September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಟೀಂ ಅಭಯಹಸ್ತ ವತಿಯಿಂದ ಸುಲ್ಕೇರಿಮೊಗ್ರು ಸರ್ಕಾರಿ ಶಾಲೆಗೆ ಆರ್ಥಿಕ ಸಹಕಾರದ ಹಸ್ತಾಂತರ-ಬಹುಮಾನ ವಿತರಣೆ

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಏಳು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರತಿಷ್ಠಿತ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿಮೊಗ್ರು ಇಲ್ಲಿನ ಅಗತ್ಯತೆಗೆ ಪೂರಕವಾಗಿ ಆರ್ಥಿಕ ಸಹಕಾರವನ್ನು ಈ ದಿನ ಹಸ್ತಾಂತರ ಮಾಡಲಾಯಿತು ಹಾಗೂ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮಗಳ ಬಹುಮಾನ ವಿತರಣೆ ಮಾಡಲಾಯಿತು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಕೊಡಂಗೆ ರವರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಹಸ್ತಾಂತರಿಸಿದರು. ಸಂಘಟನೆಯ ಸಲಹೆಗಾರರಾದ ಉಮೇಶ್ ಸುವರ್ಣ ರವರು ಬಹುಮಾನ ವಿತರಿಸಿದರು

ಸಭೆಯಲ್ಲಿ ಟೀಂ ಅಭಯಹಸ್ತ ಸಂಘಟನೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್ ನೀರಲ್ಕೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ರೇವತಿ ,ಮುಖ್ಯಶಿಕ್ಷಕರಾದ ನಾಗಭೂಷಣ್, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ಶ್ರೀಮತಿ ಶಾಂತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

Related posts

ಎಕ್ಸೆಲ್ ವಿದ್ಯಾರ್ಥಿನಿ ವರ್ಣಿಕ ಎಚ್. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

Suddi Udaya

ಗುರುವಾಯನಕೆರೆ ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಉಮಾ ಡಿ ಗೌಡ ಹಟ್ಟತ್ತೋಡಿ ರವರಿಗೆ “ಜಿಲ್ಲಾ ಮಟ್ಟದ ವಿದ್ಯಾರತ್ನ ಪ್ರಶಸ್ತಿ”

Suddi Udaya

ಉಜಿರೆ : ಅನುಗ್ರಹ ಶಾಲೆಯಲ್ಲಿ ಹುತಾತ್ಮರ ದಿನಾಚರಣೆ

Suddi Udaya

ಬಜೆಟ್ ನಿಂದ ಭಾರತದ ವರ್ಚಸ್ಸು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದೆ: ಕಿರಣ್ ಚಂದ್ರ ಪುಷ್ಪಗಿರಿ

Suddi Udaya

ಬುರುಡೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾದ ಪ್ರದೀಪ್ : ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಎಸ್.ಐ.ಟಿ

Suddi Udaya

ಅಳದಂಗಡಿ: ಸುದ್ದಿ ಉದಯ ವಾರಪತ್ರಿಕೆ ವರದಿಗೆ ಅಳದಂಗಡಿ ಗ್ರಾ.ಪಂನಿಂದ ಸ್ಪಂದನೆ: ಶೋಚನೀಯ ಸ್ಥಿಯಲ್ಲಿದ್ದ ಸೋರುತ್ತಿದ್ದ ಮನೆಯ ಮೇಲ್ಚಾವಣಿ ತೆರವು: ಮೇಲ್ಛಾವಣಿಗೆ ಶೀಟ್ ಅಳವಡಿಕೆಯ ಕೆಲಸ ಪ್ರಾರಂಭ,ಸಾರ್ವಜನಿಕರಿಂದ ಮೆಚ್ಚುಗೆ

Suddi Udaya
error: Content is protected !!