September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಯುವವಾಹಿನಿಯಿಂದ ‘ತುಳುನಾಡ ತುಡರ ಪರ್ಬ ‘

ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ ಪರ್ಬ ಕಾರ್ಯಕ್ರಮ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನ.12 ರಂದು ನಡೆಯಿತು.

ಘಟಕದ ಅಧ್ಯಕ್ಷ ಅಶ್ವತ್ಥ್ ಕುಮಾರ್ ಮಾತನಾಡಿ, ‘ ದೀಪಾವಳಿ ಪ್ರತಿ ಮನೆಯಲ್ಲೂ ಸಂಭ್ರಮ ಸಂತೋಷವನ್ನು ನೀಡುವ ಹಬ್ಬ. ಪಾರಂಪರಿಕ ಆಚರಣೆಯ ಜೊತೆಗೆ ನಮ್ಮೊಳಗಿನ ಅಜ್ಞಾನ ದೂರವಾಗಿ ಸುಜ್ಞಾನ ಬೆಳಗುವ ಹಬ್ಬವಾಗಲಿ’ ಎಂದು ಶುಭ ಹಾರೈಸಿದರು.

ಘಟಕದ ಗೌರವ ಸಲಹೆಗಾರ ರಮಾನಂದ ಸಾಲಿಯಾನ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಘಟಕದ ಸಲಹೆಗಾರ ವಿಠಲ್ ಸಿ ಪೂಜಾರಿ, ಉಪಾಧ್ಯಕ್ಷ ಸದಾಶಿವ ಊರ, ಕಾರ್ಯದರ್ಶಿ ಹರೀಶ್ ಕನ್ಯಾಡಿ, ಕೋಶಾಧಿಕಾರಿ ವಿಜಯ ಶಿರ್ಲಾಲು, ಮಾಜಿ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಹರೀಶ್ ಕನ್ಯಾಡಿ, ಕೊಲ್ಲಿ ಶ್ರೀ ದುರ್ಗಾ ದೇವಿ ಭಜನಾ ಮಂಡಳಿ ಮೇಲ್ವಿಚಾರಕಿ ಪ್ರಮೀಳಾ ಉಮೇಶ್ ಇದ್ದರು.

ಶ್ರೀ ದುರ್ಗಾ ದೇವಿ ಭಜನಾ ಮಂಡಳಿ ಕೊಲ್ಲಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅನೀಸ್ ಅಮೀನ್ ವೇಣೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ಬಾಲಕ ಮತ್ತು ಬಾಲಕಿಯರಿಗೆ ಪ್ರಥಮ ಸ್ಥಾನ

Suddi Udaya

ಚಿಬಿದ್ರೆ: ಪೆರಿಯಡ್ಕ ಮಾಲ್ನ ನಿವಾಸಿ ಬಾಲಣ್ಣ ಗೌಡ ಹೃದಯಾಘಾತದಿಂದ ನಿಧನ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya

ಕಳೆಂಜ : ಶೌರ್ಯ ಸ್ವಯಂಸೇವಕ ಶೀನಪ್ಪ ನಾಯ್ಕ್ ರಿಗೆ ಸನ್ಮಾನ

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಶೌರ್ಯ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶಾನ್ ಎಚ್ ಪೂಜಾರಿ ಗೆ ಚಿನ್ನದ ಪದಕ

Suddi Udaya
error: Content is protected !!