲಿ ಎರಡು ಕೃತಿಗಳ ಲೋಕಾರ್ಪಣೆ,ಸಾಧಕರಿಗೆ ಸನ್ಮಾನ


ಬೆಳ್ತಂಗಡಿ:
ನಿವೃತ್ತ ಶಿಕ್ಷಕ,ಕವಿ ಶಂಕರ ಎನ್. ತಾಮನ್ಕರ್ ಅವರು ರಚಿಸಿದ ‘ದೇಶ ಹತ್ತು ಒಂದು ಸುತ್ತು’ ಪ್ರವಾಸ ಕಥನ ಹಾಗೂ ‘ಭಾಮಿನಿ ಶತಕ’ ಕವನ ಸಂಕಲನಗಳ ಲೋಕಾರ್ಪಣೆ ಕಾರ್ಯಕ್ರಮ ನ.22ರಂದು
ಮುಂಡಾಜೆಯ ಪರಂಪರಾದಲ್ಲಿ ನಡೆಯಿತು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಾಗೂ ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿ ನ. 23ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ
18 ತಾಲೂಕು ಸಮ್ಮೇಳನ, 4 ಜಿಲ್ಲಾ ಸಮ್ಮೇಳನ, 4 ಮಕ್ಕಳ ಸಮ್ಮೇಳನ ಎರಡು ಹೋಬಳಿ ಸಮ್ಮೇಳನಗಳನ್ನು, 32 ಗ್ರಾಮೀಣ ಕಾರ್ಯಕ್ರಮ, ದತ್ತಿ ನಿಧಿ ಸೇರಿದಂತೆ 600ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂಡಾಜೆಯೂ ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೋಕ್ಸೋ ವಿಶೇಷ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸರಸ್ವತಿ ತಾಮನ್ಕರ್ ಮಾತನಾಡಿ ಉಚಿತ ಕಾನೂನು ನೆರವು, ಪೋಕ್ಸೋ ಕಾನೂನು, ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡಿದರು.
ನಿತ್ಯ ಜೀವನದಲ್ಲಿ ಆಧ್ಯಾತ್ಮ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದ ಧಾರ್ಮಿಕ ಚಿಂತಕ ನಾವೂರಿನ ಡಾ. ಪ್ರದೀಪ್ ಆಟಿಕುಕ್ಕೆ ಪ್ರಕೃತಿಗೆ ಮಾನವನ ಅಗತ್ಯ ಇಲ್ಲ. ಮನುಷ್ಯ ಪರಿಪೂರ್ಣಗೊಳ್ಳಬೇಕಾದರೆ ಆತ ಪ್ರಕೃತಿಯ ಕುರಿತು ಅರ್ಥ ಮಾಡಿಕೊಳ್ಳುವುದು ಅತಿ ಮುಖ್ಯ. ಪ್ರತೀ ಕ್ಷಣವನ್ನು ಸಂಭ್ರಮಿಸಲು ಆಧ್ಯಾತ್ಮ ಉತ್ತಮ ಅಡಿಪಾಯ ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ಘಟಕದ ಅಧ್ಯಕ್ಷ ಯದುಪತಿ ಗೌಡ ಶುಭ ಹಾರೈಸಿದರು .
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು.
ಯಂಗ್ ಚಾಲೆಂಜರ್ಸ್ ಕ್ರೀಡಾಸಂಘದ ಸಂಚಾಲಕ ನಾಮದೇವ ರಾವ್ ಸ್ವಾಗತಿಸಿದರು. ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಫಡಕೆ ವಂದಿಸಿದರು. ಪತ್ರಕರ್ತ ಅಶ್ರಫ್ ಆಲಿ ಕುಂಞಿ ಕಾರ್ಯಕ್ರಮ ನಿರೂಪಿಸಿದರು.
-ಸನ್ಮಾನ –
ಬಾಲಕೃಷ್ಣ ಸಹಸ್ರಬುದ್ಧೆ (ಸಾಹಿತ್ಯ), ಚಂದ್ರಕಾಂತ ಪ್ರಭು ( ಸಹಕಾರಿ), ವಿದ್ಯಾ ಚಂದ್ರಕಾಂತ ಗೋರೆ ಸುಲ್ಕೇರಿ (ಹೈನುಗಾರಿಕೆ-ಸಂಘಟನೆ), ಅಯೂಬ್ ಆಲಿ ಕುಂಞಿ
(ತುರ್ತು ಸೇವೆ)ಕೃಷ್ಣಾನಂದ ರಾವ್(ಕ್ರೀಡೆ),ಸದಾನಂದ ಬಿ.,(ಸಾಹಿತ್ಯ) ಇವರ ವಿಶೇಷ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸ್ವಾತಿ ಮತ್ತು ಶಂಕರ್ ಎನ್. ತಾಮನ್ಕರ್ ಸನ್ಮಾನಿತರನ್ನು ಪರಿಚಯಿಸಿದರು.
ನವನಿ ಮತ್ತು
ಪ್ರವೀಣ್ ದೇವಧರ್ ಸಹಕರಿಸಿದರು.

Related posts

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ: ತರಗತಿ ಕೊಠಡಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ “ಅಕ್ಷಯ ಪಾಕಶಾಲೆ” ಶಾಸಕ ಹರೀಶ್ ಪೂಂಜರಿಂದ ಲೋಕಾರ್ಪಣೆ: ಸಂಘದಿಂದ ರೂ. 70 ಸಾವಿರ ವೈದ್ಯಕೀಯ ನೆರವು

Suddi Udaya

ಜ. 20 ರಂದು ನಡೆಯಲಿರುವ ಗಮಕ ಸಮ್ಮೇಳನ ಶಾಸಕರಿಗೆ ಆಹ್ವಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ರಾಷ್ಟ್ರೀಯ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ

Suddi Udaya

ಎರಕ ಶಿಲ್ಪದ ಅಪ್ರತಿಮ ಸಾಧನೆಗೆ ಯಶೋಧರ ಆಚಾರ್ಯ ಪೆರಾಡಿಗೆ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ

Suddi Udaya

ಕಳೆಂಜದಲ್ಲಿ ಅಣಬೆ ಮತ್ತು ಮೊಟ್ಟೆ ಕೋಳಿ ಸಾಕಾಣಿಕೆ ತರಬೇತಿ

Suddi Udaya
error: Content is protected !!