September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್

ಕೊಯ್ಯೂರಿನ ಮಹಿಳೆ ನಾಪತ್ತೆ; ದೂರು ದಾಖಲು

ಕೊಯ್ಯೂರು: ಇಲ್ಲಿಯ ಮಲೆಬೆಟ್ಟು ನಿವಾಸಿ ರಝೀನ (24ವ) ನಾಪತ್ತೆಯಾಗಿದ್ದಾರೆ.

ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬುವವರ ಪತ್ನಿಯಾಗಿರುವ ರಝೀನ್ ಅವರ ಎರಡು ವರ್ಷದ ಮಗು 40 ದಿನಗಳ ಹಿಂದೆ ಸಾವಿಗೀಡಾಗಿತ್ತು.ನಂತರ ಕೊಯ್ಯೂರಿನ ತಾಯಿ ಮನೆಯಲ್ಲಿದ್ದ ರಝೀನ್ ಜೂ.22 ರಂದು ಸಂಜೆ 4 ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಆದರೆ ಇತ್ತ ಗಂಡನ ಮನೆಗೂ ಹೋಗದೆ, ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ.

ರಝೀನ್ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಗುರುತು ಪತ್ತೆಯಾದರೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ತಿಳಿಸಲು ಕೋರಲಾಗಿದೆ.ಇವರು ಕಂಡು ಬಂದಲ್ಲಿ, 08256-232093, ಬೆಳ್ತಂಗಡಿ ಪೊಲೀಸ್ ಠಾಣೆ 9480805370, ಪಿಎಸ್‌ಐ ಬೆಳ್ತಂಗಡಿ ಪೊಲೀಸ್ ಠಾಣೆ 8277986367, ಕಂಟ್ರೋಲ್ ರೂ. ದ.ಕ.ಜಿಲ್ಲೆ 9480805300 ಈ ನಂಬರ್‌ಗೆ ಸಂಪರ್ಕ ಮಾಡಲು ಕೋರಲಾಗಿದೆ.

Related posts

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಆರಂಬೋಡಿ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾಜಿ ಶಾಸಕ ಪ್ರಭಾಕರ್ ಮನೆಗೆ ಭೇಟಿ

Suddi Udaya

ವಾಣಿ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ವೇಣೂರು ಯುವವಾಹಿನಿ ಘಟಕದಿಂದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪುದುವೆಟ್ಟು ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿಂಧೂ ಕೆ.ಎಸ್ ಯವರಿಂದ ನಾಮಪತ್ರ ಸಲ್ಲಿಕೆ

Suddi Udaya
error: Content is protected !!