September 6, 2026
ಗ್ರಾಮಾಂತರ ಸುದ್ದಿ

ಕಳಿಯ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು : ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

ಕಳಿಯ ಗ್ರಾಮದ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಇಂದು ಸಂಜೆ ಅಂದಾಜು ಸುಮಾರು 3 ಗಂಟೆಗಳ ಸಮಯದಲ್ಲಿ ಇಬ್ಬರು ಅಪರಿಚಿತ ಯುವಕರ ಅನುಮಾನಾಸ್ಪದ
ವತಿ೯ನೆ ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ.

ಪತ್ರಕತ೯ ಕೆ.ಎನ್ ಗೌಡ ಅವರು ಬೈಕ್ ನಿಲ್ಲಿಸಿ ಯುವಕರಲ್ಲಿ ವಿಚಾರಿಸುತ್ತಿದಂತೆ ಕುಪ್ಪೆಟಿ ಮೂಲದವರು ಎಂದು ಹೇಳಿ ಬೈಕ್ ಚಲಾಯಿಸಿ ಕೊಂಡು ಪರಾರಿಯಾಗಿದ್ದಾರೆ. ಬೈಕ್ ನಂಬರ್‌ ಪ್ಲೇಟ್ ತಿರುಗ,ಮುರಗ ಹಾಕಿ ಕೊಂಡಿರುವುದು ಕಂಡು ಬಂದಿದೆ . ಈ ಇಬ್ಬರು (20-22 ವರ್ಷಗಳ ಆಸುಪಾಸು) ಯುವಕರು ಸಂಶಯಾಸ್ಪದ ವ್ಯಕ್ತಿಗಳಾಗಿ ಕಂಡು ಬಂದಿದ್ದು ,ಕಳಿಯ ಪಂಚಾಯತ್ ಹಾಗೂ ಆರಕ್ಷಕ

ಠಾಣೆಯವರು ಮತ್ತು ಸ್ಥಳೀಯರು ಗಮನಹರಿಸಬೇಕಾಗಿದೆ.
ಕಳೆದ 15 ದಿನಗಳ ಹಿಂದೆ ಅಪರಿಚಿತ ವ್ಯಕ್ತಿ ಮಂಜಲಡ್ಕ ದೈವಸ್ಥಾನದ ವಠಾರದ ಸಮೀಪದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದಿರುವ ಬಗ್ಗೆ ಸ್ಥಳೀಯ ವಾಟ್ಸಾಫ್ ಗ್ರೂಪ್ ನಲ್ಲಿ ವೈರಲ್ ಆಗಿತ್ತು. ಗೇರುಕಟ್ಟೆಯಿಂದ ಪರಪ್ಪು- ಕೊಯ್ಯೂರು ರಸ್ತೆಯ ಸುಲಭ ಸಂಪರ್ಕ ರಸ್ತೆಯಾಗಿದೆ.ಇದರಲ್ಲಿ ನೂರಾರು ಪ್ರಾಥಮಿಕ ಶಾಲಾ, ಪ್ರೌಢಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳು,ಮಹಿಳೆಯರು ಮತ್ತು ಸಾರ್ವಜನಿಕರು ಓಡುವ ರಸ್ತೆಯಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತ ನಡೆಯುವ ಮೊದಲು ಎಚ್ಚೆತ್ತು ಕೊಳ್ಳುವುದು ಸೂಕ್ತ ವೆಂದು ನಿರೀಕ್ಷಿಸಲಾಗಿದೆ.

Related posts

ಪಡ್ಲಾಡಿ 35ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ

Suddi Udaya

ಎಸ್.ಡಿ.ಎಂ. ಐಟಿಐ ವೇಣೂರಿನಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಕುಪ್ಪೆಟ್ಟಿ :ಕುಪ್ಪೆಟ್ಟಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ(CRP)ಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಬಿ. ಗೋಳಿತೊಟ್ಟು ಶಾಲೆಗೆ ವರ್ಗಾವಣೆ

Suddi Udaya

ಮಂಗಗಳ ಹಾವಳಿಯಿಂದ ತತ್ತರಿಸಿದ ನಿಡ್ಲೆ ಗ್ರಾಮಸ್ಥರು: ನಿಡ್ಲೆ ಜನಸ್ಪಂದನ ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

Suddi Udaya

ಶಾಸಕ ಹರೀಶ್ ಪೂಂಜರಿಂದ ಮ್ಯಾರಥನ್ ಜನಸ್ಪಂದನ ಸಭೆ

Suddi Udaya
error: Content is protected !!