September 6, 2026
Uncategorized

ಕೊಯ್ಯೂರು : ಕಾಂತಪ್ಪ ಗೌಡರವರಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಭಜನಾ ಮಂಡಳಿಗೆ ಮೇಜು ಕೊಡುಗೆ

ಕೊಯ್ಯೂರು: ಇಲ್ಲಿಯ ಬರೆಮೇಲು ಕಾಂತಪ್ಪ ಗೌಡ ಹಾಗೂ ಶ್ರೀಮತಿ ಅಶ್ವಿನಿ ಇವರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮವು ನಡೆಯಿತು.


ಭಜನಾ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಾಲ್ ಕೊಯ್ಯೂರು ಇಲ್ಲಿಯ ಪುರುಷರ, ಮಕ್ಕಳ ಮತ್ತು ಮಹಿಳೆಯರ ಹಾಗೂ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಇಲ್ಲಿಯ ಮಕ್ಕಳ ತಂಡಗಳ ಸದಸ್ಯರುಗಳು ಆಗಮಿಸಿ ಭಜನಾ ಸೇವೆಯನ್ನು ನಡೆಸಿಕೊಟ್ಟರು.


ಭಜನೆಗೆ ಆಗಮಿಸಿದಂತಹ ಎಲ್ಲಾ ಭಜಕ ವಿದ್ಯಾರ್ಥಿಗಳಿಗೆ ಕಾಂತಪ್ಪ ಗೌಡ ಹಾಗೂ ಮನೆಯವರು ಪುಸ್ತಕಗಳನ್ನು ನೀಡಿ ಗೌರವಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಾಲ್ ಕೊಯ್ಯೂರು ಇಲ್ಲಿಗೆ ಒಂದು ಮೇಜನ್ನು ( ಟೇಬಲ್) ಕೊಡುಗೆಯಾಗಿ ನೀಡಿ ಮಂದಿರದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಜನಾ ಮಂದಿರದ ಪದಾಧಿಕಾರಿಗಳೊಂದಿಗೆ ಕೈಜೋಡಿಸಿದರು.


ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ , ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಖಾಸು, ಗೌರವಾಧ್ಯಕ್ಷ ವಿಶ್ವನಾಥ ಗೌಡ, ಕಾರ್ಯದರ್ಶಿ ಓಬಯ್ಯ ನಾಯ್ಕ, ಕೋಶಾಧಿಕಾರಿ ಪಿ ಬಾಲಕೃಷ್ಣ ಸಾಲ್ಯಾನ್, ಮಹಿಳಾ ತಂಡದ ಅಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಹೇಮಂತ್ ಗೌಡ, ಕಾರ್ಯದರ್ಶಿಯಾದ ಶ್ರೀಮತಿ ಸುಜಾತ ತಾರಾನಾಥ ಗೌಡ, ಕೊಯ್ಯೂರು ಶ್ರೀ ಪಂಚದುರ್ಗ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಕಾಶ್ ರವರಿಗೆ ಕೃತಕ ಕಾಲಿನ ವ್ಯವಸ್ಥೆ

Suddi Udaya

ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮದುವೆ ಆಮಂತ್ರಣ ಕಳುಹಿಸಿದ ವರ: ವೈವಾಹಿಕ ಬದುಕಿಗೆ ಕಾಲಿಟ್ಟ ಸುಬ್ರಹ್ಮಣ್ಯ ಆಚಾರ್ಯ – ಸವಿತಾ ದಂಪತಿಗೆ ಪ್ರಧಾನಿ ಕಾರ್ಯಲಯದಿಂದ ತಲುಪಿತು ಶುಭಾಶಯ ಪತ್ರ

Suddi Udaya

ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ: ಅಗ್ನಿಗುಳಿಗನ ಗಗ್ಗರ ಸೇವೆ

Suddi Udaya

ಇಂದಬೆಟ್ಟು: ಕಲ್ಲಾಜೆ ಶಾಲೆಯ ಶಿಕ್ಷಕಿ ಅಪ್ಪಿ ಪೂಜಾರ್ತಿ ಯಾನೆ ಆಶಾಲತಾ ನಿಧನ

Suddi Udaya
error: Content is protected !!