26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ:ಬೋಂಟ್ರೊಟ್ಟುಗುತ್ತು ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ‌‌

ಬೆಳ್ತಂಗಡಿ: ದ.ಕ ಉಡುಪಿ ಜಿಲ್ಲೆ ದರ್ಮದ ನೆಲೆವೀಡು ಎಂದೆ ಖ್ಯಾತಿ ಹೊಂದಿದ್ದು ಇದು ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವ ಜಿಲ್ಲೆ ಅಲ್ಲದೆ ಸನಾತನ ಹಿಂದೂ ದರ್ಮವನ್ನು ಬೆಳೆಸುವ ಜಿಲ್ಲೆಯು ಹೌದು.ಅಜೀರ್ಣಾವಸ್ಥೆಯಲ್ಲಿ ಇರುವ ದೇವಸ್ಥಾನ, ದೈವಸ್ಥಾನದ ಜೀರ್ಣೋದ್ಧಾರ ಮಾಡಿದರೆ ಜೀವನ ಪಾವನವಾದಂತೆ. ಇಂದು ಬೋಂಟ್ರೊಟ್ಟುವಿನ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರ ಗೊಂಡಿದ್ದು ಇಲ್ಲಿನ ಭಕ್ತರ ಜೀವನ ಪಾವನವಾಗಿದೆ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಡಿ.31 ರಂದು ಬಳಂಜ ಬೋಂಟ್ರೊಟ್ಟುಗುತ್ತು ಶ್ರಿ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಕಲಶಾಭಿಷೇಕ ಸಮಿತಿ ವತಿಯಿಂದ ನಡೆದ ಮಹಾ ಚಂಡಿಕಾಯಾಗ ಮತ್ತು ದೈವಗಳ ಪುನರ್ ಪ್ರತಿಷ್ಟಾ ಕಲಶಾಭಿಷೇಕ ,ನೇಮೋತ್ಸವದ ಪ್ರಯುಕ್ತ ನಡೆದ ದಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಬಳಂಜ ಗ್ರಾಮದ ಜನರು ಪ್ರತಿಯೊಂದು ಕಾರ್ಯಕ್ರಮವನ್ನು ರಾಜಕೀಯ, ಜಾತಿ ಧರ್ಮ ನೋಡದೆ ಆಯೋಜಿಸಿ ಇತರರಿಗೆ ಮಾದರಿಯಾಗುತ್ತಾರೆ ಎಂದರು.

ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ ಅಜಿಲರು ಮಾತನಾಡಿ ,ಅಜಿಲ ಸೀಮೆಯ ಎಲ್ಲಾ ದೈವಸ್ಥಾನ, ದೇಗುಲಗಳು ಜೀರ್ಣೋದ್ಧಾರಗೊಂಡು ಅಭಿವೃದ್ಧಿ ಪಥದಲ್ಲಿ ಸಾಗಿದೆ. ಅತ್ಯಂತ ಸಂತೋಷವಿದೆ. ಈ ಕ್ಷೇತ್ರ ಇನ್ನಷ್ಟು ಪ್ರಗತಿಹೊಂದಲಿ ಎಂದರು.

ಜಾನಪದ ಸಂಶೋದಕ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಧಾರ್ಮಿಕ ಉಪನ್ಯಾಸ ನೀಡಿ ದೈವ ದೇವರ ಇತಿಹಾಸ ತಿಳಿದರೆ ಪ್ರತಿಯೊಂದಕ್ಕೂ ಒಂದೊಂದು ರೀತಿಯ ಸತ್ಯ ಘಟನೆಗಳು ಇದೆ. ಯಾರೇ ಎಷ್ಟೇ ಉನ್ನತ ಮಟ್ಟಕ್ಕೆ ಏರಿದರು ದೈವ ದೇವರ ಅರಾದನೆ ಮರೆಯ ಬಾರದು .ಕೆಲವೊಂದು ಅಡೆತಡೆಗಳು ದೈವ ದೇವರನ್ನು ಮರೆತರೆ ಮಾತ್ರ ಬರುವುದು ಎಂದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ದಾರ್ಮಿಕ ಪರಿಷತ್ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ,ರಾಜ್ಯ ಹಮದುಳಿದ ಆಯೋಗದ ನಿರ್ದೇಶಕ ಕೆ‌.ಟಿ ಸುವರ್ಣ ಬಳಂಜ ಗ್ರಾ ಪಂ ಅಧ್ಯಕ್ಷೆ ಶೋಭಾ ಕುಲಾಲ್, ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಶ್ರಿ ಗುರುನಾರಾಯಣ ಸೇವಾ ಸಂಘದ ಅದ್ಯಕ್ಷ ಚಿದಾನಂದ ಪುಜಾರಿ ಎಲ್ದಕ್ಕ, ಮಂಗಳೂರು ಶ್ರಿ ಕ್ಷೇತ್ರ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರ ರೋಗ ತಜ್ಞ ಡಾ.ಸದಾನಂದ ಪೂಜಾರಿ, ಕೆ.ಟಿ ಸುವರ್ಣ, ಕಲಶಾಭಿಷೇಕ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ , ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಉಪಸ್ಥಿತರಿದ್ದರು.

ಟ್ರಸ್ಟ್ ನ ಗಣೇಶ್ ಪೂಜಾರಿ ಬೊಂಟ್ರೋಟ್ಟು ಗುತ್ತು, ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಡು ಗುತ್ತು, ಸದಾನಂದ ಪೂಜಾರಿ ಬೊಂಟ್ರೋಟ್ಟು ಗುತ್ತು, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್‌ಎಸ್ ಹಾಗೂ ಸಮಿತಿ ಸದಸ್ಯರು ಸಹಕರಿಸಿದರು.

ಸನ್ಮಾನ: ಬೊಂಟ್ರೋಟ್ಟು ಗುತ್ತು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿ ಸಹಕರಿಸಿದ ಶಾಸಕ ಹರೀಶ್ ಪೂಂಜಾ, ವೈದಿಕ ವಿಧಿ ವಿಧಾನ ನೆರವೇರಿಸಿದ ಶ್ರಿನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮದ್ಡಡ್ಕ, ಬೊಂಟ್ರೋಟ್ಟು ಗುತ್ತು ಸೇವಾ ಟ್ರಸ್ಟ್ ಗೆ ಜಾಗ ನೀಡಿದ ಮಹಾಬಲ ಪೂಜಾರಿ, ಪ್ರಸಿದ್ದ ದೈವ ನರ್ತಕ ಬೇಬಿ ಪರವ ರವರನ್ನು ಗೌರವಿಸಲಾಯಿತು.

ಶಾರಿಕಾ ಹೆಚ್ ಪ್ರಾರ್ಥಿಸಿ, ಬೊಂಟ್ರೋಟ್ಟು ಗುತ್ತು ಸೇವಾ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಸದಾನಂದ ಪಿ ಸಾಲಿಯಾನ್ ವಂದಿಸಿದರು. ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Related posts

ಸುಲ್ಕೇರಿಮೊಗ್ರು: ಭಾರಿ ಮಳೆಗೆ ಮನೆಯ ಕಂಪೌಂಡ್ ಕುಸಿತ

Suddi Udaya

ಕಳೆಂಜ: ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಧನಂಜಯ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೂತನ ಅಧ್ಯಕ್ಷ ಅಲೋಷಿಯಸ್ ಎಸ್ ಲೋಬೋ ಮತ್ತು ತಂಡದ ಪದಗ್ರಹಣ ಸಮಾರಂಭ

Suddi Udaya

ಟ್ರೆಕ್ಕಿಂಗ್ ಗೆ ಬಂದು ದಾರಿ ತಪ್ಪಿದ ಬೆಂಗಳೂರಿನ ಯುವಕ ಕಾಡಿನಲ್ಲಿ ಪತ್ತೆ

Suddi Udaya

ಬೆಳ್ತಂಗಡಿ: ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜೃಂಭಣೆಯ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya
error: Content is protected !!