September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೆಂಪುಕಲ್ಲು-ಮರಳು ಸಮಸ್ಯೆ, ಟಿಪ್ಪರ್ ಚಾಲಕ-ಮಾಲಕರು ಕಂಗಾಲು

ಬೆಳ್ತಂಗಡಿ: ಕೆಂಪು ಕಲ್ಲು ಮತ್ತು ಮರಳು ಇವೆರಡನ್ನೂ ಉಪಯೋಗಿಸಿಕೊಂಡು ಮಾಡುವ ಕೆಲಸ ಕಾರ್ಯಗಳಿಗೆ ಸಾವಿರಾರು ಕಾರ್ಮಿಕರು ಅವಲಂಬಿತವಾಗಿದ್ದು ಇದೀಗ ಕೆಲಸವಿಲ್ಲದೆ ಟಿಪ್ಪರ್ ಚಾಲಕ-ಮಾಲಕರಿಗೆ ಸಮಸ್ಯೆಯಾಗಿದೆ ಎಂದು ಯುವ ಉದ್ಯಮಿ ಬಳಂಜ ಪ್ರವೀಣ್ ಪೂಜಾರಿ ಹೇಳಿದ್ದಾರೆ.

ಇವುಗಳ ಸಾಗಾಟದ ವಾಹನದ ಮೇಲೆ ಅದೆಷ್ಟು ಸಾಲ ಇನ್ಸುರೆನ್ಸ್, ಟ್ಯಾಕ್ಸ್, ಕಟ್ಟಿ ತಮ್ಮ ವಾಹನಗಳನ್ನು ಮಾಲಕರು ಮನೆಯಲ್ಲಿಯೇ ನಿಲ್ಲಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಯೊಬ್ಬರೂ ಉಪಯೋಗಿಸಲ್ಪಡುವ ಇಂತಹ ಅಗತ್ಯ ವಸ್ತುಗಳ ಮೇಲಾಗಿರುವ ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅನುಮತಿ ನೀಡುವಂತೆ ಕಾನೂನು ಮಾಡಬೇಕಾಗಿರುವುದು ಉತ್ತಮ.ಒಂದು ವೇಳೆ ಅನುಮತಿ ನೀಡಲು ವಿಳಂಬವಾಗಿ ಇದೇ ಪರಿಸ್ಥಿತಿ ಮುಂದುವರೆದರೆ ಅದೆಷ್ಟು ಕೂಲಿ ಕಾರ್ಮಿಕರು, ಮೇಸ್ತ್ರಿ ಕೆಲಸ, ವೈರಿಂಗ್ ಕೆಲಸದವರು,ಹಾರ್ಡ್‌ವೇರ್ ಅಂಗಡಿಯವರು,ಪೈಂಟ್ ಕೆಲಸದವರು, ಇನ್ನು ಹಲವಾರು ಕಾರ್ಮಿಕರು ತಮ್ಮ ದುಡಿಮೆಯನ್ನು ನಂಬಿಕೊಂಡು ಸಾಲ ಮಾಡಿ ದುಡಿಮೆಯಿಲ್ಲದೇ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.ಜನಪರ ಕಾಳಜಿಯಿಂದ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಆದಷ್ಟು ಬೇಗ ಅನುಮತಿಯನ್ನು ನೀಡಿ ಕಾರ್ಮಿಕ ವರ್ಗಕ್ಕೆ ಧೈರ್ಯ ತುಂಬಬೇಕಾಗಿದೆ ಎಂದವರು ತಿಳಿಸಿದ್ದಾರೆ.

Related posts

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸಂಸ್ಕೃತ ಮತ್ತು ಗಣಿತ ವಿಭಾಗದ ಜಂಟಿ ಆಯೋಗದಲ್ಲಿ “ಗಣಿತ ಸಂಸ್ಕೃತ ಸಂಗಮ “

Suddi Udaya

“ಗಡಾಯಿಕಲ್ಲು ರಹಸ್ಯ” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Suddi Udaya

ಇಂದಬೆಟ್ಟು : ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ ಒಕ್ಕೂಟದ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕೇಳದಪೇಟೆ ಸ.ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಸೌಜನ್ಯ ಹತ್ಯೆ ಪ್ರಕರಣ: ನೈಜ‌ ಆರೋಪಿಗಳ ಪತ್ತೆ‌‌ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ

Suddi Udaya
error: Content is protected !!