32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿ

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಯೋಗ ದಿನಾಚರಣೆ ಹಾಗೂ ಯೋಗ ಸಪ್ತಾಹದ ಉದ್ಘಾಟನೆ

ಉಜಿರೆ: ವಯಸ್ಸು ಹಾಗೂ ಜೀವನ ಶೈಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ದೈಹಿಕ ಕ್ಷಮತೆಗೆ , ಮನಸ್ಸಿನ ಹತೋಟಿಗೆ ಯೋಗ ಅಗತ್ಯ. ಸಾಧಾರಣವಾಗಿ ಹಾರ್ಮೋನ್ ವ್ಯತ್ಯಾಸದಿಂದ ಮಾನಸಿಕ ಸ್ಥಿತಿ ಬದಲಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ದಿನನಿತ್ಯದ ಕೆಲಸಗಳಿಂದ ಹಾಗೆಯೇ ವ್ಯಾವಹಾರಿಕ ಕೆಲಸಕ್ಕೆ ಹೋಗುವ ಹೆಂಗಸರಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಯೋಗ ಪರಿಣಾಮಕಾರಿ ಆಗುತ್ತದೆ. ಯೋಗವು ಆಂತರಿಕ ಸಂತೋಷ ನೀಡುವ ಸಾಧನ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಶಾಲ್ಮಲೀ ಸುನಿಲ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ನಡೆದ ಯೋಗ ದಿನಾಚರಣೆ ಹಾಗೂ ಯೋಗ ಸಪ್ತಾಹ ಉದ್ಘಾಟನೆ ಮಾಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಯಾಂತ್ರಿಕ ಜೀವನದಲ್ಲಿರುವ ವ್ಯಕ್ತಿಗಳ ಮಾನಸಿಕ ಸ್ಥಿರತೆಗೆ ಯೋಗ ಮುಖ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳಾದ ಸಾಕ್ಷಿ ಹಾಗೂ ಕೀರ್ತನಾ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಧನುಶ್ರೀ ನಿರೂಪಿಸಿ , ಶ್ರುತಾ ಸ್ವಾಗತಿಸಿ ವಂದಿಸಿದರು.

Related posts

ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ

Suddi Udaya

ಬೆಳ್ತಂಗಡಿ : ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ: ಇನ್ನು ಕೆಲವೇ ದಿನಗಳು

Suddi Udaya

ಕುತ್ಲೂರು ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯೆಯರಿಗೆ ಮಲ್ಲಿಗೆಯ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದ್ರವಸಾರಜನಕ ಜಾಡಿಗಳ ವಿತರಣೆ

Suddi Udaya

ಮಾಲಾಡಿ: ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಮಾಹಿತಿ

Suddi Udaya
error: Content is protected !!