September 6, 2026
ಗ್ರಾಮಾಂತರ ಸುದ್ದಿ

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ಸೆಮಿ ಕ್ಲಾಸಿಕಲ್ ನಾಟಕ ಪಾಶ್ಚಾತ್ಯ ನೃತ್ಯ ತರಬೇತಿಗಳ ಉದ್ಘಾಟನೆ

ಧರ್ಮಸ್ಥಳ : ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರದ ಸಹಯೋಗದಲ್ಲಿ ನಾಟಕ ಯಕ್ಷಗಾನ ಸೆಮಿ ಕ್ಲಾಸಿಕಲ್ ಹಾಗೂ ಪಶ್ಚಿಮಾತ್ಯ ಶೈಲಿಯ ನೃತ್ಯ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರದ ಸಂಚಾಲಕಿ ತೃಪ್ತ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಲಾಕೇಂದ್ರದ ವತಿಯಿಂದ ನಿರ್ವಹಿಸುವ ಈ ತರಭೇತಿಯ ಸದುಪಯೋಗಪಡಿಸಿಕೊಳ್ಳಿ, ಹಾಗೂ ಈ ಎಲ್ಲಾ ತರಬೇತಿಗಳ ಪ್ರಯೋಜನ ಏನು ಇತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವಕಾಶವನ್ನು ಬಳಸುವ ಬಗ್ಗೆ,ಪ್ರತಿಭೆಗೆ ನೀರೆರೆದು ಪೋಷಿಸುವ ಬಗ್ಗೆ, ಪಠ್ಯೇತರ ಚಟುವಟಿಕೆಗಳ ಅಗತ್ಯ ಹಾಗೂ ಅವುಗಳ ಪ್ರಯೋಜನ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯಗಳನ್ನು ವಿವರಿಸಿದರು. ತೇಜಸ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕುಮಾರಿ ಅನುಜ್ಞಾ ಸ್ವಾಗತಿಸಿ, ಕುಮಾರಿ ಕಲ್ಪಿತ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಯಕ್ಷಗಾನ ತರಬೇತಿದಾರರಾಗಿ ಅರುಣ್ ಕುಮಾರ್, ನಾಟಕ ತರಬೇತಿದಾರರಾಗಿ ಯಶವಂತ್ ಬೆಳ್ತಂಗಡಿ, ಪಾಶ್ಚಿಮಾತ್ಯ ನೃತ್ಯ ತರಬೇತಿದಾರರಾಗಿ ವಿನ್ಯಾಸ್, ಸೆಮಿ ಕ್ಲಾಸಿಕಲ್ ನೃತ್ಯ ತರಬೇತುದಾರರಾಗಿ ಶ್ರೀಮತಿ ಚೈತ್ರ,ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಬೃಹತ್ ಕಾರ್ಮಿಕ ಜಾಗೃತಿ ಆಂದೋಲನವನ್ನು ಆಯೋಜಿಸುವ ಕುರಿತು ಸಮಾಲೋಚನ ಸಭೆ

Suddi Udaya

ಆ.19: ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಸಮಾರಂಭ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಡಾ| ಡಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಪ್ರಯುಕ್ತ ಗೌರವಾರ್ಪಣೆ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಗೆ ದಾನಿಗಳಿಂದ ಕೊಡುಗೆಗಳ ಹಸ್ತಾಂತರ

Suddi Udaya

ಡಿ.13-14: ಬಳಂಜ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

Suddi Udaya

ಮುಂಡಾಜೆ: ವಿಶ್ವ ಸ್ಕಾರ್ಫ್ ದಿನಾಚರಣೆ

Suddi Udaya
error: Content is protected !!