September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

ಕೊಕ್ಕಡ : ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಸಾಮಾನ್ಯ ಸಭೆಯು ಕೊಕ್ಕಡ ಮರಿಯಾಕ್ರಪಾ ಕಚೇರಿಯಲ್ಲಿ ಮೇ. 23 ರಂದು ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು.

ವಲಯ 15 ವಲಯಾಡಳಿತ ಸಮಿತಿ ಸಭೆಯನ್ನು ಕೊಕ್ಕಡ ಘಟಕದ ಆತಿಥ್ಯದಲ್ಲಿ ಮೇ. 28 ರಂದು ನಡೆಸಲು ನಿರ್ಧರಿಸಲಾಯಿತು.

ಜೂನ್ ತಿಂಗಳಲ್ಲಿ ಬ್ರಹತ್ ರಕ್ತದಾನ ಶಿಬಿರ, ರಕ್ತದಾನಿಗಳಗೆ ಅಭಿನಂದನೆ ನಡೆಸುವುದು. ಜೇಸಿ ಫೌಂಡೇಶನಿಗೆ ಹೆಚ್. ಜಿ.ಎಫ್. ಕೊಡುಗೆಯನ್ನು ನೀಡುವುದು, ಊರಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ, ಮಧ್ಯಂತರ ಸಮ್ಮೇಳನದಲ್ಲಿ ಭಾಗವಹಿಸುವುದು. ನೂರರಷ್ಟು ಶೇಕಡಾ ಫಲಿತಾಂಶ ಸಾಧಿಸಿದ ಪ್ರೌಢ ಶಾಲೆಗಳಿಗೆ ಅಭಿನಂದನೆ ಸಮರ್ಪಣೆ, ಕ್ಯಾನ್ಸರ್ ಪೀಡಿತ ಬಡ ಮಹಿಳೆಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ.

ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶುಭ ಹಾರೈಸಿದರು. ಯುವ ಜೇಸಿ ಶ್ರವಣ್ ವರದಿ ವಾಚಿಸಿದರು.

ಉಪಾಧ್ಯಕ್ಷರಾದ ಯು.ನರಸಿಂಹ ನಾಯಕ್, ಹರಿಶ್ಚಂದ್ರ ಆಚಾರ್ಯ, ಹಿರಿಯ ಸದಸ್ಯ ಜೋಸೆಫ್ ಪಿರೇರಾ ಸಲಹೆ ಸೂಚನೆಗಳನ್ನು ನೀಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ವಂದಿಸಿದರು.

Related posts

ಬ್ಲಾಕ್ ಜಾಕ್ ಪ್ರೊಡಕ್ಟ್ ಪಿಚ್ಚಿಂಗ್ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya

ಇಂದಬೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೆ ಹರಿದ ಮಳೆ ನೀರು ಹಾಗೂ ರಸ್ತೆಯುದ್ದಕ್ಕೂ ಬಾಗಿ ನಿಂತ ಅಪಾಯಕಾರಿ ಮರಗಳು

Suddi Udaya

ವೇಣೂರಿನಲ್ಲಿ ಶ್ರೀಕೃಷ್ಣ ಮಾರ್ಟ್ ಶುಭಾರಂಭ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಶಾಲಾ ವಿದ್ಯಾರ್ಥಿಗಳಾದ ಸಂಜ್ಞಾ ಮತ್ತು ಶಾನ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ಮತದಾನದ ಮಾಹಿತಿ ಶಿಬಿರ

Suddi Udaya

ಮೃತ ಬಾಲಕ ಸುಮಂತ್ ಮನೆಗೆ ವಿಹಿಂಪ ಪ್ರಮುಖರ ಭೇಟಿ

Suddi Udaya
error: Content is protected !!