September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಸ್ವೀಕಾರ

ಧರ್ಮಸ್ಥಳ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯ 2024 -2025 ನೇ ಸಾಲಿನ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲಾ ಸರಕಾರದ ರಾಜ್ಯಪಾಲರಾದ ಶ್ರೀಮತಿ ಜಯಶ್ರೀ ಜೈನ್ ಇವರು ಶಾಲಾ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲದ ಸದಸ್ಯರಿಗೆ ಗೌಪ್ಯತೆ ಹಾಗೂ ಕರ್ತವ್ಯದ ಪ್ರಮಾಣವಚನ ಬೋಧಿಸಿ, ಸರಕಾರ ಕಾರ್ಯ ನಿರ್ವಹಿಸಬೇಕಾದ ಬಗೆಗೆ ಮಾರ್ಗದರ್ಶನ ನೀಡಿದರು. ಶಿಕ್ಷಕ ಜಯರಾಮ ಮಯ್ಯ ಪ್ರಸ್ತಾವಿಸಿ, ಶಾಲಾ ಸರಕಾರ ನಡೆಯಬೇಕಾದ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ನಾಯಕ ಹಾಗೂ ಮುಖ್ಯಮಂತ್ರಿ ನಿಶಾಂತ್ ತನ್ನ ಯೋಜನೆಗಳನ್ನು ಸದನದ ಮುಂದಿರಿಸಿದರು. ವಿರೋಧ ಪಕ್ಷದ ನಾಯಕ ಶಶಾಂಕ್ ಡಿ ಪ್ರತಿವಂದನೆ ಸಲ್ಲಿಸಿ, ಸರಕಾರದ ಕಾರ್ಯದಲ್ಲಿ ಸಹಕಾರದ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ರಶ್ಮಿ ಸ್ವಾಗತಿಸಿ, ಧನಂಜಯ ವಂದಿಸಿದ ಈ ಕಾರ್ಯಕ್ರಮವನ್ನು ಸಭಾಪತಿ ಕು| ಶ್ರಾವ್ಯ ನಿರೂಪಿಸಿದರು. ಎಲ್ಲಾ ಶಿಕ್ಷಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಮಡಂತ್ಯಾರು ಮಂಜಲ್ ಪಲ್ಕೆಯಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚಿಸಿದ ಮಡಂತ್ಯಾರು ಗ್ರಾ.ಪಂ.

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ದೀಪಾವಳಿ ಆಚರಣೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರಿಂದ ಮತದಾನ

Suddi Udaya

ಪುದುವೆಟ್ಟು: ಮಿಯ್ಯಾರು ಶ್ರೀ ವನದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ನಡ: ರಸ್ತೆಯ ನದಿಗೆ ನಿರ್ಮಿಸಲಾದ ವೆಂಟೆಡ್ ಡ್ಯಾಮ್ ನ ರಿಟೆನಿಂಗ್ ವಾಲ್ನ ಮೇಲೆ ನಿರ್ಮಿಸಲಾಗಿದ್ದ ಕಾಂಪೌಂಡ್ ಕುಸಿತ

Suddi Udaya
error: Content is protected !!