September 6, 2026
Uncategorized

ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧ್ವಜ ಸ್ತಂಭ ಪ್ರತಿಷ್ಠೆ

ಬೆಳ್ತಂಗಡಿ: ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧ್ವಜ ಸ್ತಂಭ(ಕೊಡಿ ಮರ)ದ ಪ್ರತಿಷ್ಠಾ ಕಾರ್ಯ ಮಾ.೩೦ ರಂದು ರಾಮನವಮಿಯ ಶುಭದಿನದಲ್ಲಿ ನೆರವೇರಿತು. ದೇವಳದ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಕೇಳ್ಕರ್‌ ಹಾಗೂ ಪದ್ಮನಾಭ ಜೋಶಿ ಅವರ ನೇತೃತ್ವದಲ್ಲಿ ಪ್ರತಿಷ್ಠಾ ಹೋಮ ಇತ್ಯಾದಿ ವೈದಿಕ ಕಾರ್ಯಕ್ರಮಗಳು ನಡೆದವು. ಅರ್ಚಕರಾದ ಮಧುಸೂದನ ಮರಾಠೆ, ಅಮರೇಶ ಜೋಶಿ ಸಹಕರಿಸಿದರು. ಧ್ವಜ ಸ್ತಂಭಕ್ಕೆ ಮರವನ್ನು ಅಂಡಿಂಜೆಯ ಮುತ್ತಯ್ಯ ಪೂಜಾರಿ ದಾನವಾಗಿ ನೀಡಿದ್ದರೆ, ಮಂಗಳೂರಿನ ಜನಾರ್ದನ ತಾಮ್ಹನ್‌ಕಾರ್‌ ಅವರು ಕೊಡಿಮರಕ್ಕೆ ತಾಮ್ರದ ಹೊದಿಕೆಯ ಸೇವೆಯನ್ನು ಮಾಡಿಸಿದ್ದಾರೆ.
ಆಡಳಿತೆ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ, ಸಹಕ ಮೊಕ್ತೇಸರುಗಳಾದ ಪ್ರಭಾಕರ ಆಠವಳೆ, ಪದ್ಮನಾಭ ನಾತು, ದಯಾನಂದ ನಾತು, ಪುರುಷೋತ್ತಮ ತಾಮ್ಹನ್‌ಕರ್‌ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಜೈನ ಶ್ರಾವಕ, ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

Suddi Udaya

ಸುಲ್ಕೇರಿ: ಅ.ಖಾ.ಹಿ.ಪ್ರಾ. ಶಾಲೆ- ಶ್ರೀರಾಮ ಪ್ರೌಢಶಾಲೆಯಲ್ಲಿ ಸಹಪಠ್ಯ ಚಟುವಟಿಕೆ ಉದ್ಘಾಟನೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನದ ಬೀದಿ ನಾಟಕ

Suddi Udaya

ಗಡಾಯಿಕಲ್ಲು ಚಾರಣ: ತಾತ್ಕಾಲಿಕ ನಿಷೇಧ

Suddi Udaya

ಪ್ರೋ. ಕೆ.ಯಸ್ ಭಗವಾನ್ ಅವರ ಹೇಳಿಕೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಖಂಡನೆ

Suddi Udaya
error: Content is protected !!