September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆಯಲ್ಲಿ ತಡರಾತ್ರಿ ತ್ಯಾಜ್ಯ ಎಸೆದವನಿಗೆ ಬಿತ್ತು ದಂಡ: ಪಂ.ಸದಸ್ಯರ, ಅಭಿವೃದ್ಧಿ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರ ತಡರಾತ್ರಿ ಕಾರ್ಯಾಚರಣೆ

ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ ನ ಗೇರುಕಟ್ಟೆ ಪೇಟೆಯ ರಸ್ತೆ ಬದಿಯ ಎಲ್ಲೆಂದರಲ್ಲಿ ರಾತ್ರಿ ತ್ಯಾಜ್ಯ ತಂದು ಹಾಕುತ್ತಿದ್ದರು.

ಗ್ರಾಮಸ್ಥರಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದ್ದು, ಪಂಚಾಯತ್ ನ ವಾರ್ಡ್ ಸಭೆ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ಹಾಕಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಿ 2 ದಿನಗಳಿಗೆ ಮೊದಲು ಸಿ.ಸಿ.ಟಿ.ವಿ ಅಳವಡಿಸಿ ದಂಡ ಹಾಕುವ ಫಲಕ ಹಾಕಿದ್ದರು.

ನಿನ್ನೆ ತಡರಾತ್ರಿ ಬೇರೆ ಗ್ರಾಮದ ಹೋಟೆಲ್ ಒಂದರಿಂದ ತಾಜ್ಯ ತಂದು ಬಿಸಾಡಲು ಬಂದಾಗ ತಡರಾತ್ರಿ ಪಿ ಡಿ ಓ ಸಿಸಿಟಿವಿ ನೋಡುತ್ತಿದ್ದರು ಅದಾಗಲೇ ನಾಳಕ್ಕೆ ರಸ್ತೆಯಾಗಿ ಹೋಗುತ್ತಿದ್ದ ಪಂ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನೋಡಿ ತ್ಯಾಜ್ಯ ಹಾಕುತ್ತಿದ್ದವನನ್ನು ದ್ವಿಚಕ್ರ ವಾಹನ ಸಮೇತ ಹಿಡಿದಿಟ್ಟು ಸದಸ್ಯರ ಗಮನಕ್ಕೆ ತಂದರು. ತಡರಾತ್ರಿ ತಕ್ಷಣ ಪಿ ಡಿ ಓ, ಪಂಚಾಯತ್ ಸದಸ್ಯರಾದ ಲತೀಪ್ ಪರಿಮರವರು ಇನ್ನೋರ್ವ ಸದಸ್ಯರಾದ ಅಬ್ದುಲ್ ಕರೀಮ್ ಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಹಾಗೂ ಮಾಜಿ ಪಂ ಅಧ್ಯಕ್ಷರು ಹಿಡಿದು ನಿಲ್ಲಿಸಿ ತಾಜ್ಯ ಬಿಸಾಡಲು ಬಂದವರಿಗೆ ಸ್ಥಳದಲ್ಲಿಯೇ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.

Related posts

ಬೆಳ್ತಂಗಡಿ: ಬಹುಭಾಷೆ ಕವಿಗೋಷ್ಠಿಯಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ

Suddi Udaya

ಅರಣ್ಯ ಇಲಾಖೆ ಬುಡಕಟ್ಟು ಸಮುದಾಯದ ಜೊತೆಗೆ ಸರ್ಕಾರವನ್ನು ಕೂಡ ವಂಚಿಸುತ್ತಿದೆ : ಹರೀಶ್ ಎಳನೀರ್

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕಿನ ಕೊಲ್ಲಿ,ದಿಡುಪೆ,ಮಿತ್ತಬಾಗಿಲು,ಮಲವಂತಿಗೆ,ಕೊಳಂಬೆ ಪ್ರದೇಶದಲ್ಲಿ ಭೀಕರ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ಹಠತ್ ಪ್ರವಾಹ

Suddi Udaya

ಉಜಿರೆ ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ

Suddi Udaya

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

Suddi Udaya
error: Content is protected !!