September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮಡಂತ್ಯಾರು: ಮಾಲಾಡಿ ಬಿ ಎಂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

ಮಡಂತ್ಯಾರು: ಬಿ ಎಂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮಾಲಾಡಿ ಮಡಂತ್ಯಾರು ಇದರ ಮಹಾಸಭೆಯು ಎಸ್ ಕೆ ಸಭಾಭವನ ಮಾಲಾಡಿ ಇದರಲ್ಲಿ ಸಂಘದ ಅಧ್ಯಕ್ಷ ಮೊಹಮ್ಮದ್ ರಫೀಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಥ್ ಸಾಲಿಯಾನ್, ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು ಉಪಸ್ಥಿತರಿದ್ದರು.

ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಘು ಕೆ ಆರ್ ಬಂಗೇರ, ಬಿ ಎಂ ಆಟೋ ರಿಕ್ಷಾ ಮಾಲಕರ ಸಂಘದ ಮಾಜಿ ಅಧ್ಯಕ್ಷ ಸುಲೇಮಾನ್ ಮುಂಡಾಡಿ, ಇಲ್ಯಾಸ್ ಬಸವನಗುಡಿ ಸ್ವಾಗತಿಸಿದರು. ಶೇಕ್ ಸುಲೇಮಾನ್ ವಾರ್ಷಿಕ ವರದಿಯನ್ನು ಓದಿ ಹೇಳಿದರು.

ಈ ಸಂದರ್ಭದಲ್ಲಿ 2024ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪಡ್ಪು, ಅಧ್ಯಕ್ಷರಾಗಿ ಶೇಕ್ ಸುಲೇಮಾನ್ ಮಾಲಾಡಿ, ಉಪಾಧ್ಯಕ್ಷರಾಗಿ ರಮೇಶ್ ಬಳ್ಳಮಂಜ, ಕಾರ್ಯದರ್ಶಿಯಾಗಿ ಇಲ್ಯಾಸ್ ಬಸವನಗುಡಿ, ಜೊತೆ ಕಾರ್ಯದರ್ಶಿಯಾಗಿ ಸಮೀರ್ ಯುಬಿ, ಖಜಾಂಜಿಯಾಗಿ ಸುರೇಶ್ ಬಳ್ಳಮಂಜ, ಲೆಕ್ಕಪರಿಶೋಧಕರಾಗಿ ಕಲಂದರ್ ಶಾಪಿ ಪಣಕಜೆ, ಜೊತೆ ಲೆಕ್ಕ ಪರಿಶೋಧಕರಾಗಿ ಸಿರಾಜ್ ಬಸವನಗುಡಿ, ಸಲಹೆಗಾರರಾಗಿ ರಘು ಕೆ ಆರ್ ಬಂಗೇರ ಹಾಗೂ ಸುಲೇಮಾನ್ ಮುಂಡಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೀನ್ ಮಾಲಾಡಿ, ಸುದೀಪ್ ಅಬ್ದುಲ್ ರಜಾಕ್, ಇರ್ಫಾನ್ ರಫೀಕ್ ಮಾಲಾಡಿ, ನಾಸಿರ್ ಬಂಗೇರ್ ಕಟ್ಟೆ, ಅಜೀಜ್ ಮಾಲಾಡಿ, ಅಶ್ರಫ್ ಕೊಡಿಯಾಲ್, ಅಶೋಕ್ ಬಂಗಾರಕಟ್ಟೆ, ಆತಿಫ್ ಅಲ್ತಾಫ್ ಇವರನ್ನ ಆಯ್ಕೆ ಮಾಡಲಾಯಿತು.

Related posts

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬೈಕ್ ವಿರುದ್ಧ ಪ್ರಕರಣ ದಾಖಲು

Suddi Udaya

ಅಂಬರ ಮರ್ಲೆರ್” ರಿಟರ್ನ್ಸ್ ತುಳು ಧಾರಾವಾಹಿಯ ತಂಡಕ್ಕೆ ಶಾಸಕ ಹರೀಶ್ ಪೂಂಜರವರಿಂದ ಶುಭ ಹಾರೈಕೆ

Suddi Udaya

ಉಜಿರೆ ಅನುಗ್ರಹ ಶಾಲಾ ಪಾಲಕ ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್‌ ಅಕೌಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಎಸ್.ಡಿ.ಎಂ ಐಟಿ ಕಾಲೇಜು : ವಾರ್ಷಿಕ ಕ್ರೀಡಾ ಕೂಟ

Suddi Udaya

ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಹಾಗೂ ಗಲ್ಫ್ ಸಮಿತಿ ನೇತೃತ್ವದಲ್ಲಿ; ಜ. 7 : ಪರಿಮ ಜಾರಿಗೆ ಬೈಲಿನಲ್ಲಿ ಏಕದಿನ ಮತ ಪ್ರಭಾಷಣ – ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!