September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಸುತ್ತಿನ ವಾರ್ಡ್ ಸಭೆ

ಕಳಿಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯ ಪೂರ್ವಭಾವಿಯಾಗಿ ಕಳಿಯ ಗ್ರಾಮದ ಪ್ರಥಮ ಮತ್ತು ದ್ವಿತೀಯ ವಾರ್ಡ್ ನ ಪ್ರಥಮ ಸುತ್ತಿನ ವಾರ್ಡ್ ಸಭೆಯು ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ದಿವಾಕರ ಎಮ್ ಅಧ್ಯಕ್ಷತೆಯಲ್ಲಿ ಜರಗಿತು.

ಗ್ರಾಮಸ್ಥರು ವಿವಿಧ ಅಭಿವೃದ್ದಿ ವಿಷಯದ ಬಗ್ಗೆ ಚರ್ಚಿಸಿದರು. ಸತೀಶ್ ಭಂಡಾರಿ ನಾಳರವರು ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು ಹೊರಗಡೆಯಿಂದ ತ್ಯಾಜ್ಯ ತಂದು ಹಾಕುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮವಹಿಸಿ ದಂಡ ವಿಧಿಸುವುದು ಮತ್ತು ಸಿ ಸಿ ಟಿವಿ ಅಳವಡಿಸುವಂತೆ ತಿಳಿಸಿದರು.


ಸಭೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಬಿ, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಸದಸ್ಯರಾದ ಶ್ರೀಮತಿ ಸುಭಾಷಿಣಿ ಕೆ, ಅಬ್ದುಲ್ ಕರೀಮ್’, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಶ್ವೇತಾ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ಉಮೇಶ್ ಗೋವಿಂದೂರು, ಕುಂಟಿನಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಜಾತ, ಸಿಬ್ಬಂದಿಗಳಾದ ರವಿ ಎಚ್.,ಸುರೇಶ್ ಗೌಡ ಗ್ರಾಮಸ್ಥರು ಹಾಜರಿದ್ದರು.

Related posts

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

Suddi Udaya

ನಡ ಸರಕಾರಿ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಗಡಾಯಿಕಲ್ಲಿನಲ್ಲಿ ಕಾಣಿಸಿಕೊಂಡಬೆಂಕಿ

Suddi Udaya

ಉಜಿರೆ: ಶ್ರೀ.ಧ.ಮಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲಾ ವಾರ್ಷಿಕೋತ್ಸವ

Suddi Udaya

ವಿದ್ಯಾರ್ಥಿ ಕೀರ್ತನ್ ಕೈಚಳಕದಿಂದ ಸಾಸಿವೆಯಲ್ಲಿ ಮೂಡಿದ`ಭಗತ್ ಸಿಂಗ್’ ಚಿತ್ರ :ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ

Suddi Udaya
error: Content is protected !!